ಬೆಂಗಳೂರು: ಈ ವರ್ಷದಿಂದಲೇ (2022-23 ಸಾಲಿನಿಂದ) ರಾಜ್ಯದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ಮೌಲ್ಯಂಕನ ಪರೀಕ್ಷೆ ನೆಡೆಸಲಾಗುತ್ತಿದ್ದು (Karnataka Board Exams 2023), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEEB) ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
8 ನೇ ತರಗತಿಗೆ ಮಾರ್ಚ್ 13 ರಿಂದ 18ರ ವರೆಗೆ ಈ ಪಬ್ಲಿಕ್ ಪರೀಕ್ಷೆ ನಡೆದರೆ, 5ನೇ ತರಗತಿಗೆ ಮಾರ್ಚ್ 15 ರಿಂದ 18ರ ವರೆಗೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.30 ರಿಂದ ಆರಂಭಗೊಂಡು 4.30ಕ್ಕೆ ಮುಕ್ತಾಯವಾಗಲಿದೆ. ಮೌಖಿಕ ಪರೀಕ್ಷೆಯನ್ನು ಮಾರ್ಚ್ 6ರಿಂದ 10 ರವರೆಗೆ ಆಯಾ ಶಾಲೆಗಳಲ್ಲಿಯೇ ನಡೆಸುವಂತೆ ಮಂಡಳಿಯು ಸೂಚಿಸಿದೆ.
ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ ನೋಡಿ
ಮಂಡಳಿ ವತಿಯಿಂದ ಮೌಲ್ಯಾಂಕನ ನಡೆಸುವ ವಿಷಯಗಳನ್ನು ಹೊರತುಪಡಿಸಿ ದೈಹಿಕ ಶಿಕ್ಷಣ ಉಳಿದೆಲ್ಲಾ ವಿಷಯಗಳಿಗೂ ಮಂಡಳಿಯಿಂದ ನಿಗದಿಪಡಿಸಿರುವ ದಿನಾಂಕಕ್ಕಿಂತ ಮೊದಲೇ ತಮ್ಮ ಶಾಲಾ ಹಂತದಲ್ಲಿಯೇ ಮೌಲ್ಯಾಂಕನ ನಡೆಸಬೇಕು ಎಂದು ಸೂಚಿಸಲಾಗಿದೆ.
ದಿನಾಂಕ; 09.03.2023 ರಿಂದ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮೌಲ್ಯಾಂಕನ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ಒಂದೇ ದಿನ ನಡೆಯಬೇಕಾಗಿರುವುದರಿಂದ 5 ಮತ್ತು 8ನೇ ತರಗತಿಗಳ ಮೌಲ್ಯಾಂಕನವನ್ನು ಮಧ್ಯಾಹ್ನದ ಅವಧಿಯಲ್ಲಿ ನಡೆಸಲಾಗುತ್ತಿದೆ ಎಂದು ಮಂಡಳಿ ತಿಳಿಸಿದೆ.
ಹೇಗಿರಲಿದೆ ಪರೀಕ್ಷೆ?
ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯವಾಗಿರುವುದರಿಂದ ಉಳಿದ ಅರ್ಧ ವರ್ಷದಲ್ಲಿನ ಪಠ್ಯವಸ್ತುವನ್ನಾ ಧರಿಸಿದಂತೆ ಪರೀಕ್ಷೆಯನ್ನು ಐದು ಮತ್ತು ಎಂಟನೇ ತರಗತಿಗಳಿಗೆ 50 ಅಂಕಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ 40 ಅಂಕಗಳು ಲಿಖಿತ ಪರೀಕ್ಷೆಗೆ ಮೀಸಲಾಗಿದ್ದರೆ, 10 ಅಂಕಗಳ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ.
ಲಿಖಿತ ಪರೀಕ್ಷೆಯ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯು 40 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, 20 ಅಂಕಗಳಿಗೆ ಎಂ.ಸಿ.ಕ್ಯೂ ಪಶ್ನೆಗಳನ್ನು ( ಒಂದು ಪ್ರಶ್ನೆಗೆ ನಾಲ್ಕು ಉತ್ತರ ನೀಡಲಾಗಿರುತ್ತದೆ. ಇದರಲ್ಲಿ ಸರಿಯಾದ ಉತ್ತರವನ್ನು ವಿದ್ಯಾರ್ಥಿಯು ಗುರುತಿಸಬೇಕಿರುತ್ತದೆ ) ಹಾಗೂ ಉಳಿದ 20 ಅಂಕಗಳಿಗೆ ವಾಕ್ಯ ರೂಪದಲ್ಲಿನ ಬರವಣಿಗೆಯನ್ನಾಧರಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉತ್ತರ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಇದನ್ನು ಸ್ಪಷ್ಟವಾಗಿ ತೋರಿಸಲಾಗಿದೆ.
ಮಾದರಿ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ (Click Here) ಮಾಡಿ
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಮಾದರಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳು ತಾವು ಓದುವ ಮಾಧ್ಯಮದ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬಹುದಾಗಿದೆ.
ಮೌಲ್ಯಮಾಪನ ಎಲ್ಲಿ?
ತಾಲೂಕು ಮಟ್ಟದಲ್ಲಿ ಈ ಪರೀಕ್ಷೆಯ ಮೌಲ್ಯಮಾಪನ ನಡೆಯಲಿದೆ. ತಾಲೂಕಿನ ಒಂದು ಶಾಲೆಯನ್ನು ಮೌಲ್ಯಮಾಪನ ಕೇಂದ್ರವನ್ನಾಗಿ ನಿಗದಿಪಡಿಸಲಾಗುತ್ತದೆ. ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ಮೌಲ್ಯಮಾಪನ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಏಕ ಕಾಲಕ್ಕೆ ಎಲ್ಲ ವಿಷಯಗಳಿಗೆ ವಿಷಯವಾರು ಪ್ರತ್ಯೇಕ ಕೊಠಡಿಯಲ್ಲಿ ಮೌಲ್ಯಮಾಪನ ಮಾಡಿ, ನಾಲ್ಕರಿಂದ ಐದು ದಿನಗಳಲ್ಲಿ ಮೌಲ್ಯಮಾಪನ ಮುಕ್ತಾಯಗೊಳಿಸಲಾಗುತ್ತದೆ.