GATE 2023 | ಗೇಟ್​ ಪರೀಕ್ಷೆ ನೋಂದಣಿ ಇಂದಿನಿಂದ ಪ್ರಾರಂಭ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ - Vistara News

ಶಿಕ್ಷಣ

GATE 2023 | ಗೇಟ್​ ಪರೀಕ್ಷೆ ನೋಂದಣಿ ಇಂದಿನಿಂದ ಪ್ರಾರಂಭ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು, ಎಸ್​ಸಿ/ಎಸ್​ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳು 850 ರೂ. ಶುಲ್ಕ ಕೊಡಬೇಕು. ಹಾಗೇ, ಇನ್ನಿತರ ವರ್ಗದವರೆಲ್ಲ 1700 ರೂಪಾಯಿ ನೀಡಬೇಕು.

VISTARANEWS.COM


on

GATE
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗೇಟ್​ 2023 (GATE 2023-Graduate Aptitude Test in Engineering)ರ ನೋಂದಣಿ ಪ್ರಕ್ರಿಯೆ ಇಂದಿನಿಂದ (2022ರ ಆಗಸ್ಟ್​ 30) ಆರಂಭವಾಗಲಿದೆ. gate.iitk.ac.in ವೆಬ್​ಸೈಟ್​​ನಲ್ಲಿ ಅಪ್ಲಿಕೇಶನ್​​ ಲಿಂಕ್​ ಸಿಗಲಿದೆ. ಪರೀಕ್ಷೆ ಬರೆಯಲು ಇಚ್ಛಿಸುವವರು ಇದೇ ವೆಬ್​ಸೈಟ್​​ಗೆ ಹೋಗಿ, ಆನ್​​ಲೈನ್​ ಮೂಲಕ ಅರ್ಜಿ ತುಂಬ ಬಹುದಾಗಿದೆ. ಹಾಗೇ, ಸೆಪ್ಟೆಂಬರ್​ 30ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಅಂದಹಾಗೇ, ಗೇಟ್​ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಎಂಜಿನಿಯರಿಂಗ್​/ತಂತ್ರಜ್ಞಾನ/ಆರ್ಕಿಟೆಕ್ಚರ್/ಸೈನ್ಸ್​/ಕಾಮರ್ಸ್​ ಅಥವಾ ಆರ್ಟ್ಸ್​ -ಯಾವುದೇ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು ಅಥವಾ ಯಾವುದೇ ಪದವಿ ಪೂರ್ವ ಕೋರ್ಸ್​​ನ ಕೊನೇ ವರ್ಷದಲ್ಲಿ ಇರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
1. gate.iitkgp.ac.in ಅಧಿಕೃತ ವೆಬ್​ಸೈಟ್​ಗೆ ಭೇಟಿ ಕೊಡಿ
2. Login ಎಂಬಲ್ಲಿ ಕ್ಲಿಕ್​ ಮಾಡಿ, ಒಂದು ಹೊಸ ಯೂಸರ್​ ಐಡಿ ಮತ್ತು ಪಾಸ್​​ವರ್ಡ್​ನ್ನು ಸೃಷ್ಟಿಸಿಕೊಳ್ಳಿ.
3. ಅದಾದ ನಂತರ ನೀವು ಗೇಟ್​ ಪರೀಕ್ಷೆ ಅರ್ಜಿಯನ್ನು ತುಂಬಬಹುದಾಗಿದೆ.
4. ಈ ಅರ್ಜಿಯ ಜತೆ ಅಲ್ಲಿ ಕೇಳಲಾದ ಎಲ್ಲ ದಾಖಲೆಗಳನ್ನೂ ನೀಡಬೇಕು. ನಿಮ್ಮ ಫೋಟೋ, ಸಹಿಗಳನ್ನೆಲ್ಲ ಸ್ಕ್ಯಾನ್​ ಮಾಡಿ ಸಲ್ಲಿಸಬೇಕು.
5. ಅರ್ಜಿಯ ಶುಲ್ಕವನ್ನೂ ತುಂಬಿ. ಮತ್ತು ಕೊನೇದಾಗಿ ಸಬ್​ಮಿಟ್​ ಮಾಡಿ. ನಿಮ್ಮ ಅರಿವಿಗೆ ಒಂದು ಪ್ರಿಂಟ್ ಕಾಪಿ ತೆಗೆದಿಟ್ಟುಕೊಳ್ಳಿ.

