ಶಿಕ್ಷಣ
UPSC Preparation : ವೃತ್ತಿಪರರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಕ್ಸೆಸ್ ಆಗಬೇಕಿದ್ದರೆ ಏನು ಮಾಡಬೇಕು?
ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಹಲವರ ಕನಸು. ಆ ಕನಸು ನನಸು ಮಾಡಿಕೊಳ್ಳುವುದಕ್ಕೆ ವೃತ್ತಿಪರರು ಯಾವ ರೀತಿಯಲ್ಲಿ ತಯಾರಿ ನಡೆಸಬೇಕು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎನ್ನುವುದು ಅನೇಕರ ಕನಸು. ಈ ಕನಸನ್ನು ನನಸು ಮಾಡಿಕೊಳ್ಳುವುದು ಎಲ್ಲೋ ಕೆಲವರು ಮಾತ್ರ. ಪ್ರತಿ ವರ್ಷವೂ ಈ ಪರೀಕ್ಷೆಗೆ ವಿದ್ಯಾರ್ಥಿಗಳು, ಹಲವು ವರ್ಷಗಳ ಕಾಲ ಇದ್ದಕ್ಕೆಂದೇ ಸಮಯ ಕೊಟ್ಟು ಕುಳಿತವರು ಮತ್ತು ವೃತ್ತಿಪರರೂ ಕೂಡ ಕೂರುತ್ತಾರೆ. ಆದರೆ ಅದರಲ್ಲಿ ಹೆಚ್ಚಾಗಿ ತೇರ್ಗಡೆಯಾಗುವುದು ಈ ಪರೀಕ್ಷೆಗೆಂದೇ ಸಮಯ ಕೊಟ್ಟು ಕುಳಿತವರು. ಹಾಗಾದರೆ ವೃತ್ತಿಪರರು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಯಾವ ರೀತಿಯಲ್ಲಿ ತಯಾರಿ (UPSC Preparation) ನಡೆಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ಇಲ್ಲಿದೆ ಮಾಹಿತಿ.
ಇದನ್ನೂ ಓದಿ: UPSC Recruitment 2023 : ಐಎಎಸ್, ಐಎಫ್‌ಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ
ಬೇಗನೆ ಏಳುವುದು
ಪ್ರತಿಯೊಬ್ಬ ಐಎಎಸ್ ಅಧಿಕಾರಿಯು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮುಂಜಾನೆ ಬೇಗ ಏಳುವಂತೆ ಸಲಹೆ ನೀಡುತ್ತಾರೆ. ಕೆಲಸ ಮಾಡುವ ವೃತ್ತಿಪರರು ಪ್ರತಿದಿನ 4ರಿಂದ 5 ಗಂಟೆಗಳ ಕಾಲ ಯುಪಿಎಸ್‌ಸಿ ವಿದ್ಯಾಭ್ಯಾಸಕ್ಕೆ ನೀಡಬೇಕಾಗುತ್ತದೆ. ಹಾಗೆಯೇ ವಾರಾಂತ್ಯದಲ್ಲಿ ಕನಿಷ್ಠ 12 ಗಂಟೆಗಳ ಕಾಲ ಅಧ್ಯಯನ ಮಾಡಬೇಕು.
ವಿರಾಮವನ್ನು ಬಳಸಿಕೊಳ್ಳುವುದು
ಕೆಲಸ ಮಾಡುವ ವೃತ್ತಿಪರರು ಪ್ರಸ್ತುತ ಉದ್ಯೋಗದಲ್ಲಿ ಸಿಗುವ ವಿರಾಮವನ್ನು ಯುಪಿಎಸ್‌ಸಿ ಅಭ್ಯಾಸಕ್ಕೆ ಬಳಸಿಕೊಳ್ಳಬಹುದು. ಆ ಸಮಯದಲ್ಲಿ ಪತ್ರಿಕೆ, ಸುದ್ದಿ ಪೋರ್ಟಲ್‌ಗಳನ್ನು ಓದುವುದು, ಇತ್ತೀಚಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಳಸಿಕೊಳ್ಳಬಹುದು. ಅಲ್ಲದೆ, ಸಾರ್ವಜನಿಕ ಸಾರಿಗೆ ಮೂಲಕ ಪ್ರಯಾಣಿಸುವಾಗ ಪ್ರಯಾಣ ಸಮಯವನ್ನು ಅಧ್ಯಯನಕ್ಕೆ ಬಳಸಿಕೊಳ್ಳಬಹುದಾಗಿದೆ.
ಆರಂಭಿಕ ಸಿದ್ಧತೆ
ಪ್ರಿಲಿಮ್ಸ್‌ಗೆ ಕನಿಷ್ಠ 9ರಿಂದ 10 ತಿಂಗಳ ಮೊದಲು ಯುಪಿಎಸ್‌ಸಿ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ಈ ರೀತಿ ಮೊದಲೇ ಅಭ್ಯಾಸ ಪ್ರಾರಂಭಿಸುವ ಮೂಲಕ, ವೃತ್ತಿಪರರು ಐಚ್ಛಿಕ ವಿಷಯದ ಜೊತೆಗೆ ಇತಿಹಾಸ, ಆರ್ಥಿಕತೆ, ರಾಜಕೀಯ ಇತ್ಯಾದಿ ವಿಷಯಗಳಲ್ಲಿ ಗಟ್ಟಿಯಾದ ಅಡಿಪಾಯವನ್ನು ನಿರ್ಮಿಸಲು ಗಮನಹರಿಸಬಹುದು.
