Site icon Vistara News

UPSC Preparation : ವೃತ್ತಿಪರರು ಯುಪಿಎಸ್‌‌ಸಿ ಪರೀಕ್ಷೆಯಲ್ಲಿ ಸಕ್ಸೆಸ್ ಆಗಬೇಕಿದ್ದರೆ ಏನು ಮಾಡಬೇಕು?

UPSC

UPSC CSE Prelims Exam 2024 Rescheduled: Find Revised Date of Civil Services Exam

ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎನ್ನುವುದು ಅನೇಕರ ಕನಸು. ಈ ಕನಸನ್ನು ನನಸು ಮಾಡಿಕೊಳ್ಳುವುದು ಎಲ್ಲೋ ಕೆಲವರು ಮಾತ್ರ. ಪ್ರತಿ ವರ್ಷವೂ ಈ ಪರೀಕ್ಷೆಗೆ ವಿದ್ಯಾರ್ಥಿಗಳು, ಹಲವು ವರ್ಷಗಳ ಕಾಲ ಇದ್ದಕ್ಕೆಂದೇ ಸಮಯ ಕೊಟ್ಟು ಕುಳಿತವರು ಮತ್ತು ವೃತ್ತಿಪರರೂ ಕೂಡ ಕೂರುತ್ತಾರೆ. ಆದರೆ ಅದರಲ್ಲಿ ಹೆಚ್ಚಾಗಿ ತೇರ್ಗಡೆಯಾಗುವುದು ಈ ಪರೀಕ್ಷೆಗೆಂದೇ ಸಮಯ ಕೊಟ್ಟು ಕುಳಿತವರು. ಹಾಗಾದರೆ ವೃತ್ತಿಪರರು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಯಾವ ರೀತಿಯಲ್ಲಿ ತಯಾರಿ (UPSC Preparation) ನಡೆಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: UPSC Recruitment 2023 : ಐಎಎಸ್‌, ಐಎಫ್‌ಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

ಬೇಗನೆ ಏಳುವುದು

ಪ್ರತಿಯೊಬ್ಬ ಐಎಎಸ್ ಅಧಿಕಾರಿಯು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮುಂಜಾನೆ ಬೇಗ ಏಳುವಂತೆ ಸಲಹೆ ನೀಡುತ್ತಾರೆ. ಕೆಲಸ ಮಾಡುವ ವೃತ್ತಿಪರರು ಪ್ರತಿದಿನ 4ರಿಂದ 5 ಗಂಟೆಗಳ ಕಾಲ ಯುಪಿಎಸ್‌ಸಿ ವಿದ್ಯಾಭ್ಯಾಸಕ್ಕೆ ನೀಡಬೇಕಾಗುತ್ತದೆ. ಹಾಗೆಯೇ ವಾರಾಂತ್ಯದಲ್ಲಿ ಕನಿಷ್ಠ 12 ಗಂಟೆಗಳ ಕಾಲ ಅಧ್ಯಯನ ಮಾಡಬೇಕು.

ವಿರಾಮವನ್ನು ಬಳಸಿಕೊಳ್ಳುವುದು

ಕೆಲಸ ಮಾಡುವ ವೃತ್ತಿಪರರು ಪ್ರಸ್ತುತ ಉದ್ಯೋಗದಲ್ಲಿ ಸಿಗುವ ವಿರಾಮವನ್ನು ಯುಪಿಎಸ್‌ಸಿ ಅಭ್ಯಾಸಕ್ಕೆ ಬಳಸಿಕೊಳ್ಳಬಹುದು. ಆ ಸಮಯದಲ್ಲಿ ಪತ್ರಿಕೆ, ಸುದ್ದಿ ಪೋರ್ಟಲ್‌‌ಗಳನ್ನು ಓದುವುದು, ಇತ್ತೀಚಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಳಸಿಕೊಳ್ಳಬಹುದು. ಅಲ್ಲದೆ, ಸಾರ್ವಜನಿಕ ಸಾರಿಗೆ ಮೂಲಕ ಪ್ರಯಾಣಿಸುವಾಗ ಪ್ರಯಾಣ ಸಮಯವನ್ನು ಅಧ್ಯಯನಕ್ಕೆ ಬಳಸಿಕೊಳ್ಳಬಹುದಾಗಿದೆ.