ಗೇಟ್​ ಪರೀಕ್ಷೆ ಯಾವಾಗ?
ಗೇಟ್​ ಪರೀಕ್ಷೆ 2023ರ 4, 5, 11 ಮತ್ತು 12ರಂದು ನಡೆಯಲಿದೆ. ಹಾಗೇ, ಪರೀಕ್ಷೆಯ ಪ್ರವೇಶ ಪತ್ರಿಕೆ ಜನವರಿ 3ರಂದು ಬಿಡುಗಡೆಯಲಾಗಲಿದೆ. ಅರ್ಜಿ ತುಂಬಲು ಸೆಪ್ಟೆಂಬರ್​ 30ರವರೆಗೆ ಅವಕಾಶ ನೀಡಲಾಗಿದೆ. ಅದನ್ನು ಅಗತ್ಯ ಬಿದ್ದರೆ ಅಕ್ಟೋಬರ್​ 7ರವರೆಗೆ ವಿಸ್ತರಿಸಲಾಗುವುದು. 7 ರ ನಂತರ ಸಲ್ಲಿಕೆಯಾದ ಅರ್ಜಿಗಳು ಪರಿಗಣನೆಗೆ ಬರುವುದಿಲ್ಲ.

ಇದನ್ನೂ ಓದಿ: KPTCL Recruitment 2022 | ಪರೀಕ್ಷೆಯ ಕೀ ಉತ್ತರ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IISc Bangalore: ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಬೆಂಗಳೂರಿನ ಐಐಎಸ್‌ಸಿ; ರಾಜ್ಯದ ಹಲವು ಸಂಸ್ಥೆಗಳಿಗೆ ಗರಿ

IISc Bangalore: ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಬೆಂಗಳೂರಿನ ಐಐಎಸ್‌ಸಿ; ರಾಜ್ಯದ ಹಲವು ಸಂಸ್ಥೆಗಳಿಗೆ ಗರಿಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಬೆಂಗಳೂರು) ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂದು ಶ್ರೇಯಾಂಕ ಪಡೆದಿದೆ. ದೇಶದ ಟಾಪ್‌ ಐದು ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗಳಲ್ಲಿ ಐಐಎಸ್‌ಸಿ ಅಗ್ರಸ್ಥಾನದಲ್ಲಿದೆ.

VISTARANEWS.COM


on

IISc Bangalore
Koo

ಹೊಸದಿಲ್ಲಿ: ಕೇಂದ್ರ ಪ್ರಕಟಿಸಿರುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science, IISC Bangalore) ದೇಶದ ಅತ್ಯುತ್ತಮ ಯೂನಿವರ್ಸಿಟಿ (Best University) ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇಂದು ಕೇಂದ್ರ ಶಿಕ್ಷಣ ಸಚಿವಾಲಯ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) 2024 ಅನ್ನು ಪ್ರಕಟಿಸಿದ್ದು, ಇದರಲ್ಲಿನ ವಿವಿಧ ವಿಭಾಗಗಳಲ್ಲಿ ಬೆಂಗಳೂರಿನ ಹಲವು ಸಂಸ್ಥೆಗಳು ಸ್ಥಾನ ಪಡೆದಿವೆ.

ರ‍್ಯಾಂಕಿಂಗ್‌ಗಳ ಒಂಬತ್ತನೇ ಆವೃತ್ತಿಯನ್ನು ಪ್ರಕಟಿಸಲಾಗಿದ್ದು, ಇದನ್ನು ಅಧಿಕೃತ NIRF ವೆಬ್‌ಸೈಟ್ nirfindia.orgನಲ್ಲಿ ನೋಡಬಹುದು. NIRF ಶ್ರೇಯಾಂಕವು ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮತ್ತು ಎಂಜಿನಿಯರಿಂಗ್, ನಿರ್ವಹಣೆ ಮತ್ತು ವೈದ್ಯಕೀಯ ಶಿಕ್ಷಣದಂತಹ ವಿವಿಧ ವಿಶೇಷ ಕ್ಷೇತ್ರಗಳನ್ನು ಒಳಗೊಂಡಂತೆ 13 ವಿಭಾಗಗಳನ್ನು ಒಳಗೊಂಡಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಬೆಂಗಳೂರು) ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂದು ಶ್ರೇಯಾಂಕ ಪಡೆದಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ದೆಹಲಿ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನಗಳಲ್ಲಿವೆ. ದೇಶದ ಟಾಪ್‌ ಐದು ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗಳಲ್ಲಿ ಐಐಎಸ್‌ಸಿ ಅಗ್ರಸ್ಥಾನದಲ್ಲಿದೆ. ಟಾಪ್‌ ಟೆನ್‌ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಟಿ ಮದ್ರಾಸ್‌ ನಂತರ ಐಐಎಸ್‌ಸಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ನಾವೀನ್ಯತೆಯ ವಿಭಾಗದಲ್ಲಿಯೂ ಐಐಎಸ್‌ಸಿ 4ನೇ ಸ್ಥಾನದಲ್ಲಿದೆ.

ಮ್ಯಾನೇಜ್‌ಮೆಂಟ್‌ ರ‍್ಯಾಂಕಿಂಗ್‌ನಲ್ಲಿ ಐಐಎಂ ಬೆಂಗಳೂರು 2ನೇ ಸ್ಥಾನದಲ್ಲಿದೆ. ದೇಶದ ಟಾಪ್‌ 5 ಮೆಡಿಕಲ್‌ ಕಾಲೇಜುಗಳಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ 4ನೇ ಸ್ಥಾನದಲ್ಲಿದೆ. ಟಾಪ್‌ ಕಾನೂನು ಕಾಲೇಜುಗಳಲ್ಲಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ ಮೊದಲ ಸ್ಥಾನದಲ್ಲಿದೆ.

ಮೈಸೂರು ಅರಸರ ಅಧಿಕಾರ ಮೊಟಕು ಮಾಡಲು ಮುಂದಾದ ಕಾಯಿದೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟ (Mysore Chamundi Hill) ಹಾಗೂ ಚಾಮುಂಡೇಶ್ವರಿ ದೇವಾಲಯದ (Chamundeshwari Temple) ದೇವಸ್ಥಾನದ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ರಾಜಮನೆತನದವರ (Mysore dynasty) ಅಧಿಕಾರ ಮೊಟಕುಗೊಳಿಸುವ ‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ-2024’ ಜಾರಿಗೊಳಿಸದಂತೆ ರಾಜ್ಯ ಸರ್ಕಾರಕ್ಕೆ (Karnataka Govt) ನಿರ್ದೇಶಿಸಿ ಹೈಕೋರ್ಟ್‌ (Karnataka High Court) ಮಧ್ಯಂತರ ಆದೇಶ ನೀಡಿದೆ.

ರಾಜ್ಯ ಸರ್ಕಾರ ಜಾರಿ ಮಾಡಿರುವ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-2024ರ ಹಲವು ಸೆಕ್ಷನ್‌ಗಳನ್ನು ಪ್ರಶ್ನಿಸಿ ಮೈಸೂರು ಒಡೆಯರ್‌ ವಂಶಸ್ಥೆ ಪ್ರಮೋದಾದೇವಿ ಒಡೆಯರ್‌ (Pramodadevi wadiyer) ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠ, ಕಾಯಿದೆಯನ್ನು ಆ.22ರವರೆಗೆ ಜಾರಿಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮೈಸೂರು ಅರಮನೆ ಮುಜರಾಯಿ ಸಂಸ್ಥೆಯ ಮುಖ್ಯಸ್ಥರೂ ಆದ ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿ ಮಾಡಿದೆ.

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯ ಪ್ರಕಾರ, ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ, ದೇವಸ್ಥಾನದ ಆಡಳಿತ ನಿರ್ವಹಣೆ, ಪೂಜಾ ಕೈಂಕರ್ಯ ನಡೆಸಲು ಪ್ರಾಧಿಕಾರದ ರಚನೆ ಮಾಡಲಾಗುತ್ತದೆ. ಆ ಪ್ರಾಧಿಕಾರದ ರಚನೆಯ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಸೇರಿರುತ್ತದೆ. ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಲಿದ್ದಾರೆ. ಪದಾಧಿಕಾರಿಗಳಾಗಿ ಸ್ಥಳೀಯ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳು ಇರಲಿದ್ದಾರೆ.

ಇದನ್ನೂ ಓದಿ: NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್;‌ ಇಲ್ಲಿದೆ ಪೂರ್ಣ ಪಟ್ಟಿ

Continue Reading

ಶಿಕ್ಷಣ

NIRF 2024 Rank: ದೇಶದ ಟಾಪ್‌ 10 ಮೆಡಿಕಲ್‌ ಕಾಲೇಜುಗಳಲ್ಲಿ ನಿಮ್ಹಾನ್ಸ್‌ ನಂ.4; ಫಾರ್ಮಸಿಯಲ್ಲಿ ರಾಜ್ಯದ 2 ಕಾಲೇಜುಗಳಿಗೆ ಸ್ಥಾನ

ಎನ್‌ಐಆರ್‌ಎಫ್ 2024ರ (NIRF 2024 Rank) ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದ್ದು, ಹಿಂದಿನ ವರ್ಷದ ಶ್ರೇಯಾಂಕದಂತೆಯೇ ಈ ಬಾರಿಯೂ ಏಮ್ಸ್ ದೆಹಲಿಯು ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಉಳಿದ ಯಾವ ಸಂಸ್ಥೆಗಳು ವೈದ್ಯಕೀಯ, ದಂತ ಕಾಲೇಜುಗಳು ಮತ್ತು ಔಷಧಾಲಯಗಳು ಟಾಪ್ ಹತರರೊಳಗಿನ ಸ್ಥಾನದಲ್ಲಿದೆ ಎನ್ನುವ ಕುರಿತು ಮಾಹಿತಿಯಿ ಇಲ್ಲಿದೆ.

