Site icon Vistara News

Education News : ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ನಿವಾರಣೆಗೆ ಕ್ರಮ; ನೂತನ ಶಿಕ್ಷಕರ ನಿಯೋಜನೆ

Education news primary school teachers appointment letter

ಬೆಂಗಳೂರು: 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ (Government Primary School) ಖಾಲಿ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಪದವೀಧರ ಪ್ರಾಥಮಿಕ ಶಿಕ್ಷಕರು (Graduate Primary Teachers) (6 ರಿಂದ 8ನೇ ತರಗತಿ) ಹುದ್ದೆಗೆ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಮಾಡುವ ಸಂಬಂಧ ಶಿಕ್ಷಣ ಇಲಾಖೆ (Department of Education) ಮಹತ್ವದ ಆದೇಶವನ್ನು ನೀಡಿದೆ. ಆದರೆ, ಈ ನಿಯೋಜನೆ ತಾತ್ಕಾಲಿಕ ಕ್ರಮ ಎಂದೂ ಸಹ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಶಿಕ್ಷಣ (Education News) ಕ್ಷೇತ್ರಕ್ಕೆ ಬಲ ನೀಡಲು ಮುಂದಾಗಲಾಗಿದೆ,

ಈ ಮೊದಲು ಕೆಲವೊಂದು ಜಿಲ್ಲೆಗಳಲ್ಲಿ “ಸಿ” ವಲಯದಲ್ಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದ ಕಾರಣ, ಅಂತಹ ಶಿಕ್ಷಕರಿಗೆ ಆಯಾ ವ್ಯಾಪ್ತಿಯ ಉಪನಿರ್ದೇಶಕರ ಕಚೇರಿ (ಆಡಳಿತ) / ಡಯಟ್ ಕಚೇರಿಯನ್ನು ಕೌನ್ಸೆಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರು ಉಪನಿರ್ದೇಶಕರ ಕಚೇರಿ (ಆಡಳಿತ)ಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಶಿಕ್ಷಕರನ್ನು ತಕ್ಷಣವೇ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿನ ಖಾಲಿ ಹುದ್ದೆಗಳಿರುವ ಒಂದು ಪ್ರಾಥಮಿಕ ಶಾಲೆಗಳಿಗೆ ನಿಯೋಜಿಸುವಂತೆ ಆದೇಶಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲವು ಅಂಶಗಳನ್ನು ಸೂಚಿಸಿದೆ.

ಆದೇಶದಲ್ಲಿ ನೀಡಲಾಗಿರುವ ಸೂಚನೆ ಇಂತಿದೆ

ಇದನ್ನೂ ಓದಿ: Exam Scam : ಸರ್ಕಾರಿ ನೇಮಕಾತಿ ಅಕ್ರಮ ತಡೆಯಲು ವಿಧೇಯಕ; ಅಧಿವೇಶನದಲ್ಲಿ ಮಂಡನೆ

Exit mobile version