ಬೆಂಗಳೂರು: ಎಂಜಿನಿಯರಿಂಗ್, ಕೃಷಿ ವಿಜ್ಞಾನ ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ KCET)ಯ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿಗೆ ಭೇಟಿ ನೀಡಿ, ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿಕೊಂಡು, “ಸಿಇಟಿ-2022ʼʼ (KCET-2022)ರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಪ್ರವೇಶ ಪತ್ರದಲ್ಲಿಯೇ ಪರೀಕ್ಷೆಗೆ ಸಂಬಂಧಿಸಿದ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅನುಸರಿಸಬೇಕಾಗಿರುವ ಕ್ರಮಗಳ ಕುರಿತು ಸೂಚಿಸಲಾಗಿರುತ್ತದೆ. ಇದನ್ನು ತಪ್ಪದೇ ಪಾಲಿಸಬೇಕೆಂದು ಪ್ರಾಧಿಕಾರವು ಕೋರಿದೆ.
ಕೆಇಎ ನೀಡಿರುವ ಪ್ರಕಟಣೆ ಹೀಗಿದೆ
ಅಭ್ಯರ್ಥಿಗಳು KCET ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು. ಅದರಲ್ಲಿರುವ ಎಲ್ಲ ವಿವರಗಳನ್ನು ಪರಿಶೀಲಿಸಿ, ನಿಗದಿತ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕೆಂದು ಕೆಇಎ ಸೂಚಿಸಿದೆ.
ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಯಾವ ಪರೀಕ್ಷೆ ಎಂದು?
ಈಗಾಗಲೇ ಕೆಇಎ ಪ್ರಕಟಿಸಿದ ದಿನಗಳಂದೇ ಸಿಇಟಿ (KCET) ನಡೆಯಲಿದೆ. ಯಾವ ಪರೀಕ್ಷೆ ಎಂದು ನಡೆಯಲಿದೆ ಎಂಬ ವೇಳಾಪಟ್ಟಿ ಇಂತಿದೆ;
- ಜೀವಶಾಸ್ತ್ರ, ಗಣಿತ -16-06-2022
- ಭೌತಶಾಸ್ತ್ರ, ರಸಾಯನಶಾಸ್ತ್ರ -17-06-2022
- ಹೊರನಾಡು ಮತ್ತು ಗಡಿನಾಡ ಕನ್ನಡ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ -18-06-2022
ಹೆಚ್ಚಿನ ಮಾಹಿತಿಗೆ ವೆಬ್: https://cetonline.karnataka.gov.in/kea/