VISTARANEWS.COM


on

By

NIRF 2024 Rank
Koo

ದೆಹಲಿಯಲ್ಲಿರುವ ಏಮ್ಸ್ (AIIMS Delhi) ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜು ಎಂಬುದಾಗಿ ಎನ್‌ಐಆರ್‌ಎಫ್ (The National Institutional Ranking Framework) ಪ್ರಕಟಿಸಿದೆ. ಪಿಜಿಐ ಚಂಡೀಗಢ (PGI Chandigarh) ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (Christian Medical College, Vellore) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದೆ. ಎನ್‌ಐಆರ್‌ಎಫ್ ನೀಡಿರುವ ಶ್ರೇಯಾಂಕಗಳನ್ನು (NIRF 2024 Rank) ಭಾರತದ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ಭಾರತ್ ಮಂಟಪದಲ್ಲಿ ಎನ್‌ಐಆರ್‌ಎಫ್ 2024ರ ಶ್ರೇಯಾಂಕವನ್ನು ಅನಾವರಣಗೊಳಿಸಿದರು. ಹಿಂದಿನ ವರ್ಷದ ಶ್ರೇಯಾಂಕದಂತೆಯೇ ಏಮ್ಸ್ ದೆಹಲಿಯು ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಡೆಂಟಲ್ ಕಾಲೇಜುಗಳಿಗೆ ಸಂಬಂಧಿಸಿದಂತೆ ಚೆನ್ನೈನ ಸವೀತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಆಂಡ್ ಟೆಕ್ನಿಕಲ್ ಸೈನ್ಸಸ್ ಅಗ್ರ ಶ್ರೇಯಾಂಕವನ್ನು ಪಡೆದುಕೊಂಡಿದೆ. ಹೊಸದಿಲ್ಲಿಯ ಜಾಮಿಯಾ ಹಮ್ದರ್ದ್ ಫಾರ್ಮಸಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ಟಾಪ್ ಐದರ ಸ್ಥಾನದಲ್ಲಿರುವ ಕಾಲೇಜುಗಳು

ವೈದ್ಯಕೀಯ ಕಾಲೇಜು ವಿಭಾಗದಲ್ಲಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್(ನಿಮ್ಹಾನ್ಸ್‌) , ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಕ್ರಮವಾಗಿ ಸ್ಥಾನ ಪಡೆದಿವೆ.


ದಂತ ಕಾಲೇಜು ವಿಭಾಗದಲ್ಲಿ ಚೆನ್ನೈನ ಸವೀತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್, ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ನವದೆಹಲಿಯ ಮೌಲಾನಾ ಆಜಾದ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಗಳು, ಪುಣೆಯ ಡಾ. ಡಿ.ವೈ. ಪಾಟೀಲ್ ವಿದ್ಯಾಪೀಠ ಕ್ರಮವಾಗಿ ಸ್ಥಾನ ಪಡೆದಿವೆ.

NIRF 2024 Rank
NIRF 2024 Rank


ಫಾರ್ಮಸಿ ವಿಭಾಗದಲ್ಲಿ ಯಾವ ಕಾಲೇಜು?

ಹತ್ತು ಅತ್ಯುತ್ತಮ ಔಷಧಾಲಯ ವಿಭಾಗದಲ್ಲಿ ನವದೆಹಲಿಯ ಜಾಮಿಯಾ ಹಮ್ದರ್ದ್, ಹೈದರಾಬಾದ್‌ನ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಪಿಲಾನಿಯ
ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಊಟಿಯ ಜೆಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ, ಮುಂಬಯಿ ನ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ, ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯ, ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಮೊಹಾಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಮುಂಬಯಿನ ಎಸ್‌ವಿಕೆಎಂನ ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸ್ಥಾನ ಪಡೆದಿದೆ.

ಎನ್‌ಐಆರ್‌ಎಫ್ ಶ್ರೇಯಾಂಕ ಎಂದರೇನು?

ಎನ್‌ಐಆರ್‌ಎಫ್ ಅನ್ನು ಎಂಎಚ್‌ಆರ್‌ಡಿ ಅನುಮೋದಿಸಿದ್ದು, 2015ರ ಸೆಪ್ಟೆಂಬರ್ 29ರಲ್ಲಿ ಇದನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಇದನ್ನು ಪ್ರಾರಂಭಿಸಿದರು. ಇದು ದೇಶಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ನೀಡುತ್ತದೆ.

