ನವ ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) 2023-24 ಸಾಲಿನಲ್ಲಿ ನಡೆಸಲಿರುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿಯನ್ನು (NTA Exam Calender 2023) ಬಿಡುಗಡೆ ಮಾಡಿದೆ.
ಯಾವ ಪರೀಕ್ಷೆಯನ್ನು ಎಂದು ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ಈ ವೇಳಾಪಟ್ಟಿಯಲ್ಲಿ ನೀಡಲಾಗಿದೆ. ಜೆಇಇ (ಮೇನ್) 2023 ಸೆಷನ್ 1ರ ಪರೀಕ್ಷೆಯು ಜನವರಿ 24, 25, 27, 28, 29, 30, 31ರಂದು ನಡೆಯಲಿದೆ. ಸೆಷನ್ 2ರ ಪರೀಕ್ಷೆಯು ಏಪ್ರಿಲ್ 06, 08, 10, 11, 12 ರಂದು ನಡೆಯಲಿದೆ.
ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶ ಪರೀಕ್ಷೆಯಾದ “ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆʼʼಯು ([NEET (UG)] –2023) ಮೇ 7 ರಂದು ನಿಗದಿಯಾಗಿದೆ. ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಯನ್ನು (Common University Entrance Test (CUET) 2023) ಮೇ 21 ರಿಂದ 31 ರಂದು ನಡೆಸಲು ಎನ್‌ಟಿಎ ಉದ್ದೇಶಿಸಿದೆ.
ವೆಳಾಪಟ್ಟಿ ಇಂತಿದೆ
ಈ ವೇಳಾಪಟ್ಟಿಯ ಬಿಡುಗಡೆಯಿಂದ ಎನ್‌ಟಿಎ ನಡೆಸಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾಗಿರುವ ವಿದ್ಯಾರ್ಥಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : https://nta.ac.in/
ಇದನ್ನೂ ಓದಿ | KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