Site icon Vistara News

KCET Topper 2023 : ನಾನೇ ಫಸ್ಟ್‌ ರ‍್ಯಾಂಕ್‌ ಬರಬಹುದಿತ್ತು ಎಂದ ಸೆಕೆಂಡ್‌ ಟಾಪರ್‌!

Arjun Krishnaswamy KCET Topper 2023

#image_title

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ (KCET 2023 Result) ಪ್ರಕಟವಾಗಿದೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿ ಅರ್ಜುನ್‌ ಕೃಷ್ಣಸ್ವಾಮಿ ಎರಡನೇಯ ರ‍್ಯಾಂಕ್‌ (KCET Topper 2023) ಪಡೆದಿದ್ದಾರೆ.

ತಮ್ಮ ಈ ಸಾಧನೆಯ ಕುರಿತು ವಿಸ್ತಾರನ್ಯೂಸ್‌ ನೊಂದಿಗೆ ಮಾತನಾಡಿದ ಅರ್ಜುನ್ ಕೃಷ್ಣಸ್ವಾಮಿ ನಾನು ಸಿಂಗಲ್‌ ರ‍್ಯಾಂಕ್‌ ಬರುತ್ತೇನೆಂದುಕೊಂಡಿರಲಿಲ್ಲ. ಫಲಿತಾಂಶ ನೋಡಿ ಬಹಳ ಖುಷಿಯಾಗಿದೆ. ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ನಾನೇ ಫಸ್ಟ್‌ ರ‍್ಯಾಂಕ್‌ ಬರಬಹುದಿತ್ತು ಎಂದು ಹೇಳಿದ್ದಾರೆ. ಮದ್ರಾಸ್‌ ಐಐಟಿಯಲ್ಲಿ ಓದುವ ಕನಸನ್ನು ಅರ್ಜುನ್‌ ಕೃಷ್ಣಸ್ವಾಮಿ ಹೊಂದಿದ್ದಾರೆ.

ಅರ್ಜುನ್‌ ಕೃಷ್ಣಸ್ವಾಮಿ ಸಂತಸ ಹಂಚಿಕೊಂಡಿದ್ದು ಹೀಗೆ;

ಸಿಇಟಿ ಎಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ ಪಡೆದಿರುವ ಅರ್ಜುನ್ ಕೃಷ್ಣಸ್ವಾಮಿ ಇಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: NIRF Ranking 2023 : ರಾಜ್ಯದ ಬೆಸ್ಟ್‌ ಎಂಜಿನಿಯರಿಂಗ್‌ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್‌ 10 ಕಾಲೇಜುಗಳು!

Exit mobile version