ಸೀಮಿತ ಸಂಪನ್ಮೂಲಗಳ ಆಯ್ಕೆ
ವೃತ್ತಿಪರರು ಅತಿ ಹೆಚ್ಚು ಮೂಲಗಳಿಂದ ಅಧ್ಯಯನ ಮಾಡಲು ಪ್ರಯತ್ನಿಸಬಾರದು. ಬದಲಿಗೆ, ಅವರು ಸೀಮಿತ ಮೂಲಗಳಿಂದ ಆಳವಾದ ಅಧ್ಯಯನವನ್ನು ಮಾಡಬೇಕು. ಅಧ್ಯಯನದ ಮೂಲಗಳನ್ನು ಕಡಿಮೆ ಮಾಡುವ ಮೂಲಕ, ಅವರು ಕಡಿಮೆ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತಯಾರಾಗಬಹುದು.
ರಜೆಗಳ ಉಪಯೋಗ
ವೃತ್ತಿಪರರು ತಮ್ಮ ರಜೆಗಳನ್ನು ವಿವೇಚನಾಯುಕ್ತವಾಗಿ ಬಳಸಿಕೊಳ್ಳಬೇಕು. ಪ್ರಿಲಿಮ್ಸ್‌ಗೆ ಕಡಿಮೆ ರಜೆ ಮತ್ತು ನಂತರ ಹೆಚ್ಚು ರಜೆಗಳನ್ನು ತೆಗೆದುಕೊಳ್ಳಬೇಕು. ರಜೆಗಳನ್ನು ಸರಿಯಾಗಿ ವಿಭಜಿಸಿಕೊಳ್ಳುವುದು (ಪ್ರಿಲಿಮ್ಸ್‌ಗೆ ಎರಡು ವಾರಗಳ ಮೊದಲು ಮತ್ತು ಮೇನ್ಸ್‌ಗೆ ಒಂದು ತಿಂಗಳ ಮೊದಲು) ಉತ್ತಮ ನಿರ್ಧಾರವಾಗಿರುತ್ತದೆ.
ಅನಗತ್ಯ ಕಾರ್ಯಕ್ರಮಗಳಿಂದ ತಪ್ಪಿಸಿಕೊಳ್ಳುವುದು
ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಸಾಮಾನ್ಯರಂತೆ ಪಬ್‌ಗಳಿಗೆ ಹೋಗುವುದು, ಸಾಮಾಜಿಕ ಕಾರ್ಯಕ್ರಮಗಳು ಅಥವಾ ಚಲನಚಿತ್ರ ನೋಡಲು ಹೋಗುವುದನ್ನು ತಡೆಹಿಡಿಯಬೇಕು. ಬದಲಿಗೆ ಅವರು ಗಂಭೀರವಾಗಿರಬೇಕು ಮತ್ತು ಪರೀಕ್ಷೆಗೆ ಅಧ್ಯಯನ ಮಾಡಲು ಸಮಯವನ್ನು ಬಳಸಬೇಕು.
ನಕಾರಾತ್ಮಕತೆಯಿಂದ ದೂರವಿರಿ
ಪ್ರತಿ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಅತ್ಯಂತ ಸವಾಲಿನ ಸನ್ನಿವೇಶವೆಂದರೆ ಅವರ ಸುತ್ತಲಿನ ನಕಾರಾತ್ಮಕತೆ. ಅವರು ತಮ್ಮ ಮೇಲೆ ನಂಬಿಕೆಯನ್ನು ಹೊಂದಿರಬೇಕಾಗುತ್ತದೆ. ನಕಾರಾತ್ಮಕ ಜನರೊಂದಿಗೆ ಸಂಬಂಧವನ್ನು ಕಡಿತಗೊಳಿಸಬೇಕು ಮತ್ತು ನಿರಂತರ ಮಾರ್ಗದರ್ಶನ ಮತ್ತು ಪ್ರೇರಣೆಗಾಗಿ ಮಾರ್ಗದರ್ಶಕರ ಸಹಾಯವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.
ಅಂಕಣ
ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-6, ನಿಮ್ಮದೂ ಒಂದು ಯಶೋಗಾಥೆ ಯಾಕಾಗಬಾರದು?
ರಾಜ ಮಾರ್ಗ ಅಂಕಣ: ಇಲ್ಲಿರುವ ಒಂದೊಂದು ಯಶೋಗಾಥೆಯೂ ಸಾಧನೆಯಿಂದ ಅದ್ದಿ ತೆಗೆದದ್ದು. ಎಂಥೆಂಥ ಕಷ್ಟದ ಸನ್ನಿವೇಶಗಳಲ್ಲಿದ್ದರೂ ಸಾಧನೆ ಮಾಡಿದವರ ಕಥೆಗಳಿವು. ನಮಗೂ ಇವು ಸ್ಪೂರ್ತಿಯಾಗಲಿ.
