Site icon Vistara News

UGC NET results: ಯುಜಿಸಿ ನೆಟ್‌ ಫಲಿತಾಂಶ 2023 ಪ್ರಕಟ; ನಿಮ್ಮ ರಿಸಲ್ಟ್‌ ಹೀಗೆ ಚೆಕ್‌ ಮಾಡಿ

NTA Exam 2023

ಹೊಸದಿಲ್ಲಿ: ಈ ವರ್ಷ ಜೂನ್ ತಿಂಗಳಿನಲ್ಲಿ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ) ನಡೆಸಿದ ಯುಜಿಸಿ ನೆಟ್‌ ಪರೀಕ್ಷೆಯ ಫಲಿತಾಂಶಗಳನ್ನು (UGC NET results 2023) ಪ್ರಕಟಿಸಿದೆ. ಅಂತಿಮ ಕೀ ಉತ್ತರ ಮತ್ತು ಕಟ್ಆಫ್ ಟೇಬಲ್‌ಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ನೆಟ್‌ ಫಲಿತಾಂಶ 2023 ಅನ್ನು ಚೆಕ್‌ ಮಾಡುವುದು ಹೇಗೆಂಬ ವಿವರ ಇಲ್ಲಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (NTA) 2023ರ ಜೂನ್ ತಿಂಗಳಲ್ಲಿ ಯುಜಿಸಿ ನೆಟ್‌ ಪರೀಕ್ಷೆಯನ್ನು ನಡೆಸಿತ್ತು. ಇಂದು ಅದರ ಫಲಿತಾಂಶ ಪ್ರಕಟಿಸಲಾಗಿದೆ. JRF UGC NET ಜೂನ್ 2023ರ ಕಟ್ಆಫ್ ಟೇಬಲ್ ಮತ್ತು ಸಹಾಯಕ ಪ್ರಾಧ್ಯಾಪಕ-ಯುಜಿಸಿ ನೆಟ್‌ ಜೂನ್, 2023ರ ಕಟ್ಆಫ್ ಟೇಬಲ್ ಅನ್ನು ಸಹ ಫಲಿತಾಂಶಗಳೊಂದಿಗೆ ಪ್ರಕಟಿಸಲಾಗಿದೆ.

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ugcnet.nta.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಸ್ಕೋರ್ ಕಾರ್ಡ್‌ಗಳನ್ನು ಪರಿಶೀಲಿಸಬಹುದು. ಯುಜಿಸಿ ನೆಟ್‌ ಜೂನ್ 2023 ಫಲಿತಾಂಶಗಳನ್ನು ಅಪ್ಲಿಕೇಶನ್ ಸಂಖ್ಯೆ, ಅಭ್ಯೃತಿಯ ಜನ್ಮ ದಿನಾಂಕ ಮತ್ತು ಭದ್ರತಾ ಪಿನ್ ಬಳಸಿಯೂ ಪರಿಶೀಲಿಸಬಹುದು.

ಹೀಗೆ ಚೆಕ್‌ ಮಾಡಿ:

ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಯನ್ನು ಜುಲೈ 6ರಂದು ಬಿಡುಗಡೆ ಮಾಡಲಾಗಿದೆ. ಯುಜಿಸಿ ನೆಟ್‌ ಜೂನ್ 2023 ಪರೀಕ್ಷೆ ದೇಶದಾದ್ಯಂತ 181 ನಗರಗಳಲ್ಲಿ 83 ವಿಷಯಗಳಿಗೆ ನಡೆಯಿತು. ಒಟ್ಟು 6,39,069 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

Exit mobile version