ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಉತ್ತಮ ಪ್ರೋತ್ಸಾಹ ನೀಡಲಾಗುತ್ತಿದೆ. ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಗುರಿಯೊಂದಿಗೆ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಸ್ಕಾಲರ್‌ಶಿಪ್ ಜಾರಿಗೊಳಿಸುತ್ತಿವೆ. ಈ ಪೈಕಿ ಎಸ್‌ಸಿ / ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆ ಪ್ರೈಸ್ ಮನಿ (Prize Money). ಸಮಾಜ ಕಲ್ಯಾಣ ಇಲಾಖೆ ಈ ವಿದ್ಯಾರ್ಥಿ ವೇತನ ಒದಗಿಸುತ್ತಿದೆ. ಈ ಯೋಜನೆ ವಿವರ ಇಲ್ಲಿದೆ (Scholarship for Students).
ಯಾರು ಅರ್ಹರು?
ಎಸ್‌ಸಿ / ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪಡೆಯಲು ಅರ್ಹರು. 2023ರಲ್ಲಿ ಪಿಯುಸಿ, ಪದವಿ, ಡಿಪ್ಲೋಮಾ ಮತ್ತು ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊಂದಿದವರು ಈ ಸ್ಕಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ. ಗಮನಿಸಿ, ದ್ವಿತೀಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಪದವಿ ಮತ್ತು ಯಾವುದೇ ವಿಷಯದ ಸ್ನಾತಕೋತ್ತರ ಪದವಿಯನ್ನು 2023ರಲ್ಲಿ ಪಾಸಾಗಿರಬೇಕು.
ಅರ್ಜಿ ಸಲ್ಲಿಕೆ ವಿಧಾನ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31. ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಣೆ ಇಲ್ಲ ಎಂದು ಪ್ರಕಟಣೆ ತಿಳಿಸಿದೆ. ಒಂದುವೇಳೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ನಿಮ್ಮ ಕಾಲೇಜಿನ ಹೆಸರು ಇಲ್ಲದಿದ್ದರೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿ.
ಮೊತ್ತ ಎಷ್ಟು?
ದ್ವಿತೀಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ: 20,000 ರೂ.
ಪದವಿ: 25,000 ರೂ.
ಸ್ನಾತಕೋತ್ತರ ಪದವಿ: 30,000 ರೂ.
ಎಂಜಿನಿಯರಿಂಗ್, ವೈದ್ಯಕೀಯ ಪದವಿ: 35,000 ರೂ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಬಳಿಕ ಆನ್‌ಲೈನ್ ಅರ್ಜಿ / Online Application (Passed in 2023 only) ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಬಳಿಕ ತೆರೆಯುವ ಪೇಜ್ನಲ್ಲಿ SSLC Details ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕೇಳಿರುವ ಮಾಹಿತಿ ತುಂಬಿ Submit ಬಟನ್ ಕ್ಲಿಕ್ ಮಾಡಿ
- ‘ನಿಮ್ಮ ಗುರುತಿನ ದೃಢೀಕರಣ ಸೇವೆ’ ಎನ್ನುವ ಆಪ್ಶನ್ ಇರುತ್ತದೆ. ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರನ್ನು ಭರ್ತಿ ಮಾಡಿ. ಬಳಿಕ ಆಧಾರ್ ಸಂಖ್ಯೆ ನಮೂದಿಸಿ. ಕೊನೆಗೆ I Agree ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಕೊನೆಗೆ Submit ಬಟನ್ ಕ್ಲಿಕ್ ಮಾಡಿ.
- ಬಳಿಕ ತೆರೆಯುವ ಪುಟದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ
- College & Course Detail ಎಂದಿರುತ್ತದೆ. ಅಲ್ಲಿ ನಿಮ್ಮ ಕಾಲೇಜು, ಕೋರ್ಸ್, ಎಕ್ಸಾಂ ರಿಜಿಸ್ಟರ್ ನಂಬರ್ ಮತ್ತು ಪಡೆದಿರುವ ಅಂಕಗಳನ್ನು ನಮೂದಿಸಿ.
- ಈಗ ನಿಮ್ಮ ಬ್ಯಾಂಕ್ ಖಾತೆಯ ವಿವರ ನಮೂದಿಸಿ
- ಬಳಿಕ ಅಗತ್ಯವಾದ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಸಲ್ಲಿಸಿ
ಇದನ್ನೂ ಓದಿ: Govt Jobs: ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್; ಶೀಘ್ರ ವಿವಿಧ ಹುದ್ದೆಗಳ ಭರ್ತಿಗೆ ಮುಂದಾದ ಸರ್ಕಾರ