ಆರಂಭಿಕ ಸಿದ್ಧತೆ

ಪ್ರಿಲಿಮ್ಸ್‌‌ಗೆ ಕನಿಷ್ಠ 9ರಿಂದ 10 ತಿಂಗಳ ಮೊದಲು ಯುಪಿಎಸ್‌ಸಿ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ಈ ರೀತಿ ಮೊದಲೇ ಅಭ್ಯಾಸ ಪ್ರಾರಂಭಿಸುವ ಮೂಲಕ, ವೃತ್ತಿಪರರು ಐಚ್ಛಿಕ ವಿಷಯದ ಜೊತೆಗೆ ಇತಿಹಾಸ, ಆರ್ಥಿಕತೆ, ರಾಜಕೀಯ ಇತ್ಯಾದಿ ವಿಷಯಗಳಲ್ಲಿ ಗಟ್ಟಿಯಾದ ಅಡಿಪಾಯವನ್ನು ನಿರ್ಮಿಸಲು ಗಮನಹರಿಸಬಹುದು.

ಸೀಮಿತ ಸಂಪನ್ಮೂಲಗಳ ಆಯ್ಕೆ

ವೃತ್ತಿಪರರು ಅತಿ ಹೆಚ್ಚು ಮೂಲಗಳಿಂದ ಅಧ್ಯಯನ ಮಾಡಲು ಪ್ರಯತ್ನಿಸಬಾರದು. ಬದಲಿಗೆ, ಅವರು ಸೀಮಿತ ಮೂಲಗಳಿಂದ ಆಳವಾದ ಅಧ್ಯಯನವನ್ನು ಮಾಡಬೇಕು. ಅಧ್ಯಯನದ ಮೂಲಗಳನ್ನು ಕಡಿಮೆ ಮಾಡುವ ಮೂಲಕ, ಅವರು ಕಡಿಮೆ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತಯಾರಾಗಬಹುದು.

ರಜೆಗಳ ಉಪಯೋಗ

ವೃತ್ತಿಪರರು ತಮ್ಮ ರಜೆಗಳನ್ನು ವಿವೇಚನಾಯುಕ್ತವಾಗಿ ಬಳಸಿಕೊಳ್ಳಬೇಕು. ಪ್ರಿಲಿಮ್ಸ್‌‌ಗೆ ಕಡಿಮೆ ರಜೆ ಮತ್ತು ನಂತರ ಹೆಚ್ಚು ರಜೆಗಳನ್ನು ತೆಗೆದುಕೊಳ್ಳಬೇಕು. ರಜೆಗಳನ್ನು ಸರಿಯಾಗಿ ವಿಭಜಿಸಿಕೊಳ್ಳುವುದು (ಪ್ರಿಲಿಮ್ಸ್‌ಗೆ ಎರಡು ವಾರಗಳ ಮೊದಲು ಮತ್ತು ಮೇನ್ಸ್‌ಗೆ ಒಂದು ತಿಂಗಳ ಮೊದಲು) ಉತ್ತಮ ನಿರ್ಧಾರವಾಗಿರುತ್ತದೆ.

ಅನಗತ್ಯ ಕಾರ್ಯಕ್ರಮಗಳಿಂದ ತಪ್ಪಿಸಿಕೊಳ್ಳುವುದು

ಯುಪಿಎಸ್‌‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಸಾಮಾನ್ಯರಂತೆ ಪಬ್‌ಗಳಿಗೆ ಹೋಗುವುದು, ಸಾಮಾಜಿಕ ಕಾರ್ಯಕ್ರಮಗಳು ಅಥವಾ ಚಲನಚಿತ್ರ ನೋಡಲು ಹೋಗುವುದನ್ನು ತಡೆಹಿಡಿಯಬೇಕು. ಬದಲಿಗೆ ಅವರು ಗಂಭೀರವಾಗಿರಬೇಕು ಮತ್ತು ಪರೀಕ್ಷೆಗೆ ಅಧ್ಯಯನ ಮಾಡಲು ಸಮಯವನ್ನು ಬಳಸಬೇಕು.

ನಕಾರಾತ್ಮಕತೆಯಿಂದ ದೂರವಿರಿ

ಪ್ರತಿ ಯುಪಿಎಸ್‌‌ಸಿ ಆಕಾಂಕ್ಷಿಗಳಿಗೆ ಅತ್ಯಂತ ಸವಾಲಿನ ಸನ್ನಿವೇಶವೆಂದರೆ ಅವರ ಸುತ್ತಲಿನ ನಕಾರಾತ್ಮಕತೆ. ಅವರು ತಮ್ಮ ಮೇಲೆ ನಂಬಿಕೆಯನ್ನು ಹೊಂದಿರಬೇಕಾಗುತ್ತದೆ. ನಕಾರಾತ್ಮಕ ಜನರೊಂದಿಗೆ ಸಂಬಂಧವನ್ನು ಕಡಿತಗೊಳಿಸಬೇಕು ಮತ್ತು ನಿರಂತರ ಮಾರ್ಗದರ್ಶನ ಮತ್ತು ಪ್ರೇರಣೆಗಾಗಿ ಮಾರ್ಗದರ್ಶಕರ ಸಹಾಯವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.

Exit mobile version