ಇದನ್ನೂ ಓದಿ: NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್;‌ ಇಲ್ಲಿದೆ ಪೂರ್ಣ ಪಟ್ಟಿ

ವಿಶ್ವವಿದ್ಯಾನಿಲಯ, ಕಾಲೇಜು, ಸಂಶೋಧನಾ ಸಂಸ್ಥೆ, ಎಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ದಂತ ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ ಮತ್ತು ಯೋಜನೆ, ಕೃಷಿ ಮತ್ತು ಸಂಬಂಧಿತ ವಲಯಗಳು, ನಾವೀನ್ಯತೆ, ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 16 ವಿವಿಧ ವಿಭಾಗಗಳಿಗೆ ಶ್ರೇಯಾಂಕಗಳನ್ನು ಇದರಲ್ಲಿ ಬಿಡುಗಡೆ ಮಾಡಲಾಗಿದೆ. ಬೋಧನೆ, ಕಲಿಕೆ, ಮತ್ತು ಸಂಪನ್ಮೂಲಗಳು, ಹಾಗೆಯೇ ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ ಮತ್ತು ಪದವಿ ಫಲಿತಾಂಶಗಳ ಆಧಾರದಲ್ಲಿ ಈ ಶ್ರೇಯಾಂಕ ನೀಡಲಾಗಿದೆ.

Continue Reading

ಶಿಕ್ಷಣ

NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್;‌ ಇಲ್ಲಿದೆ ಪೂರ್ಣ ಪಟ್ಟಿ

ಎನ್‌ಐಆರ್‌ಎಫ್ 2024ರ (NIRF 2024 Rank) ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದ್ದು, ಸತತ ಆರನೇ ವರ್ಷ ಮದ್ರಾಸ್ ಐಐಟಿ ಮೊದಲ ಸ್ಥಾನ ಪಡೆದಿದೆ. ಕಳೆದ ಸಾಲಿನಂತೆ ಬೆಂಗಳೂರು ಐಐಎಸ್‌ಸಿ ಈ ಬಾರಿಯೂ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಉಳಿದ ಯಾವ ಸಂಸ್ಥೆಗಳು ಟಾಪ್ ಹತರಲ್ಲಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಎನ್ಐಆರ್‌ಎಫ್ ರಾಂಕಿಂಗ್ 2024 ಅನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತದ ಒಂಬತ್ತನೇ ಆವೃತ್ತಿಯ ಶ್ರೇಯಾಂಕವನ್ನು ಬಿಡುಗಡೆ ಮಾಡಿದರು.

VISTARANEWS.COM


on

By

NIRF 2024 Rank
Koo

ಭಾರತದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಐಐಟಿ ಮದ್ರಾಸ್ (IIT Madras) ಅಗ್ರ ಸ್ಥಾನ ಪಡೆದಿದ್ದು, ಬೆಂಗಳೂರಿನ ಐಐಎಸ್‌ಸಿ (IISC Bangalore) ಎರಡನೇ ಸ್ಥಾನ ಪಡೆದಿದೆ. ಬಾಂಬೆ ಐಐಟಿ (Bombay IIT) ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ನೀಡುವ The National Institutional Ranking Framework (NIRF) ನೀಡಿರುವ ಈ ಶ್ರೇಯಾಂಕಗಳನ್ನು (NIRF 2024 Rank) ಭಾರತದ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಎನ್‌ಐಆರ್‌ಎಫ್ 2024ರ ಶ್ರೇಯಾಂಕವನ್ನು ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಈ ವರ್ಷ ಐಐಟಿ ಮದ್ರಾಸ್ ಮೊದಲ ಸ್ಥಾನ ಗಳಿಸಿದ್ದು, ಐಐಎಸ್‌ಸಿ ಬೆಂಗಳೂರು ಮತ್ತು ಐಐಟಿ ಬಾಂಬೆ ಕ್ರಮವಾಗಿ ಎರಡು, ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವವಿದ್ಯಾನಿಲಯ, ಕಾಲೇಜು, ಸಂಶೋಧನಾ ಸಂಸ್ಥೆ, ಎಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ದಂತ ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ ಮತ್ತು ಯೋಜನೆ, ಕೃಷಿ ಮತ್ತು ಸಂಬಂಧಿತ ವಲಯಗಳು, ನಾವೀನ್ಯತೆ, ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 16 ವಿವಿಧ ವಿಭಾಗಗಳಿಗೆ ಶ್ರೇಯಾಂಕಗಳನ್ನು ಇದರಲ್ಲಿ ಬಿಡುಗಡೆ ಮಾಡಲಾಗಿದೆ. ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾನಿಲಯ ಶ್ರೇಯಾಂಕಗಳು ಎನ್ ಐಆರ್ ಎಫ್ ಶ್ರೇಯಾಂಕದ ವರ್ಗಗಳಿಗೆ ಇತ್ತೀಚಿನ ಸೇರ್ಪಡೆಗಳಾಗಿವೆ.

NIRF 2024 Rank
NIRF 2024 Rank


ಟಾಪ್ 10ನಲ್ಲಿರುವ ಸಂಸ್ಥೆಗಳು

ಎನ್‌ಐಆರ್‌ಎಫ್ ನೀಡಿರುವ ಶ್ರೇಯಾಂಕದ ಆಧಾರದ ಮೇಲೆ ಟಾಪ್ ಹತ್ತರಲ್ಲಿ ಈ ಕೆಳಗಿನ ಶಿಕ್ಷಣ ಸಂಸ್ಥೆಗಳು ಗುರುತಿಸಿಕೊಂಡಿವೆ. ಐಐಟಿ ಮದ್ರಾಸ್, ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಕಾನ್ಪುರ, ಐಐಟಿ ಖರಗ್‌ಪುರ, ಏಮ್ಸ್, ಹೊಸದಿಲ್ಲಿ, ಐಐಟಿ ರೂರ್ಕಿ, ಐಐಟಿ ಗುವಾಹಟಿ, ಜೆಎನ್‌ಯು, ಹೊಸದಿಲ್ಲಿ.


ಎನ್ಐಆರ್‌ಎಫ್ ರಾಂಕಿಂಗ್ 2024 ಅನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತದ ಒಂಬತ್ತನೇ ಆವೃತ್ತಿಯ ಶ್ರೇಯಾಂಕವನ್ನು ಬಿಡುಗಡೆ ಮಾಡಿದರು. ಸಚಿವಾಲಯವು 2025ರಿಂದ ಸುಸ್ಥಿರತೆಯ ಶ್ರೇಯಾಂಕದ ವರ್ಗವನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ವಿವಿಧ ವಿಶ್ವವಿದ್ಯಾನಿಲಯ ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ವಿಶಾಲವಾದ ನಿಯತಾಂಕಗಳನ್ನು ಗುರುತಿಸಲು ಎಂಹೆಚ್ ಆರ್ ಡಿ ಸ್ಥಾಪಿಸಿದ ಕೋರ್ ಕಮಿಟಿಯಿಂದ ಬಂದ ಶಿಫಾರಸುಗಳನ್ನು ಆಧರಿಸಿ ಎನ್ಐಆರ್‌ಎಫ್ ಈ ಶ್ರೇಯಾಂಕವನ್ನು ನೀಡಿದೆ. ಕೋರ್ ಕಮಿಟಿಯು ವಿವಿಧ ವಿಶ್ವವಿದ್ಯಾನಿಲಯ ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ವಿಶಾಲವಾದ ನಿಯತಾಂಕಗಳನ್ನು ಗುರುತಿಸಲು ಎಂಎಚ್‌ಆರ್‌ಡಿ ಸ್ಥಾಪಿಸಿದ ಶ್ರೇಯಾಂಕ ಸಂಸ್ಥೆಗಳಿಗೆ ವಿವಿಧ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಬೋಧನೆ, ಕಲಿಕೆ, ಸಂಪನ್ಮೂಲ, ಸಂಶೋಧನೆ, ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶ, ಪ್ರಭಾವ ಮತ್ತು ಒಳಗೊಳ್ಳುವಿಕೆ ಮತ್ತು ಗ್ರಹಿಕೆಗಳ ಮೇಲೆ ಸಂಸ್ಥೆಗಳಿಗೆ ಶ್ರೇಣಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Submarines: ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳಿಗಾಗಿ ಕೇಂದ್ರಕ್ಕೆ ಭಾರತೀಯ ನೌಕಾಪಡೆ ಮನವಿ

ಕಳೆದ ವರ್ಷದ ಶ್ರೇಯಾಂಕ ಹೇಗಿತ್ತು?