ಪ್ರೀತಿಯ ವಿದ್ಯಾರ್ಥಿಗಳೇ,
ರ‍್ಯಾಂಕ್ ಪಡೆದವರಿಗೆ ಹತ್ತು ತಲೆ, ಹತ್ತು ಮೆದುಳು ಖಂಡಿತವಾಗಿ ಇರುವುದಿಲ್ಲ! ದಿನಕ್ಕೆ 48 ಘಂಟೆಗಳೂ ಇರುವುದಿಲ್ಲ! ಅವರು ನಿಮ್ಮ, ನಮ್ಮ ಹಾಗೆ ಸಾಮಾನ್ಯ ವಿದ್ಯಾರ್ಥಿಗಳು. ಆದರೆ ಅವರು ಬೇಗನೇ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾರೆ. ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳನ್ನು ಚೆನ್ನಾಗಿ ಓದುವ ಸಾಮರ್ಥ್ಯ ಹೊಂದಿರುತ್ತಾರೆ. ಪರೀಕ್ಷಾ ಕೊಠಡಿಯ ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳಿಗೆ ಟು ದ ಪಾಯಿಂಟ್ ಉತ್ತರ ಬರೆಯುತ್ತಾರೆ. ಬರೆದಾದ ನಂತರ ತುಂಬಾನೇ ಜಾಗರೂಕತೆಯಿಂದ ಉತ್ತರವನ್ನು ಚೆಕ್ ಮಾಡುತ್ತಾರೆ. ಪರೀಕ್ಷಾ ಕೊಠಡಿಯಲ್ಲಿ ತುಂಬಾ ಚೆನ್ನಾಗಿ ಸಮಯ ನಿರ್ವಹಣೆ ಮಾಡುತ್ತಾರೆ. ತುಂಬಾ ಅದ್ಭುತವಾದ ಆತ್ಮವಿಶ್ವಾಸ ಹೊಂದಿರುತ್ತಾರೆ ಅಷ್ಟೇ!
ಇದು ನಿಮ್ಮಿಂದಲೂ ಸಾಧ್ಯ ಇದೆ ಅಂದರೆ ನೀವು ನನ್ನ ಮುಂದಿನ ವರ್ಷಗಳ ತರಬೇತಿಯಲ್ಲಿ ಎಸ್ಸೆಸ್ಸೆಲ್ಸಿ ಯಶೋಗಾಥೆಗಳಾಗಿ ಸ್ಥಾನ ಪಡೆಯುತ್ತೀರಿ.
ಇನ್ನಷ್ಟು ಯಶೋಗಾಥೆಗಳು ನಿಮ್ಮ ಮುಂದೆ…..
11) ಅವರೆಲ್ಲ ನೃತ್ಯ, ಸಂಗೀತ, ನಾಟಕ ಎಲ್ಲದರಲ್ಲೂ ಇದ್ದರು.. ಕಲಿಕೆಯಲ್ಲೂ!
ಕಳೆದ ವರ್ಷ ಮೂಡಬಿದ್ರೆಯ ಆಳ್ವಾಸ್ ಪ್ರೌಢಶಾಲೆಯಿಂದ ಐದು ವಿದ್ಯಾರ್ಥಿಗಳು 625/625 ಅಂಕ ಪಡೆದರು. ಅವರೆಲ್ಲರೂ ಇಡೀ ವರ್ಷ ನೃತ್ಯ, ಸಂಗೀತ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ವಿಭಾಗಗಳಲ್ಲಿ ಸಕ್ರಿಯರಾಗಿ ಇದ್ದವರು. ಕ್ರೀಡೆಯಲ್ಲಿಯೂ ಸಾಧನೆ ಮಾಡಿದ್ದರು. ಅದ್ಯಾವುದೂ ಅವರಿಗೆ ಅಂಕ ಪಡೆಯಲು ಹಿನ್ನಡೆ ಆಗಲಿಲ್ಲ!
12) ಅಮ್ಮನ ಹೆಣ ಡಿಕ್ಕಿಯಲ್ಲಿತ್ತು, ಅಪ್ಪ ಕಾರಿನಲ್ಲಿ ಸುತ್ತಾಡಿಸುತ್ತಿದ್ದ!
ಶಿವಮೊಗ್ಗದ ಒಬ್ಬ ಅದ್ಭುತ ಹುಡುಗಿ 625/625 ಅಂಕಗಳನ್ನು ಪಡೆದು ಭಾರಿ ದೊಡ್ಡ ಸಾಧನೆ ಮಾಡಿದ್ದಳು. ದೊಡ್ಡ ಸಾಧನೆ ಏನೆಂದರೆ ಅವಳ ಜೀವನದಲ್ಲಿ ಆ ವರ್ಷ ದುರಂತ ಒಂದು ನಡೆದು ಹೋಗಿತ್ತು. ಅವಳ ಅಪ್ಪ ಆ ಊರಿನ ಬಹಳ ದೊಡ್ಡ ಸರ್ಜನ್ ಆಗಿದ್ದವನು ತನ್ನ ಹೆಂಡತಿಯನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿದ್ದನು. ಹೆಂಡತಿಯ ಹೆಣವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಹಾಸ್ಟೆಲಿನಿಂದ ಮಗಳನ್ನು ಕರೆದುಕೊಂಡು ಇಡೀ ರಾತ್ರಿ ಕಾರಿನಲ್ಲಿ ಸುತ್ತಾಡಿಸಿದ್ದಾನೆ. ಡಿಕ್ಕಿಯಲ್ಲಿ ಅಮ್ಮನ ಹೆಣ ಇರುವುದು ಮಗಳಿಗೆ ಗೊತ್ತೇ ಇರಲಿಲ್ಲ! ಬೆಳಿಗ್ಗೆ ಅಪ್ಪ ಅರೆಸ್ಟ್ ಆಗಿದ್ದಾನೆ!
ಅಮ್ಮನ ಹೆಣವನ್ನು ಅಂಗಳದಲ್ಲಿ ಇಟ್ಟುಕೊಂಡು ಇಡೀ ಕುಟುಂಬ ಕಣ್ಣೀರು ಹಾಕಿತ್ತು. ಹುಡುಗಿ ಚೇತರಿಸಿಕೊಳ್ಳಲು ಮೂರು ದಿನಗಳು ಬೇಕಾದವು. ಮುಂದೆ ಅಜ್ಜಿಯ ಪ್ರೀತಿ ಪಡೆದ ಆ ಹುಡುಗಿ ಅಮ್ಮನ ಫೋಟೋವನ್ನು ದೇವರ ಫೋಟೋದ ಪಕ್ಕ ಇಟ್ಟುಕೊಂಡು ನಮಸ್ಕಾರ ಮಾಡಿ ಓದಲು ಆರಂಭ ಮಾಡಿದ್ದಳು. ಆಕೆಗೂ 625/625 ಅಂಕ ಬಂತು! ನಾನು ನೋಡಿದ್ದ ಅತೀ ದೊಡ್ಡ ಮಿರಾಕಲ್ ಅದು!
13) ಅವನಿಗೆ ಕಣ್ಣೇ ಕಾಣುತ್ತಿರಲಿಲ್ಲ! ಆದರೆ ರಾಜ್ಯಕ್ಕೆ 10ನೇ ರ‍್ಯಾಂಕ್!
ಇನ್ನೊಬ್ಬ ಮಿರಾಕಲ್ ನಿಮಗೆ ಪರಿಚಯ ಮಾಡಬೇಕು. ಆತ ನನ್ನ ಟಿವಿ ಕಾರ್ಯಕ್ರಮಕ್ಕೆ ಸಂದರ್ಶನಕ್ಕೆ ಬಂದಿದ್ದ. 615/625 ಅಂಕಗಳು. ರಾಜ್ಯಕ್ಕೆ ಹತ್ತನೇ ರ‍್ಯಾಂಕ್. ಆಶ್ಚರ್ಯ ಅಂದರೆ ಅವನಿಗೆ ಎರಡೂ ಕಣ್ಣು ಕಾಣುತ್ತಲೇ ಇರಲಿಲ್ಲ. ಆತ ಹುಟ್ಟು ಕುರುಡ. ಆತನ ತಂಗಿ ಕೂಡ ಕುರುಡಿ. ಅಮ್ಮ ಆ ಇಬ್ಬರು ಮಕ್ಕಳನ್ನು ಬಹಳ ಕಷ್ಟದಲ್ಲಿ ಬೆಳೆಸಿದವರು. ಆಗ ಡಾಕ್ಟರ್ ಮೋಹನ್ ಆಳ್ವ ಆ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದರು.
ಅವನು ಹೇಳುವ ಪ್ರಕಾರ ಆತನಿಗೆ ಬೋರ್ಡ್ ಕಾಣಿಸುತ್ತಿರಲಿಲ್ಲ. ಅವನು ಮೊದಲ ಬೆಂಚಿನಲ್ಲಿ ಕೂತು ಪಾಠವನ್ನು ಕೇಳುತ್ತ ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡುತ್ತಿದ್ದನು. ಆಗಲೇ ಅವನು ಟೇಪ್ ರೆಕಾರ್ಡರ್ ಬಳಸಿಕೊಂಡು ಅವನು ಅಧ್ಯಾಪಕರ ಪಾಠವನ್ನು ಪೂರ್ತಿ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದ. ಹಾಸ್ಟೆಲ್ ರೂಮಿಗೆ ಹೋಗಿ ಆ ಪಾಠವನ್ನು ಮತ್ತೆ ಮತ್ತೆ ಕೇಳುತ್ತಾ ಲಾಪ್‌ಟಾಪ್ ನಲ್ಲಿ ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡುತ್ತಿದ್ದನು. ಸತತ ಸಾಧನೆಯ ಮೂಲಕ ಅವನು ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ಪಡೆದಿದ್ದಾನೆ!
14) ಅವಳಿಗೆ ಅಪ್ಪ ಇಲ್ಲ. ಅಮ್ಮನ ಮಾನಸಿಕ ಆರೋಗ್ಯವೇ ಸರಿ ಇಲ್ಲ
ಉಡುಪಿಯ ಕೋಟಾ ವಿವೇಕ ಪದವಿಪೂರ್ವ ಕಾಲೇಜಿನ ಒಬ್ಬಳು ಹುಡುಗಿ 623/625 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಳು. ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದಳು. ಅವಳಿಗೆ ಅಪ್ಪ ಇಲ್ಲ. ಅಮ್ಮ ಹಲವು ಮನೆಗಳಲ್ಲಿ ಕೆಲಸ ಮಾಡಿ ಮಗಳನ್ನು ಸಾಕುತ್ತಿದ್ದಾರೆ. ಸಣ್ಣ ಒಂದು ಬಾಡಿಗೆ ಮನೆ ಅವರದ್ದು. ಅವಳ ಅಮ್ಮ ಜೀವನದಲ್ಲಿ ಹೆಚ್ಚು ನೋವನ್ನು ತೆಗೆದುಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ನನಗೆ ಆ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದರು. ಅವರ ಮನೆಯವರಿಗೆ ಅಧ್ಯಾಪಕರು ಬಿಟ್ಟರೆ ಬೇರೆ ಯಾರೂ ಸಪೋರ್ಟ್ ಇಲ್ಲ. ಆದರೂ ಆ ಹುಡುಗಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾಳೆ!
