ನವ ದೆಹಲಿ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವು (ಐಸಿಎಐ) ಚಾರ್ಟರ್ಡ್ ಅಕೌಂಟೆನ್ಸಿ ಅಂತಿಮ ಪರೀಕ್ಷೆ (ICAI CA Results 2023) ಮತ್ತು ಇಂಟರ್ ಫೈನಲ್ ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಸಿಎ ಪರೀಕ್ಷೆಯಲ್ಲಿ ಅಹ್ಮದಾಬಾದ್‌ನ ಅಕ್ಷಯ ರಮೇಶ್ ಜೈನ್ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕಲ್ಪೇಶ್ ಜೂನ್ ಜಿ, ಪ್ರಖಾರ್ ವರ್ಷ್ಣಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಸಿಎ ಇಂಟರ್ ಪರೀಕ್ಷೆಯಲ್ಲಿ ವೈ ಗೋಕುಲ್ ಸಾಯಿ ಶ್ರೀಕಾರ್ ಮೊದಲ ರ‍್ಯಾಂಕ್ ಪಡೆದಿದ್ದರೆ, ನೂರ್ ಸಿಂಗ್ಲಾ ಮತ್ತು ಕಾವ್ಯ ಸಂದೀಪ್ ಕೊಠಾರಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಷಯ ರಮೇಶ್ ಜೈನ್ 800 ಕ್ಕೆ 616 ಅಂಕ (ಶೇ. 77) ಪಡೆದುಕೊಂಡಿದ್ದಾರೆ. ಫೈನಲ್ ಸಿಎ ಪರೀಕ್ಷೆಯಲ್ಲಿ 13,430 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ.
ಪರೀಕ್ಷೆ ಬರೆದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ರೋಲ್ ನಂಬರ್, ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್‌ನ್ನು ಟೈಪ್‌ಮಾಡಿ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ. ICAI CA ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.
ಇದನ್ನೂ ಓದಿ: Education Guide : ಬೆಸ್ಟ್ ಎಂಜಿನಿಯರಿಂಗ್ ಕಾಲೇಜು ಆಯ್ಕೆ ಹೇಗೆ? ಇಲ್ಲಿದೆ ಟಾಪ್ 5 ಸಲಹೆ
ಸಿಎ ಫೈನಲ್ ಪರೀಕ್ಷೆಯು ಕಳೆದ ಮೇ 2 ರಿಂದ 9 ರವರೆಗೆ ಗ್ರೂಪ್ 1 ಮತ್ತು ಮೇ 11 ರಿಂದ ಮೇ 17ರ ವರೆಗೆ ಗ್ರೂಪ್ 2ರ ಪರೀಕ್ಷೆ ನಡೆದಿತ್ತು. ಇಂಟರ್ ಫೈನಲ್ ಗ್ರೂಪ್1ರ ಪರೀಕ್ಷೆಯು ಮೇ 3 ರಿಂ 10ರ ವರೆಗೆ ಮತ್ತು ಗ್ರೂಪ್ 2ರ ಪರಕ್ಷೆಯು ಮೇ 12 ರಿಂದ 18ರ ವರೆಗೆ ನಡೆದಿತ್ತು. ಎರಡೂ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ.