ಬೆಂಗಳೂರು: ಜವಾಹರ್ ನವೋದಯ ವಿದ್ಯಾಲಯ ಸಮಿತಿಯ (JNVST Result 2024) 6ನೇ 9 ನೇ ತರಗತಿಯ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ. ಅಧಿಕೃತ ವೆಬ್‌ಸೈಟ್ navodaya.gov.inಗೆ ಭೇಟಿ ನೀಡಿ ಫಲಿತಾಂಶ ಪಡೆಯಬಹುದು. 6ನೇ ತರಗತಿಗೆ ಪ್ರವೇಶಕ್ಕಾಗಿ JNV ಆಯ್ಕೆ ಪರೀಕ್ಷೆಯನ್ನು ಎರಡು (JNVST Result 2024) ಹಂತಗಳಲ್ಲಿ ನಡೆಸಲಾಗಿತ್ತು. ಹಂತ 1ನ್ನು 2023ರ ನವೆಂಬರ್ 4ರಂದು ನಡೆಸಲಾಗಿತ್ತು. ಹಂತ 2ನ್ನು 2024ರ ಜನವರಿ 20ರಂದು ನಡೆಸಲಾಗಿತ್ತು.
9ನೇ ತರಗತಿಯ ಪರೀಕ್ಷೆಯನ್ನು 2024ರ ಫೆಬ್ರವರಿ 10ರಂದು ನಡೆಸಲಾಗಿತ್ತು. ಪರೀಕ್ಷೆಯ ಅವಧಿ 2 ಗಂಟೆ 30 ನಿಮಿಷಗಳು ಇತ್ತು. ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಪರೀಕ್ಷೆ ನಡೆದಿತ್ತು.
ಫಲಿತಾಂಶ ಪಡೆಯುವುದು ಹೇಗೆ?
ಹಂತ 1: ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: navodaya.gov.in
ಹಂತ 2: ಕಾಣಿಸಿಕೊಂಡ ಮುಖಪುಟದಲ್ಲಿ JNVST Check Result (ತರಗತಿ 6, ತರಗತಿ 9 ಫಲಿತಾಂಶ 2024) ಲಿಂಕ್ ಕ್ಲಿಕ್ ಮಾಡಿ
ಹಂತ 3: ಲಾಗಿನ್ ವಿವರಗಳನ್ನು ನಮೂದಿಸಿ
ಹಂತ 4: ಫಲಿತಾಂಶದ ಪುಟ ಓಪನ್ ಆಗಲಿದ್ದು, ಅದನ್ನೇ ಡೌನ್‌ಲೋಡ್ ಮಾಡಿ.
ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.
The Navodaya Vidyalaya Samiti, NVS has released the Jawahar Navodaya Vidyalaya Selection Test, JNVST 2024 result for class 9.https://t.co/axoe2ai7rz
— TeachersBadi.In (@teachersbadi) March 31, 2024
ಇದನ್ನೂ ಓದಿ: Navodaya Vidyalaya: ಅದ್ಧೂರಿಯಾಗಿ ನೆರವೇರಿದ ನವೋದಯ ಹಳೇ ವಿದ್ಯಾರ್ಥಿಗಳ ಸಭೆ; 5000 ಮಂದಿ ಭಾಗಿ
ಜೆಎನ್ವಿಎಸ್ಟಿ 6ನೇ ಪ್ರವೇಶಿಸುವ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿದ ನಂತರ, ವಿದ್ಯಾರ್ಥಿಗಳು ತಮ್ಮ ಹೆಸರು, ಲಿಂಗ, ಜನ್ಮ ದಿನಾಂಕ, ರೋಲ್ ನಂಬರ್, ವರ್ಗ, ಬ್ಲಾಕ್ ಕೋಡ್, ಸೆಂಟರ್ ಕೋಡ್ ಮತ್ತು ಇತರ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ನಮೂದಿಸಿದ ಮಾಹಿತಿಯಲ್ಲಿ ಯಾವುದೇ ದೋಷ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬಹುದು.