Site icon Vistara News

Kota Coaching: ಆತ್ಮಹತ್ಯೆ ಆತಂಕ; ಕೋಟಾದಲ್ಲಿ 2 ತಿಂಗಳು ಪರೀಕ್ಷೆ ನಿಷೇಧಿಸಿದ ರಾಜಸ್ಥಾನ ಸರ್ಕಾರ

Kota Coaching

ನವದೆಹಲಿ: ಇಬ್ಬರು ನೀಟ್ ವಿದ್ಯಾರ್ಥಿಗಳು (NEET Suicide) ಆತ್ಮಹತ್ಯೆ (Students Suicide) ಮಾಡಿಕೊಂಡ ಹಿನ್ನೆಲೆಯಲ್ಲಿ, ‘ಕೋಚಿಂಗ್ ಹಬ್’ (Coaching Hub) ಆಗಿರುವ ರಾಜಸ್ಥಾನದ (Rajasthan State) ಕೋಟಾದಲ್ಲಿ (Kota City) ಮುಂದಿನ ಎರಡು ತಿಂಗಳ ಕಾಲ ಯಾವುದೇ ಪರೀಕ್ಷೆಗಳನ್ನು ಕೈಗೊಳ್ಳುವುದು ರದ್ದು ಮಾಡಲಾಗಿದೆ(Exam Banned). ವಿದ್ಯಾರ್ಥಿಗಳಿಗೆ “ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸುವ” ಸಲುವಾಗಿ ಕೋಟಾದ ಕೋಚಿಂಗ್ ಸೆಂಟರ್‌ಗಳಲ್ಲಿನ ಎಲ್ಲಾ ಪರೀಕ್ಷೆಗಳನ್ನು ಮುಂದಿನ ಎರಡು ತಿಂಗಳವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಸರ್ಕಾರದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ(Kota Coaching).

ರಾಜಸ್ಥಾನದ ಕೋಟಾದಲ್ಲಿ ಭಾನುವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ವಿದ್ಯಾರ್ಥಿಗಳ ಸಂಖ್ಯೆ 22ಕ್ಕೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆವಿಷ್ಕರ್ ಶಂಬಾಜಿ ಕಾಸ್ಲೆ (17) ಅವರು ಜವಾಹರ್ ನಗರದಲ್ಲಿರುವ ತಮ್ಮ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಕಟ್ಟಡದ ಆರನೇ ಮಹಡಿಯಿಂದ ಮಧ್ಯಾಹ್ನ 3.15 ರ ಸುಮಾರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಚಿಂಗ್ ಸಂಸ್ಥೆಯ ಸಿಬ್ಬಂದಿ ಕೂಡಲೇ ವಿದ್ಯಾರ್ಥಿಯನ್ನು ವಿಜ್ಞಾನ ನಗರ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ. ಮತ್ತೊಂದೆಡೆ, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ನಡೆಸಿದ್ದ 18 ವರ್ಷದ ಆದರ್ಶ್ ರಾಜ್ ಎಂಬ ವಿದ್ಯಾರ್ಥಿ ಕೂಡ ತಾನು ಬಾಡಿಗೆಗೆ ಇದ್ದ ಫ್ಲ್ಯಾಟ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೋಚಿಂಗ್‌ ಸೆಂಟರ್‌ಗಳ ರಾಜಧಾನಿ ಕೋಟಾದಲ್ಲಿ ಸರಣಿ ಆತ್ಮಹತ್ಯೆ ಆತಂಕಕಾರಿ

ಕಾಸ್ಲೆ ಮತ್ತು ರಾಜ್ ಆತ್ಮಹತ್ಯೆ ಸೇರಿ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 6ಕ್ಕೇರಿಕೆಯಾಗಿದೆ. ಒಟ್ಟಾರೆ ಈ ವರ್ಷ 22 ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ. ದೇಶದ ಕೋಚಿಂಗ್ ಹಬ್ ಎನಿಸಿಕೊಂಡಿರುವ ರಾಜಸ್ಥಾನದ ಕೋಟಾದಲ್ಲಿ ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೆಇಇ, ನೀಟ್ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು, ಕೋಚಿಂಗ್‌ಗಾಗಿ ಕೋಟಾಗೆ ಸುಮಾರು 3 ಲಕ್ಷ ವಿದ್ಯಾರ್ಥಿಗಳು ದೇಶದ ವಿವಿಧ ಕಡೆಗಳಿಂದ ಆಗಮಿಸುತ್ತಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version