ಗೇಟ್ 2023 (GATE 2023-Graduate Aptitude Test in Engineering)ರ ನೋಂದಣಿ ಪ್ರಕ್ರಿಯೆ ಇಂದಿನಿಂದ (2022ರ ಆಗಸ್ಟ್ 30) ಆರಂಭವಾಗಲಿದೆ. gate.iitk.ac.in ವೆಬ್ಸೈಟ್ನಲ್ಲಿ ಅಪ್ಲಿಕೇಶನ್ ಲಿಂಕ್ ಸಿಗಲಿದೆ. ಪರೀಕ್ಷೆ ಬರೆಯಲು ಇಚ್ಛಿಸುವವರು ಇದೇ ವೆಬ್ಸೈಟ್ಗೆ ಹೋಗಿ, ಆನ್ಲೈನ್ ಮೂಲಕ ಅರ್ಜಿ ತುಂಬ ಬಹುದಾಗಿದೆ. ಹಾಗೇ, ಸೆಪ್ಟೆಂಬರ್ 30ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಅಂದಹಾಗೇ, ಗೇಟ್ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಎಂಜಿನಿಯರಿಂಗ್/ತಂತ್ರಜ್ಞಾನ/ಆರ್ಕಿಟೆಕ್ಚರ್/ಸೈನ್ಸ್/ಕಾಮರ್ಸ್ ಅಥವಾ ಆರ್ಟ್ಸ್ -ಯಾವುದೇ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು ಅಥವಾ ಯಾವುದೇ ಪದವಿ ಪೂರ್ವ ಕೋರ್ಸ್ನ ಕೊನೇ ವರ್ಷದಲ್ಲಿ ಇರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
1. gate.iitkgp.ac.in ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ
2. Login ಎಂಬಲ್ಲಿ ಕ್ಲಿಕ್ ಮಾಡಿ, ಒಂದು ಹೊಸ ಯೂಸರ್ ಐಡಿ ಮತ್ತು ಪಾಸ್ವರ್ಡ್ನ್ನು ಸೃಷ್ಟಿಸಿಕೊಳ್ಳಿ.
3. ಅದಾದ ನಂತರ ನೀವು ಗೇಟ್ ಪರೀಕ್ಷೆ ಅರ್ಜಿಯನ್ನು ತುಂಬಬಹುದಾಗಿದೆ.
4. ಈ ಅರ್ಜಿಯ ಜತೆ ಅಲ್ಲಿ ಕೇಳಲಾದ ಎಲ್ಲ ದಾಖಲೆಗಳನ್ನೂ ನೀಡಬೇಕು. ನಿಮ್ಮ ಫೋಟೋ, ಸಹಿಗಳನ್ನೆಲ್ಲ ಸ್ಕ್ಯಾನ್ ಮಾಡಿ ಸಲ್ಲಿಸಬೇಕು.
5. ಅರ್ಜಿಯ ಶುಲ್ಕವನ್ನೂ ತುಂಬಿ. ಮತ್ತು ಕೊನೇದಾಗಿ ಸಬ್ಮಿಟ್ ಮಾಡಿ. ನಿಮ್ಮ ಅರಿವಿಗೆ ಒಂದು ಪ್ರಿಂಟ್ ಕಾಪಿ ತೆಗೆದಿಟ್ಟುಕೊಳ್ಳಿ.
ಗೇಟ್ ಪರೀಕ್ಷೆ ಯಾವಾಗ?
ಗೇಟ್ ಪರೀಕ್ಷೆ 2023ರ 4, 5, 11 ಮತ್ತು 12ರಂದು ನಡೆಯಲಿದೆ. ಹಾಗೇ, ಪರೀಕ್ಷೆಯ ಪ್ರವೇಶ ಪತ್ರಿಕೆ ಜನವರಿ 3ರಂದು ಬಿಡುಗಡೆಯಲಾಗಲಿದೆ. ಅರ್ಜಿ ತುಂಬಲು ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ. ಅದನ್ನು ಅಗತ್ಯ ಬಿದ್ದರೆ ಅಕ್ಟೋಬರ್ 7ರವರೆಗೆ ವಿಸ್ತರಿಸಲಾಗುವುದು. 7 ರ ನಂತರ ಸಲ್ಲಿಕೆಯಾದ ಅರ್ಜಿಗಳು ಪರಿಗಣನೆಗೆ ಬರುವುದಿಲ್ಲ.
ಇದನ್ನೂ ಓದಿ: KPTCL Recruitment 2022 | ಪರೀಕ್ಷೆಯ ಕೀ ಉತ್ತರ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