15) ಅವಳಿಗೆ ಒಂದು ವಾಕ್ಯ ಮಾತನಾಡಲು ಎರಡು ನಿಮಿಷ ಬೇಕು.. ಆದರೆ,
ಇನ್ನೊಬ್ಬ ಹುಡುಗಿ ಅಂಕೋಲಾ ತಾಲೂಕಿನವಳು. ಅತ್ಯಂತ ಸುಂದರವಾದ ಹುಡುಗಿ. ಪ್ರೈಮರಿ ಶಾಲೆಯ ಶಿಕ್ಷಕಿಯ ಮಗಳು. 616/625 ಅಂಕ ಪಡೆದ ಅವಳು ರಾಜ್ಯಕ್ಕೇ ಒಂಬತ್ತನೇ ರಾಂಕ್. ಆಶ್ಚರ್ಯ ಅಂದರೆ ಅವಳಿಗೆ ಎರಡೂ ಕಿವಿಗಳು ಕೇಳುವುದಿಲ್ಲ! ತುಂಬಾ ಉಗ್ಗುವಿಕೆ ಇರುವ ಕಾರಣ ಮಾತು ತುಂಬಾ ನಿಧಾನ! ಒಂದು ವಾಕ್ಯ ಪೂರ್ತಿ ಮಾಡಲು ಅವಳು ಕನಿಷ್ಠ ಒಂದೆರಡು ನಿಮಿಷ ತೆಗೆದುಕೊಳ್ಳುತ್ತಾಳೆ! ಆದರೆ ಸಮಸ್ಯೆ ಇರುವುದು ಕಿವಿಯದ್ದು. ಅವಳ ಅಮ್ಮ ಹೇಳುವ ಪ್ರಕಾರ ಅವಳಿಗೆ 10% ಮಾತ್ರ ಕಿವಿ ಕೇಳುತ್ತದೆ. ಸ್ಪೆಷಲ್ ಇಯರ್ ಫೋನ್ ಹಾಕಿದಾಗ 20-30% ಮಾತ್ರ ಕೇಳುತ್ತದೆ! ಅದಕ್ಕಾಗಿ ಅವಳು ಮುಂದಿನ ಬೆಂಚಿನಲ್ಲಿ ಕುಳಿತು ಮೊಬೈಲಿನಲ್ಲಿ ಶಿಕ್ಷಕರು ಮಾಡಿದ ಪಾಠ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ಮನೆಗೆ ಹೋಗಿ ಆ ಪಾಠವನ್ನು ಹಲವಾರು ಬಾರಿ ಕೇಳಿ ನೋಟ್ಸ್ ಮಾಡುತ್ತಾಳೆ. ಮುದ್ದಾದ ಅಕ್ಷರ ಅವಳದ್ದು. ಆ ಹುಡುಗಿಯನ್ನು ಕೂಡ ನಾನು ಮಿರಾಕಲ್ ಎಂದು ಕರೆಯುತ್ತೇನೆ!
16) ಕುರಿ ಮೇಯಿಸುತ್ತಿದ್ದ ಹುಡುಗ ಶಾಲೆ ಆರಂಭಿಸಿದ್ದೇ ಮೂರನೇ ಕ್ಲಾಸಿಂದ!
ಇನ್ನೊಬ್ಬ ಹುಡುಗ ಬಯಲು ಸೀಮೆಯವನು. ಅವನ ಅಪ್ಪ ಅಮ್ಮ ಇಬ್ಬರೂ ಅನಕ್ಷರಸ್ಥರು. ಅವನೂ ಒಂಬತ್ತು ವರ್ಷಗಳವರೆಗೆ ಕುರಿಗಳನ್ನು ಮೇಯಿಸಿಕೊಂಡು ಇದ್ದವನು. ಮುಂದೆ ಯಾರೋ ಅವನನ್ನು ಶಾಲೆಗೆ ಕರೆದುಕೊಂಡು ಮೂರನೇ ತರಗತಿಗೆ ಸೇರಿಸುತ್ತಾರೆ. ಅದು ಸರಕಾರಿ ಶಾಲೆ, ಕನ್ನಡ ಮಾಧ್ಯಮ. ಆದರೆ ಆ ಹುಡುಗ ಅದ್ಭುತವಾಗಿ ಚೇತರಿಸಿಕೊಂಡ. ಕಲಿಯುವ ಸಾಮರ್ಥ್ಯವು ಹೆಚ್ಚಾಯಿತು. ಅಧ್ಯಾಪಕರ ಪ್ರೋತ್ಸಾಹ ದೊರೆಯಿತು. ಆ ಹುಡುಗನು 618/625 ಅಂಕ ತೆಗೆದುಕೊಂಡ ವರದಿ ಬಂದಿದೆ!
17) ಕನಿಷ್ಠ ಪರೀಕ್ಷೆ ಬರೆಯಲೂ ಅವನಿಗೆ ಕೈಗಳೇ ಇರಲಿಲ್ಲ!
ಕರಾವಳಿ ಜಿಲ್ಲೆಯ ಒಬ್ಬ ಹುಡುಗನಿಗೆ ಎರಡೂ ಕೈಗಳು ಇಲ್ಲದೆ ಹೋದಾಗ ಅವನು ತನ್ನ ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಎಸೆಸೆಲ್ಸಿ ಪರೀಕ್ಷೆಗೆ ಬರೆದು ಉತ್ತಮ ಅಂಕ ಪಡೆದಿದ್ದ. ಎಲ್ಲ ಪತ್ರಿಕೆಗಳಲ್ಲಿಯು ಅದು ಮುಖಪುಟ ನ್ಯೂಸ್ ಆಗಿತ್ತು. ಸ್ವತಃ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಆತನ ಮನೆಗೆ ಬಂದು ಆತನನ್ನು ಅಭಿನಂದನೆ ಮಾಡಿ ಹೋಗಿದ್ದರು.
ಭರತವಾಕ್ಯ – ನನ್ನ ಹತ್ತಿರ ಈ ರೀತಿಯ ನೂರಾರು ಯಶೋಗಾಥೆಗಳು ಇವೆ. ನನ್ನ ತರಬೇತಿ ಕಾರ್ಯಕ್ರಮದಲ್ಲಿ ನನಗೆ ಪ್ರತೀ ಊರಲ್ಲಿಯೂ ಇಂತಹ ಪ್ರತಿಭೆಗಳು ದೊರೆಯುತ್ತವೆ. ಅವರಿಗೆಲ್ಲ ನಮ್ಮದೊಂದು ಸೆಲ್ಯೂಟ್ ಇರಲಿ. ಮುಂದಿನ ವರ್ಷದ ನನ್ನ ತರಬೇತಿಯಲ್ಲಿ ನಿಮ್ಮ ಸಾಧನೆಯೂ ಒಂದು ಅದ್ಭುತ ಯಶೋಗಾಥೆಯಾಗಿ ಸ್ಥಾನವನ್ನು ಪಡೆಯಲಿ!
(ಮುಂದುವರಿಯುವುದು)
ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು
- 1. ರಾಜ ಮಾರ್ಗ: ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
- 2. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್ಫುಲ್ ಟಿಪ್ಸ್-ಭಾಗ 2
- 3. ರಾಜ ಮಾರ್ಗ : SSLC ಪರೀಕ್ಷೆ ಅಂತಿಮ ತಯಾರಿ ಭಾಗ-3 ; ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು
- 4. ರಾಜ ಮಾರ್ಗ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
- 5. ರಾಜ ಮಾರ್ಗ ಅಂಕಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-5, ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು!
ದೇಶ
SC ST Scholarship: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೀಘ್ರವೇ ಬಂಪರ್, ಏರಿಕೆ ಆಗಲಿದೆ ವಿದ್ಯಾರ್ಥಿ ವೇತನ
SC ST Scholarship: ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ ವಿದ್ಯಾರ್ಥಿ ವೇತನವನ್ನು ಪರಿಷ್ಕರಣೆ ಮಾಡಬೇಕು ಎಂಬುದಾಗಿ ಸಂಸದೀಯ ಸ್ಥಾಯಿ ಸಮಿತಿಯೊಂದು ಶಿಫಾರಸು ಮಾಡಿದೆ. ಹಾಗಾಗಿ, ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದೇ ಹೇಳಲಾಗುತ್ತಿದೆ.
ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು (SC ST Scholarship) ಏರಿಕೆ ಮಾಡಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹಾಗಾಗಿ, ಕೇಂದ್ರ ಸರ್ಕಾರವು ಈ ಕುರಿತು ಶೀಘ್ರದಲ್ಲಿಯೇ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
“ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿದೆ. ಅದರಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವು ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರವು ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಅನ್ನು ವಾರ್ಷಿಕವಾಗಿ ಪರಿಷ್ಕರಣೆ ಮಾಡಬೇಕು. ಇದರಿಂದ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳು ಶೈಕ್ಷಣಿಕ ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗಲಿದೆ” ಎಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣದ ಕುರಿತ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.
ವಾರ್ಷಿಕವಾಗಿ ಹೇಗೆ ವಿದ್ಯಾರ್ಥಿ ವೇತನವನ್ನು ಪರಿಷ್ಕರಣೆ ಮಾಡಬೇಕು ಎಂಬುದರ ಕುರಿತು ಸರ್ಕಾರವು ಮಾರ್ಗಸೂಚಿ ತಯಾರಿಸಬೇಕು. ಇದರ ಬಗ್ಗೆ ಚರ್ಚಿಸಲು, ನಿರ್ಧಾರ ತೆಗೆದುಕೊಳ್ಳಲು ಸಮಿತಿಯೊಂದನ್ನು ರಚಿಸಬೇಕು. ಆ ಮೂಲಕ ಆಯಾ ಹಣಕಾಸು ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿ ವೇತನ ಹೆಚ್ಚಿಸಬಹುದು ಎಂಬುದರ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.
ಸದ್ಯ ಎಷ್ಟಿದೆ ವಿದ್ಯಾರ್ಥಿ ವೇತನ?
ಮೆಟ್ರಿಕ್ ಪೂರ್ವ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ ಈಗ 10 ತಿಂಗಳಿಗೆ 225-525 ರೂಪಾಯಿ ಸ್ಟೈಪೆಂಡ್ ದೊರೆಯುತ್ತಿದೆ. ಹಾಗೆಯೇ, ವಾರ್ಷಿಕವಾಗಿ ಪುಸ್ತಕಗಳ ವೆಚ್ಚಕ್ಕೆ 750-1000 ರೂ. ನೀಡಲಾಗುತ್ತದೆ. ಹಾಗೆಯೇ, ಮೆಟ್ರಿಕ್ ನಂತರದ ಅಂದರೆ, ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ಎಸ್‌ಸಿ ವಿದ್ಯಾರ್ಥಿಗಳಿಗೆ 7 ಸಾವಿರ ರೂ.ನಿಂದ 13,500 ರೂ. ಸ್ಟೈಪೆಂಡ್ ನೀಡಲಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ವರದಿ ತಿಳಿಸಿದೆ.
ಪದವಿಯೇತರ ಕೋರ್ಸ್ ಅಧ್ಯಯನ ಮಾಡುತ್ತಿರುವ ಎಸ್‌ಸಿ 2,400 ರೂ.ನಿಂದ 4 ಸಾವಿರ ರೂ. ಸ್ಟೈಪೆಂಡ್ ನೀಡಲಾಗುತ್ತದೆ. ಇನ್ನು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಎಸ್‌ಟಿ ವಿದ್ಯಾರ್ಥಿಗಳಿಗೆ ಮಾಸಿಕ 500 ರೂ.ನಿಂದ 1,200 ರೂ. ನೀಡಲಾಗುತ್ತದೆ. ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ಪರಿಷ್ಕರಣೆ ಮಾಡಲಾಗಿದೆ.
ಇದನ್ನೂ ಓದಿ: SC ST Reservation | ಎಸ್‌ಸಿ ಎಸ್‌ಟಿ ಹೊಸ ಮೀಸಲಾತಿಯ ರೋಸ್ಟರ್ ಪ್ರಕಟ; ನೇಮಕಾತಿಗೆ ದಾರಿ ಸುಗಮ
ಕರ್ನಾಟಕ
SSLC Exam 2023: ಮಾ.31ರಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
SSLC Exam 2023: ರಾಜ್ಯಾದ್ಯಂತ ಮಾ.31ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರುವಾಗಲಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದ್ದು ಅಂತಿಮ ಹಂತದ ತಯಾರಿ ನಡೆಯುತ್ತಿದೆ.
ಬೆಂಗಳೂರು: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆಯು (SSLC Exam 2023) ಮಾರ್ಚ್ 31ರಿಂದ ಆರಂಭವಾಗುತ್ತಿದೆ. ಈ ಬಾರಿ ಪರೀಕ್ಷೆಗೆ 15,498 ಶಾಲೆಗಳು ನೋಂದಾಯಿಸಿಕೊಂಡಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಈ ಬಾರಿ ಪರೀಕ್ಷೆಗೆ 5,833 ಸರ್ಕಾರಿ ಶಾಲೆಗಳು, 3,605 ಅನುದಾನಿತ ಶಾಲೆಗಳು, 6060 ಅನುದಾನರಹಿತ ಶಾಲೆಗಳು ನೋಂದಾಯಿಸಿಕೊಂಡಿವೆ. ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಇದರಲ್ಲಿ ಹೊಸಬರು 7,94,611 ವಿದ್ಯಾರ್ಥಿ, ಪುನರಾವರ್ತಿತ ವಿದ್ಯಾರ್ಥಿಗಳು 20,750 ಹಾಗೂ 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನವರು 301 ಮಂದಿ ಇದ್ದರೆ, 2010ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ 15 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳ 3,60,862 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,20,831, ಅನುದಾನರಹಿತ ಶಾಲೆಗಳ 2,61,118 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 3,305 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಜೆರಾಕ್ಸ್ ಸೆಂಟರ್ ಮತ್ತು ಸೈಬರ್ ಸೆಂಟರ್‌ಗಳನ್ನು ತೆರಯುವಂತಿಲ್ಲ.
ಕೆಎಸ್‌ಆರ್‌ಟಿಸಿ-ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಉಚಿತ
ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆ (SSLC Exam 2023) ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಗಮದ ಎಲ್ಲ ಬಸ್‌ಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ.
ಪರೀಕ್ಷೆಯ ದಿನದಂದು ಅಂದರೆ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೂ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ ಪ್ರಯಾಣಿಸಬಹುದಾಗಿದೆ. ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ತೆರಳಲು ಮತ್ತು ವಾಪಸ್ ಮರಳಲು ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ: Karnataka Election 2023: ಬಿಜೆಪಿಯದ್ದು ಬಿಟ್ಟು ಕಾಂಗ್ರೆಸ್ ಪೋಸ್ಟರ್ ಕಿತ್ತುಹಾಕಿದ ಬಿಬಿಎಂಪಿ; ಕಾಂಗ್ರೆಸ್ ಕಿಡಿ
ಈ ಸಂಬಂಧ ನಿಗಮದ ಎಲ್ಲ ಚಾಲಕ/ನಿರ್ವಾಹಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳು ಬಸ್ಸನ್ನು ಹತ್ತುವವರಿದ್ದಲ್ಲಿ ಹಾಗೂ ಬಸ್ ಹೋಗುವ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳು ಬಸ್ಸನ್ನು ಹತ್ತಲು/ ಇಳಿಯಲು ಅನುಕೂಲವಾಗುವಂತೆ ಕೋರಿಕೆ ನಿಲುಗಡೆ ನೀಡಲು ನಿಗಮ ಸಿಬ್ಬಂದಿಗೆ ಸೂಚಿಸಿದೆ.
ಕರ್ನಾಟಕ
Appointment of Registrar: ರಾಜ್ಯದ 8 ವಿಶ್ವವಿದ್ಯಾಲಯಗಳಿಗೆ ನೂತನ ಕುಲಸಚಿವರ ನೇಮಕ
Appointment of Registrar: ರಾಜ್ಯದ 8 ವಿಶ್ವವಿದ್ಯಾಲಯಗಳಿಗೆ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನೂತನ ಕುಲಸಚಿವರನ್ನು (ಮೌಲ್ಯಮಾಪನ) ನೇಮಕ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ 8 ವಿಶ್ವವಿದ್ಯಾಲಯಗಳಿಗೆ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನೂತನ ಕುಲಸಚಿವರನ್ನು (ಮೌಲ್ಯಮಾಪನ) (Appointment of Registrar) ನೇಮಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ನೇಮಕಾತಿ ಆದೇಶದ ಸಂಪೂರ್ಣ ಮಾಹಿತಿ ಇಲ್ಲಿದೆ.
