Site icon Vistara News

Education News : ಮೇ 29 ರಿಂದ ನೂತನ ಶೈಕ್ಷಣಿಕ ವರ್ಷ ಆರಂಭ; ಮೇ 31 ರಿಂದ ತರಗತಿಗಳು ಶುರು

Education News New Academic Year To Commence From May 29

ಬೆಂಗಳೂರು: 2023-24ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಪ್ರಕಾರ ಶಾಲೆಗಳು ಮೇ 31 ರಿಂದ ಆರಂಭವಾಗ ಬೇಕಾಗಿದ್ದು, ಶಾಲಾ ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸಿದೆ. ಮೇ 29 ಶಾಲೆಗಳ ಪ್ರಾರಂಭಕ್ಕೆ ಪೂರ್ವತಯಾರಿ ನಡೆಸಲಾಗುತ್ತದೆ (Education News) . ಮೇ 30 ರಂದು ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತದೆ. ಮೇ 31ರ ಬುಧವಾರದಿಂದ ತರಗತಿಗಳನ್ನು ಆರಂಭಿಸಲಾಗುತ್ತದೆ.

ಕಳೆದ ಮಾರ್ಚ್‌ 30 ರಂದು ಶಾಲಾ ಶಿಕ್ಷಣ ಇಲಾಖೆಯು ಶೈಕ್ಷಣಿಕ (Education News) ವೇಳಾಪಟ್ಟಿ ಪ್ರಕಟಿಸಿದ್ದು, ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವಂತೆ ಆಯುಕ್ತರು ಸೂಚನೆ ನೀಡಿದ್ದರು.

2023-24ನೇ ಸಾಲಿನ ಮೊದಲನೇ ಶೈಕ್ಷಣಿಕ ಅಧಿವೇಶನವು ಮೇ 29 ರಿಂದ ಆರಂಭಗೊಂಡು ಅಕ್ಟೋಬರ್ 7 ರವರಗೆ ನಡೆಯಲಿದೆ. ಎರಡನೇ ಶೈಕ್ಷಣಿಕ (Education News) ಅಧಿವೇಶನವು ಅಕ್ಟೋಬರ್ 25 ರಿಂದ ಆರಂಭವಾಗಿ 2024 ರ ಏಪ್ರಿಲ್ 10ಕ್ಕೆ ಮುಕ್ತಾಯವಾಗಲಿದೆ.

ದಸರಾ ರಜೆಯು (ಮಧ್ಯಂತರ ರಜೆ) 2023ರ ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ ಇರಲಿದೆ. ಮುಂದಿನ ವರ್ಷದ ಬೇಸಿಗೆ ರಜೆಯನ್ನು 2024ರ ಏಪ್ರಿಲ್ 11 ರಿಂದ ಮೇ 28 ರ ವರೆಗೆ ನೀಡಲಾಗುತ್ತದೆ.

ಇಲಾಖೆ ಹೊರಡಿಸಿದ ಶೈಕ್ಷಣಿಕ ಮಾರ್ಗದರ್ಶಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ

ಶಾಲಾ ಪ್ರಾರಂಭೋತ್ಸವವನ್ನು ಯಾಂತ್ರಿಕವಾಗಿ ಪರಿಗಣಿಸದೆ ಅತ್ಯಂತ ಉತ್ಸಾಹದಿಂದ ಆಯೋಜಿಸಬೇಕೆಂದು ಇಲಾಖೆಯು ಸೂಚಿಸಿದ್ದು, ಶಿಕ್ಷಕರು, ಎಸ್‌.ಡಿ.ಎಂ.ಸಿ ಹಾಗೂ ಪೋಷಕರು ಸೇರಿ ಶಾಲಾ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಬೇಕೆಂದು ತಿಳಿಸಿದೆ.

ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಶಾಲಾ (Education News) ವಾತಾವರಣವನ್ನು ಆಕರ್ಷಣೀಯವಾಗಿಸಬೇಕು. ಎರಡನೇ ತರಗತಿಯಿಂದ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕು. ಹಾಜರಾಗದಿರುವ ಮಕ್ಕಳನ್ನು ಶಾಲೆಗೆ ಕರೆತರುವಂತೆ ಹಾಜರಾಗಿರುವ ಮಕ್ಕಳನ್ನು ಪ್ರೇರೇಪಿಸಬೇಕು. ಅಕ್ಷರ ದಾಸೋಹವನ್ನು ಸಿಹಿ ಊಟದೊಂದಿಗೆ ಆರಂಭಿಸಬೇಕೆಂದೂ ಇಲಾಖೆ ಶಾಲೆಗಳಿಗೆ ಸೂಚಿಸಿದೆ. ಮೇ 31ರಿಂದ ಜೂನ್‌ 03ರ ವರೆಗೆ ಶಾಲಾ ದಾಖಲಾತಿ ಆಂದೋಲನ ನಡೆಸಲಾಗುತ್ತದೆ.

ಸಾಫಲ್ಯ ಪರೀಕ್ಷೆಯ ದಿನಾಂಕವೂ ನಿಗದಿ!

ಶಿಕ್ಷಕರಿಗೆ ಕಳೆದ ಸಾಲಿನಲ್ಲಿ ನಡೆಸಿದ ಮೌಲ್ಯಾಂಕನ ವಿಶ್ಲೇಷಣೆ ಪರೀಕ್ಷೆಯ ವರದಿ ಒದಗಿಸಲಾಗುತ್ತದೆ. ಯಾವೆಲ್ಲಾ ವಿಷಯದಲ್ಲಿ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ. ಇದನ್ನು ಅವಲೋಕಿಸಿ, ವಿಶ್ಲೇಷಿಸಿ ಇದಕ್ಕೆ ಪೂರಕವಾಗಿ ನೈದಾನಿಕ ಪರೀಕ್ಷೆ ಹಮ್ಮಿಕೊಂಡು ಫಲಿತಾಂಶ ವಿಶ್ಲೇಷಿಸಬೇಕೆಂದು ಶಿಕ್ಷಕರಿಗೆ ಸೂಚಿಸಲಾಗಿದೆ.

1ರಿಂದ 10ನೇ ತರಗತಿಯವರೆಗೂ ಪೂರ್ವ ಪರೀಕ್ಷೆಯನ್ನು ನಡೆಸಿ, ವಿಶ್ಲೇಷಿಸಿ, ಕಲಿಕಾ ಹಿನ್ನಡೆ ಗುರುತಿಸಿ ಸೂಕ್ತ ರೀತಿಯಲ್ಲಿ ಹೇಳಿಕೊಡಬೇಕು. 1 ರಿಂದ3 ನೇ ತರಗತಿಯವರೆಗಿನ ಮಕ್ಕಳಿಗೆ ದಿನಾಂಕ: 20-06-2023ರಂದು 4 ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ದಿನಾಂಕ:13-06-2023ರಂದು ಸಾಫಲ್ಯ ಪರೀಕ್ಷೆ ನಡೆಸಿ. ಅವರು ಪಡೆದಿರುವ ಅಂಕಗಳನ್ನು ವಿಶ್ಲೇಷಿಸಿ ನಿರಂತರ ಪರಿಹಾರ ಬೋಧನೆಗೆ (remedial teaching) ಅಗತ್ಯ ಮಕ್ಕಳನ್ನು ಗುರುತಿಸಬೇಕೆಂದು ಸೂಚಿಸಲಾಗಿದೆ.

ಶಾಲಾ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ;

ಇದನ್ನೂ ಓದಿ : ಶಿಕ್ಷಕರಿಗೂ ಬಂತು ಡ್ರೆಸ್‌ಕೋಡ್;‌ ಟೀಚರ್‌ಗಳು ಇನ್ನು ಜೀನ್ಸ್‌, ಟಿ-ಶರ್ಟ್‌ ಧರಿಸಿ ಶಾಲೆಗೆ ಹೋಗುವಂತಿಲ್ಲ

Exit mobile version