ಬೆಂಗಳೂರು, ಕರ್ನಾಟಕ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority – KEA) ಆಗಸ್ಟ್ 30, ಬುಧವಾರ 2023ರ ಕರ್ನಾಟಕ ಸಿಇಟಿ(CET), ನೀಟ್ (NEET) ಯುಜಿ ಕೌನ್ಸೆಲಿಂಗ್ ಎರಡನೇ ಸುತ್ತು ಆಪ್ಷನ್ ಎಂಟ್ರಿ (Option Entry) ಆರಂಭಿಸಿದೆ. ಬೆಳಗ್ಗೆಯಿಂದಲೇ ಈ ಪ್ರಕ್ರಿಯೆಯನ್ನು ಪ್ರಾಧಿಕಾರವು ಆರಂಭಿಸಿದ್ದು, kea.kar.nic.in ಜಾಲತಾಣದಲ್ಲಿ ಸಂಬಂಧಿಸಿದ ಲಿಂಕ್ ಅನ್ನು ಸಕ್ರಿಯಗೊಳಿಸಲಾಗಿದೆ(Karnataka CET, NEET UG Counselling 2023).
ಆಯ್ಕೆಗಳ ಮರುಜೋಡಣೆ, ಮಾರ್ಪಡಿಸುವುದು/ ಅಳಿಸುವುದು/ ಮರು-ಆರ್ಡರ್ ಮಾಡುವ ಆಯ್ಕೆಗಳನ್ನು ಅರ್ಹ ಅಭ್ಯರ್ಥಿಗಳು ಆಗಸ್ಟ್ 30 ರಿಂದ ಸೆಪ್ಟೆಂಬರ್ 2ರವರೆಗೆ ಮಾಡಬಹುದು. UGCET ಮತ್ತು UGNEETಗಾಗಿ ಎರಡನೇ ಮೆರಿಟ್ ಪಟ್ಟಿಯನ್ನು 2023ರ ಸೆಪ್ಟೆಂಬರ್ 4ರಂದು ಪ್ರಕಟಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Bangalore police: ಟ್ರಾಫಿಕ್ ಜಾಮ್ ನಡುವೆ ಸೈರನ್ ಹಾಕುತ್ತಾ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಯನ್ನು ತಲುಪಿಸಿದ ಹೊಯ್ಸಳ ಪೊಲೀಸ್
ಆಪ್ಷನ್ ಎಂಟ್ರಿಗೆ ಈ ಸ್ಟೆಪ್ಸ್ ಫಾಲೋ ಮಾಡಿ
-ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ವೆಬ್‌ಸೈಟ್ kea.kar.nic.in ಭೇಟಿ ನೀಡಿ.
-ಮುಖಪುಟದಲ್ಲಿರುವ Round 2 option entry ಲಿಂಕ್ ಮೇಲೆ ಕ್ಲಿಕ್ ಮಾಡಿ.
-ಪೂರ್ತಿಯಾದ ಬಳಿಕ ಮಾರ್ಪಾಡಿಸುವುದು, ಡಿಲಿಟ್ ಮಾಡುವುದು ಅಥವಾ ಇನ್ನಿತರ ಪ್ರಕ್ರಿಯೆಗಳನ್ನು ಪೂರೈಸಬಹುದು.
-ಎಲ್ಲ ಪೂರ್ತಿಯಾದ ಬಳಿಕ ಸಬ್‌ಮಿಟ್ ಬಟನ್ ಒತ್ತಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿಕೊಳ್ಳಿ.
-ಮುಂದಿನ ಉಲ್ಲೇಖಗಳಾಗಿ ಹಾರ್ಡ್ ಕಾಪಿಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳುವುದು ಉತ್ತಮ.
ಶಿಕ್ಷಣದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.