ನವ ದೆಹಲಿ: ಐಸಿಎಸ್‌ಇ ೧೦ನೇ ತರಗತಿಯ ಫಲಿತಾಂಶವು ಇಂದು ಸಂಜೆ ೫ ಗಂಟೆಗೆ ಪ್ರಕಟವಾಗಲಿದೆ. ಮೊದಲ ಮತ್ತು ಎರಡನೇ ಸೆಮಿಸ್ಟರ್ ಫಲಿತಾಂಶವನ್ನು ಸಮಾನವಾಗಿ ಪರಿಗಣಿಸಿ ಅಂತಿಮ ಫಲಿತಾಂಶವನ್ನು ನೀಡಲಾಗುತ್ತದೆ.
ಈ ವಿಷಯವನ್ನು ಐಸಿಎಸ್‌ಇ ಮಂಡಳಿ ಕಾರ್ಯದರ್ಶಿ ಗೆರ‍್ರಿ ಅರಾಥೂನ್ ತಿಳಿಸಿದ್ದಾರೆ. ಮಂಡಳಿಯ ವೆಬ್‌ಸೈಟ್‌ನಲ್ಲಿ ಈ ಫಲಿತಾಂಶ ಪ್ರಕಟಿಸಲಾಗುತ್ತದೆ. ಎಸ್‌ಎಂಎಸ್ ಮೂಲಕ ಫಲಿತಾಂಶ ಪಡೆಯಲೂ ಮಂಡಳಿ ವ್ಯವಸ್ಥೆ ಮಾಡಿದೆ.
ಎರಡು ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಒಂದು ಸೆಮಿಸ್ಟರ್ ಪರೀಕ್ಷೆಗೆ ಗೈರು ಹಾಜರಾಗಿದ್ದರೆ ಅವರ ಫಲಿತಾಂಶವನ್ನು ತಡೆಹಿಡಿಯಲಾಗುತ್ತದೆ. ೨೦೨೧ರ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆ ಹಾಗೂ ೨೦೨೨ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸೆಮಿಸ್ಟರ್-೨ ರ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಫಲಿತಾಂಶ ನೋಡುವುದು ಹೇಗೆ?
೧. ಐಸಿಎಸ್‌ಇ ಮಂಡಳಿಯ ವೆಬ್‌ಸೈಟ್ https://results.cisce.org ಗೆ ಭೇಟಿ ನೀಡಿ.
೨.ICSE Results 2022 ಲಿಂಕ್ ಅನ್ನು ಕ್ಲಿಕ್ ಮಾಡಿ.
೩. ನಿಮ್ಮ ಯೂಸರ್ ನೇಮ್, ಇಂಡೆಕ್ಸ್ ನಂಬರ್ CAPTCHA code ಎಂಟರ್ ಮಾಡಿ.
೪. ನಿಮ್ಮ ಫಲಿತಾಂಶವು ಪ್ರಕಟವಾಗಲಿದೆ.
೫. ಇದನ್ನು ಮುಂದಿನ ಬಳಕೆಗಾಗಿ ಪ್ರಿಂಟ್ ಮಾಡಿಟ್ಟುಕೊಳ್ಳಿ. ಸೇವ್ ಮಾಡಿಕೊಳ್ಳಲು ಅವಕಾಶವಿರುತ್ತದೆ.
ಇದನ್ನೂ ಓದಿ | puc supplementary exam | ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