2023ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಒಟ್ಟಾರೆ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು. ಅನಂತರ ಐಐಎಸ್‌ಸಿ ಬೆಂಗಳೂರು ಎರಡನೇ ಸ್ಥಾನ ಮತ್ತು ಐಐಟಿ ದೆಹಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. 2023ರಲ್ಲಿ ಐಐಟಿ ಮದ್ರಾಸ್ ಶೇ. 86.69 ಅಂಕಗಳನ್ನು ಪಡೆದುಕೊಂಡಿದ್ದು, ಐದನೇ ಬಾರಿಗೆ ಅಗ್ರಸ್ಥಾನದಲ್ಲಿ ಹೊರಹೊಮ್ಮಿತ್ತು. ಎನ್‌ಐಆರ್‌ಎಫ್ ಅನ್ನು ಎಂಎಚ್‌ಆರ್‌ಡಿ ಅನುಮೋದಿಸಿದ್ದು, 2015ರ ಸೆಪ್ಟೆಂಬರ್ 29ರಲ್ಲಿ ಇದನ್ನು ಮೊದಲಬಾರಿಗೆ ಬಿಡುಗಡೆ ಮಾಡಲಾಗಿದೆ.

Continue Reading

ಬೆಂಗಳೂರು

KSET Updates: ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಆ.17ಕ್ಕೆ ದಾಖಲೆ ಪರಿಶೀಲನೆ

KSET Updates : ಇದೇ ಆ.17 ರಂದು ಹಾಜರಾಗಿ ಕೆಸೆಟ್ ಪ್ರಮಾಣ ಪತ್ರ ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

VISTARANEWS.COM


on

By

KSET updates
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಕೆಸೆಟ್ (KSET 2024) ಪರೀಕ್ಷೆಯಲ್ಲಿ ಅರ್ಹತೆ ಪಡೆದು, ವಿವಿಧ ಕಾರಣಗಳಿಂದ ಮೂಲ ದಾಖಲೆಗಳ ಪರಿಶೀಲನೆಗೆ ಒಳಪಡದವರ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ (ಆ.12) ಪ್ರಕಟಿಸಿದೆ. ಅಂತಹವರು ಇದೇ ಆ.17 ರಂದು ಹಾಜರಾಗಿ ಕೆಸೆಟ್ ಪ್ರಮಾಣ ಪತ್ರ ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಜುಲೈ 11 ರಿಂದ 22 ಹಾಗೂ 31ರಂದು ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿ, ಪ್ರಮಾಣ ಪತ್ರ ಕೂಡ ನೀಡಲಾಗಿದೆ. ಕೆಲವರು ಆ ಸಂದರ್ಭದಲ್ಲಿ ಹಾಜರಾಗಿದ್ದರೂ ಪ್ರಮಾಣ ಪತ್ರ ಕೊಟ್ಟಿರಲಿಲ್ಲ. ಅಂತಹವರು ನಂತರ ಮೂಲ ದಾಖಲೆಗಳನ್ನು ಕೊಟ್ಟು ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಪರಿಶೀಲಿಸಿ, ಯಾರೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಹರು ಎಂಬುದನ್ನು ತೀರ್ಮಾನಿಸಿದೆ. ಅಂತಹವರ ಪಟ್ಟಿಯನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಆ.17ರಂದು ಬೆಳಗ್ಗೆ 10ಗಂಟೆಗೆ ಮೂಲ ದಾಖಲೆ ಸಮೇತ ಹಾಜರಾಗಿ ಪ್ರಮಾಣ ಪತ್ರ ಪಡೆಯಬಹುದು. ಅನಿವಾರ್ಯ ಕಾರಣಗಳಿಂದ ಪರಿಶೀಲನೆ ಸಂದರ್ಭದಲ್ಲಿ ಗೈರುಹಾಜರಾಗಿದ್ದವರೂ ಅಂದು ಬಂದು ಪ್ರಮಾಣ ಪತ್ರಗಳನ್ನು ಪಡೆಯಬಹುದು.

ಇದನ್ನೂ ಓದಿ:KSET 2024: ಕೆಸೆಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆ.22 ಕೊನೆ ದಿನ; ವೇಳಾಪಟ್ಟಿ ಹೀಗಿದೆ

ಆಗಸ್ಟ್‌ 5ರಿಂದ ನೀಟ್‌ ರೋಲ್‌ ನಂಬರ್‌ ದಾಖಲಿಸಲು ಅವಕಾಶ, ಲಿಂಕ್‌ ಪಡೆಯಲು ಹೀಗೆ ಮಾಡಿ

ಬೆಂಗಳೂರು: ಈಗಾಗಲೇ ಯುಜಿಸಿಇಟಿಗೆ ಅರ್ಜಿ ಸಲ್ಲಿಸಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ (NEET 2024) ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್‌ಅನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ ಲಿಂಕ್ ಬಿಡುಗಡೆ ಮಾಡಲಿದೆ. ಆಗಸ್ಟ್ 5ರ ಬೆಳಗ್ಗೆ 11ಕ್ಕೆ ಕೆಇಎ ವೆಬ್‌ಸೈಟ್‌ನಲ್ಲಿ (KEA Website) ಯುಜಿ ನೀಟ್-2024 ಲಿಂಕ್ ಬಿಡುಗಡೆ ಮಾಡಲಾಗುತ್ತದೆ. ಆಗಸ್ಟ್ 7 ರಂದು ಬೆಳಗ್ಗೆ 11ರವರೆಗೆ ರೋಲ್ ನಂಬರ್ ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳು ದಾಖಲಿಸುವ ರೋಲ್ ನಂಬರ್‌ಅನ್ನು ಎನ್‌ಟಿಎ ಡೇಟಾದೊಂದಿಗೆ ತಾಳೆ ಮಾಡಿ ಯುಜಿ ನೀಟ್ ಅರ್ಹತೆ ಪಡೆದಿದ್ದಲ್ಲಿ ಅರ್ಜಿ ನಮೂನೆ ಪ್ರತಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ನಂತರ ವೇರಿಫಿಕೇಷನ್ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಆ.7ರಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವವರು ಇನ್ನೂ ಅರ್ಜಿ ಸಲ್ಲಿಸದೇ ಇದ್ದಲ್ಲಿ ಅಂತಹವರು ಆ.7ರಿಂದ 9ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್‌ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜುಲೈ 26ರಂದು ನೀಟ್‌ ಯುಜಿ 2024 ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಿದೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ಮೇ 5ರಂದು ನಡೆದಿದ್ದ ನೀಟ್‌ ಯುಜಿ ಪರೀಕ್ಷೆಯ ಫಲಿತಾಂಶವು ಜೂನ್‌ 4ರಂದು ಪ್ರಕಟವಾಗಿತ್ತು. ಆದರೆ, ಇದಾದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಹಲವು ಆರೋಪ ಕೇಳಿಬಂದ ಕಾರಣ ಸುಪ್ರೀಂ ಕೋರ್ಟ್‌ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿತ್ತು. ಕೊನೆಗೆ ಮರು ಪರೀಕ್ಷೆ ಬೇಡ ಎಂದಿದ್ದ ನ್ಯಾಯಾಲಯವು, ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Ashwini Ponnappa
ಪ್ರಮುಖ ಸುದ್ದಿ6 hours ago

Ashwini Ponnappa : ಷಟ್ಲರ್​ಗಳನ್ನೇ ಗುರಿಯಾಗಿಸಿದ ಕ್ರೀಡಾ ಇಲಾಖೆ ವಿರುದ್ಧವೇ ತಿರುಗಿ ಬಿದ್ದ ಅಶ್ವಿನಿ ಪೊನ್ನಪ್ಪ

Sowmya Reddy
ರಾಜಕೀಯ6 hours ago

Sowmya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

Cricket News
ಪ್ರಮುಖ ಸುದ್ದಿ6 hours ago

Cricket News : ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳಾಪಟ್ಟಿ ಬದಲಾಯಿಸಿದ ಬಿಸಿಸಿಐ

Koppala News
ಕೊಪ್ಪಳ6 hours ago

Koppala News: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ನಿರ್ಮಾಣದಲ್ಲೂ ಕಮಿಷನ್ ರಾಜಕೀಯ; ಕಾಂಗ್ರೆಸ್ ಮುಖಂಡನಿಂದಲೇ ಆರೋಪ

Koppala News
ಕರ್ನಾಟಕ7 hours ago

Koppala News: ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕಸಿದುಕೊಂಡ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ!

Kannada New Movie
ಬೆಂಗಳೂರು7 hours ago

Kannada New Movie: ತೆರೆಗೆ ಬರಲು ಸಿದ್ಧವಾಗಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ʼಸ್ವಪ್ನ ಮಂಟಪʼ ಚಿತ್ರ

Independence Day 2024
ದೇಶ7 hours ago

Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

Vinesh Phogat
ಪ್ರಮುಖ ಸುದ್ದಿ7 hours ago

Vinesh Phogat : ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಆಗಸ್ಟ್​​​ 16ಕ್ಕೆ ಮುಂದೂಡಿಕೆ

Cauvery Water Dispute
ಕರ್ನಾಟಕ7 hours ago

Cauvery Water Dispute: ಕಾವೇರಿ ನೀರು ನಿಗದಿಗಿಂತ ಹೆಚ್ಚು ಹರಿಸಿದರೂ ತಮಿಳುನಾಡು ಆಕ್ಷೇಪ!

Sheikh Hasina
ಪ್ರಮುಖ ಸುದ್ದಿ7 hours ago

Sheikh Hasina : ಬಾಂಗ್ಲಾದಿಂದ ಪಲಾಯನ ಮಾಡಿದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ಶೇಖ್​ ಹಸೀನಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ5 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