Site icon Vistara News

Education News | 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ಪೋಷಕರು, ಖಾಸಗಿ ಶಾಲೆಗಳ ಮಿಶ್ರ ಪ್ರತಿಕ್ರಿಯೆ

Education News public exam

ಬೆಂಗಳೂರು: ಈ ವರ್ಷದಿಂದಲೇ (2022-23 ಸಾಲಿನಿಂದ) ರಾಜ್ಯದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ನೆಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ (Education News) ವ್ಯಕ್ತವಾಗಿದೆ.

ಕೆಲ ಪೋಷಕರು ಇಲಾಖೆಯ ಈ ತೀರ್ಮಾನವನ್ನು ಸ್ವಾಗತಿಸಿದ್ದರೆ, ಇನ್ನು ಕೆಲವರು ತಡವಾಗಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿ ರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ, ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸಾ) ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ವಿರೋಧ ವ್ಯಕ್ತಪಡಿಸಿವೆ.

ಇದ್ದಕ್ಕಿದ್ದ ಹಾಗೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿರುವುದು ಏಕೆ ಎಂದು ಕೆಲವು ಪೋಷಕರು ಪ್ರಶ್ನಿಸುತ್ತಿದ್ದು, “ಈ ವಾರ್ಷಿಕ ಪರೀಕ್ಷೆ ದುಡ್ಡು ಮಾಡುವ ಹುನ್ನಾರʼʼ ಎಂದು ಆರೋಪಿಸಿದ್ದಾರೆ. ಈ ರೀತಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವುದು ಅವೈಜ್ಞಾನಿಕ ಹಾಗೂ ಶಿಕ್ಷಣದ (Education News) ಮೂಲ ಉದ್ದೇಶಕ್ಕೆ ವಿರುದ್ಧವಾದದು. ಶಿಕ್ಷಣ ಎಂಬುದು ಕಲಿಕೆಗಾಗಿ ಕಲಿಸುವುದೇ ವಿನಃ ಪರೀಕ್ಷೆಗಾಗಿ ಕಲಿಕೆ ಅಲ್ಲ ಎಂದು ಪೋಷಕರ ಸಮನ್ವಯ ಸಮಿತಿಯ ಅಧ್ಯಕ್ಷ ಯೋಗಾನಂದ ಹೇಳಿದ್ದಾರೆ.

ಇನ್ನೂ ಐದನೇ ತರಗತಿ ಓದುವಾಗಲೇ ಪಬ್ಲಿಕ್‌ ಪರೀಕ್ಷೆ (Education News) ನಡೆಸಿದರೆ ಮಕ್ಕಳು ಶಾಲೆಗಳನ್ನು ಬಿಡುವಂತಹ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಇದು ಮಕ್ಕಳ ಕಲಿಕೆಯ ಮೇಲೆ ಒತ್ತಡ ಸೃಷ್ಟಿಸಲಿದೆ ಎಂದು ವಿವರಿಸಿದ್ದಾರೆ.

ಕೇಂದ್ರ ಹಾಗೂ ಇತರೆ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ (Education News) ಇಲ್ಲದ ಪರೀಕ್ಷಾ ಪದ್ಧತಿಯನ್ನು ಕೇವಲ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೆ ವಿಧಿಸುವುದು ಸರಿಯಲ್ಲ. ಈ ರೀತಿಯ ಪರೀಕ್ಷೆಗಳಿಂದ ಕಲಿಯುವ ವಿದ್ಯಾರ್ಥಿಗಳಲ್ಲಿ ಕೀಳರಿಮೆ, ಅಘಾತ ಹಾಗೂ ಒತ್ತಡ, ಉಂಟಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆತಿಲ್ಲ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. (Education News) ಮೂಲಭೂತ ಸೌಕರ್ಯಗಳಿಲ್ಲ. ಸರಿಯಾದ ಸಮಯದಲ್ಲಿ ಪುಸ್ತಕ ಮತ್ತು ಪಠ್ಯ ಸಾಮಗ್ರಿಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗುಣಮಟ್ಟದ ಕಲಿಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಪೋಷಕರು ಪರಿಸ್ಥಿತಿ ಹೀಗಿರುವಾಗ ಬೋರ್ಡ್ ಪರೀಕ್ಷೆ ಜಾರಿಗೆ ತಂದು ಮಕ್ಕಳ ಮೇಲೆ ಒತ್ತಡ ಹೇರುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ವರ್ಷ ವಾರ್ಷಿಕ ಪರೀಕ್ಷೆ ಕೈಬಿಡುವಂತೆ ಒತ್ತಾಯಿಸಿದ್ದು, ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ರೀತಿಯ ಪರೀಕ್ಷಾ ಪದ್ಧತಿಯನ್ನು ಬಹುತೇಕ ಪೋಷಕರು ಸ್ವಾಗತಿಸಿದ್ದಾರೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಗುಣಮಟ್ಟವನ್ನು ಪ್ರತಿ ಹಂತದಲ್ಲಿಯೂ ಖಾತ್ರಿ (Education News) ಪಡಿಸಿಕೊಳ್ಳಬೇಕಾಗಿರುವುದು ಇಂದಿನ ತುರ್ತು. ಈ ನಿಟ್ಟಿನಲ್ಲಿ ಪಬ್ಲಿಕ್‌ ಪರೀಕ್ಷೆಯು ಸೂಕ್ತವಾದ ನಡೆ ಎಂದು ಎಂಟನೇ ತರಗತಿಯ ವಿದ್ಯಾರ್ಥಿ ಕೆ. ಮಲ್ಲಿಕಾರ್ಜುನ್‌ ಅವರ ತಂದೆ ಎಲ್‌. ಆರ್‌. ಕೃಷ್ಣಕುಮಾರ್‌ ಹೇಳಿದ್ದಾರೆ.

2019ರಲ್ಲಿಯೂ ನಿರ್ಧಾರವಾಗಿತ್ತು !
2019ರಲ್ಲಿ ಸುರೇಶ್ ಕುಮಾರ್ ಸಚಿವರಾಗಿದ್ದಾಗ 7ನೇ ತರಗತಿಗೆ ಇದೇ ರೀತಿಯಾಗಿ ಪಬ್ಲಿಕ್‌ ಪರೀಕ್ಷೆ ನಡೆಸಲು ತೀರ್ಮಾನಿಸಿ, ಈ ಬಗ್ಗೆ ಪ್ರಕಟಿಸಿದ್ದರು. ಹಲವು ಸಮೀಕ್ಷೆಗಳು ಮಕ್ಕಳ ಕಲಿಕಾ ಮಟ್ಟ ಕುಸಿಯುತ್ತಿರುವುದನ್ನು ಎತ್ತಿ ಹಿಡಿದಿರುವ ಕಾರಣ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ಆದರೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಈ ನಿರ್ಧಾರದಿಂದ ಆಗಿನ ಸರ್ಕಾರ ಹಿಂದೆ ಸರಿದಿತ್ತು.

ಇದು ಪುರಾತನ ಪದ್ಧತಿ ಎಂದ ರೂಪ್ಸಾ
ಜಗತ್ತು ಪರೀಕ್ಷೆಗಳಿಂದ ದೂರ ಉಳಿದು, ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಮುಂದಾಗಿದೆ. ಇದರಿಂದ ಸರ್ಕಾರ ಪರೀಕ್ಷಾ ಪದ್ಧತಿ ಎಂಬ ಪುರಾತನ ಪದ್ಧಿತಿಗೆ (Education News) ಮರಳಿದಂತೆ ಕಾಣುತ್ತಿದೆ ಎಂದು ರೂಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಆರ್‌ಟಿಇ ಕಾಯ್ದೆ ಉಲ್ಲೇಖಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಆದರೆ ಅದೇ ಕಾಯ್ದೆಯಲ್ಲಿರುವಂತೆ ಶಿಕ್ಷಣದ ಗುಣಮಟ್ಟ ಒದಗಿಸಲು ಏಕೆ ಕ್ರಮತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವರ್ಷ ಪರೀಕ್ಷೆ ಬೇಡ ಎಂದ ಕ್ಯಾಮ್ಸ್‌
5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ (Education News) ನಡೆಸುವ ಶಿಕ್ಷಣ ಇಲಾಖೆಯ ಕ್ರಮವನ್ನು ಸ್ವಾಗತಿಸಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, “ಈ ವರ್ಷ ಪಬ್ಲಿಕ್‌ ಪರೀಕ್ಷೆ ಬೇಡ. ಅಗತ್ಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಮುಂದಿನ ವರ್ಷದಿಂದ ಇದನ್ನು ಜಾರಿಗೊಳಿಸುವುದು ಸೂಕ್ತʼʼ ಎಂದಿದೆ.

“ಈ ರೀತಿಯ ಪರೀಕ್ಷೆಗಳಿಂದ ಮಕ್ಕಳಲ್ಲಿ ಕಲಿಕೆಯ ಕುರಿತು ಬದ್ಧತೆ ಮೂಡಲು ಅನುಕೂಲವಾಗಲಿದೆ. ಇದು ಮಕ್ಕಳು, ಪೋಷಕರು, ಶಿಕ್ಷಕರು ಒಪ್ಪುವಂಥದ್ದು. ಆದರೆ ಕಲಿಕೆಗೆ ಅವಕಾಶ ಕೊಟ್ಟು, ಮಕ್ಕಳಿಗೆ ಹೊರೆ ಆಗದಂತೆ ಸಹಭಾಗಿತ್ವದಲ್ಲಿ ಪರೀಕ್ಷೆ ನಡೆಸಬೇಕುʼʼ (Education News) ಎಂದು ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ | Education News | ಈ ವರ್ಷದಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

Exit mobile version