Site icon Vistara News

SSLC Exam 2023 | ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಏ.1 ರಿಂದಲೇ ಎಕ್ಸಾಮ್‌ ಶುರು

SSLC Preparatory Exam

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಈ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ (SSLC Exam 2023) ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್‌ 1 ರಿಂದ 15 ರವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಿದೆ.

ಏಪ್ರಿಲ್‌ 1 ರಂದು ಕನ್ನಡ ಪರೀಕ್ಷೆಯೊಂದಿಗೆ ಪರೀಕ್ಷೆ ಆರಂಭವಾಗಲಿದೆ. ಆದರೆ ಏಪ್ರಿಲ್‌ 2 ಮತ್ತು 3 ರಂದು ಪರೀಕ್ಷೆ ಇರುವುದಿಲ್ಲ. ಏಪ್ರಿಲ್‌ 4 ರಂದು ಗಣಿತದ ಪರೀಕ್ಷೆ ನಡೆಯಲಿದೆ. ಏಪ್ರಿಲ್‌ 5 ರಂದು ಪರೀಕ್ಷೆ ಇರುವುದಿಲ್ಲ. ಏಪ್ರಿಲ್‌ 6 ರಂದು ದ್ವಿತೀಯ ಭಾಷೆಯ ಪರೀಕ್ಷೆ ನಿಗದಿಪಡಿಸಲಾಗಿದೆ.

ಏಪ್ರಿಲ್‌ 7 ರಂದು ಗುಡ್‌ಫ್ರೈಡೆಯಾಗಿರುವುದರಿಂದ ಪರೀಕ್ಷೆ ಇರುವುದಿಲ್ಲ. ಏಪ್ರಿಲ್‌ 10 ರಂದು ವಿಜ್ಞಾನದ ಪರೀಕ್ಷೆ ನಡೆಯಲಿದ್ದು, 12 ರಂದು ತೃತೀಯ ಭಾಷೆಯ ಪರೀಕ್ಷೆ ನಡೆಯಲಿದೆ. ಏಪ್ರಿಲ್‌ 15 ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲಾಗುತ್ತದೆ.

ತಾತ್ಕಾಲಿಕ ವೇಳಾಪಟ್ಟಿ ಇಂತಿದೆ

ಈ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, 28.11.2022ರ ಒಳಗೆ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ. ಇ-ಮೇಲ್‌ನಲ್ಲಿ ಮಾತ್ರ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಕೊನೆಯ ದಿನಾಂಕದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. ಆಕ್ಷೇಪಣೆ ಸಲ್ಲಿಸಲು ಇ-ಮೇಲ್‌ ವಿಳಾಸ ಇಂತಿದೆ: dpikseeb@gmail.com ಅಥವಾ sadpi.csec.kseeb@gmail.com

ಇದನ್ನೂ ಓದಿ | PU Exam Date 2023 | ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಮಾ.10 ರಿಂದಲೇ ಎಕ್ಸಾಮ್‌ ಶುರು

Exit mobile version