8 ವಿಶ್ವವಿದ್ಯಾಲಯಗಳ ನೂತನ ಕುಲಸಚಿವರ ಪಟ್ಟಿ
ಹಾಸನ ವಿಶ್ವವಿದ್ಯಾಲಯ– ಡಾ. ಪುಟ್ಟಸ್ವಾಮಿ, ಪ್ರಾಧ್ಯಾಪಕರು, ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ, ಹಾಸನ
ಚಾಮರಾಜನಗರ– ಡಾ. ಪಿ. ಮಾದೇಶ್, ಪ್ರಾಧ್ಯಾಪಕರು, ಭೂ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು
ಕೊಪ್ಪಳ ವಿಶ್ವವಿದ್ಯಾಲಯ– ಡಾ. ಕೆ. ವಿ. ಪ್ರಸಾದ್, ಪ್ರಾಧ್ಯಾಪಕರು, ಗಣಿತ ವಿಭಾಗ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
ಹಾವೇರಿ ವಿಶ್ವವಿದ್ಯಾಲಯ– ಪ್ರೊ. ವಿಜಯಲಕ್ಷ್ಮೀ ತಿರ್ಲಾಪುರ, ಮುಖ್ಯಸ್ಥರು, ಆಂಗ್ಲ ವಿಭಾಗ ಮರಾಠಾ ಮಂಡಳ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಖಾನಾಪುರ, ಬೆಳಗಾವಿ
ಬಾಗಲಕೋಟೆ ವಿಶ್ವವಿದ್ಯಾಲಯ– ಡಾ. ಖಡ್ಕೆ ಉದಯಕುಮಾರ್, ಸಹ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು, ಭೌತಶಾಸ್ತ್ರ ವಿಭಾಗ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
ಕೊಡಗು ವಿಶ್ವವಿದ್ಯಾಲಯ– ಡಾ. ಸೀನಪ್ಪ, ಪ್ರಾಂಶುಪಾಲರು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮಾದಪಟ್ಟಣ, ಮಡಿಕೇರಿ ರಸ್ತೆ, ಕುಶಾಲನಗರ
ಬೀದರ್ ವಿಶ್ವವಿದ್ಯಾಲಯ– ಡಾ. ಪರಮೇಶ್ವರನಾಯ್ಕ್. ಬಿ, ಪ್ರಾಧ್ಯಾಪಕರು, ಸಸ್ಯಶಾಸ್ತ್ರ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ,
ಮೈಸೂರು ವಿಶ್ವವಿದ್ಯಾಲಯ- ಡಾ. ಕೆ.ಎಂ. ಮಹಾದೇವನ್, ಪ್ರಾಧ್ಯಾಪಕರು, ರಸಾಯನಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಪಿಜಿ ಸೆಂಟರ್, ಕಡೂರು
ರಾಜ್ಯದ 7 ನೂತನ ವಿವಿಗಳಿಗೆ ಕುಲಪತಿಗಳ ನೇಮಕ
ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಿರುವ 7 ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು (Vice Chancellor) ಮಾ.20ರಂದು ನೇಮಿಸಲಾಗಿದೆ.
ಇದನ್ನೂ ಓದಿ | Teacher Transfer : ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಶಿಕ್ಷಣ ಇಲಾಖೆ ಮನವಿ
ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ. ರವಿ ಅವರನ್ನು ಕೊಪ್ಪಳ ವಿವಿ, ಬಾಗಲಕೋಟೆಯ ತೋಟಗಾರಿಕೆ ವಿವಿಯ ಡಾ. ಅಶೋಕ ಸಂಗಪ್ಪ ಆಲೂರು ಅವರನ್ನು ಕೊಡಗು ವಿವಿ, ಮೈಸೂರು ವಿವಿ ಮಾನವಶಾಸ್ತ್ರ ವಿಭಾಗದ ಡಾ. ಎಂ.ಆರ್. ಗಂಗಾಧರ ಅವರನ್ನು ಚಾಮರಾಜನಗರ ವಿವಿ, ಬೆಳಗಾವಿಯ ಕೆ. ಎಸ್. ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದ್ ಶರದ್ ದೇಶಪಾಂಡೆ ಅವರನ್ನು ಬಾಗಲಕೋಟೆ ವಿವಿ, ಕುವೆಂಪು ವಿವಿಯ ಡಾ. ಬಿ.ಎಸ್. ಬಿರಾದಾರ್ ಅವರನ್ನು ಬೀದರ್ ವಿವಿ, ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಡಾ.ಸುರೇಶ್ ಎಚ್. ಜಂಗಮಶೆಟ್ಟಿ ಅವರನ್ನು ಹಾವೇರಿ ವಿವಿ ಮತ್ತು ಧಾರವಾಡದ ಕರ್ನಾಟಕ ವಿವಿ ನಿವೃತ್ತ ಪ್ರೊಫೆಸರ್ ಆಗಿರುವ ಡಾ. ಟಿ.ಸಿ. ತಾರಾನಾಥ್ ಅವರನ್ನು ಹಾಸನ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಿಸಲಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ನೂತನ 7 ವಿಶ್ವವಿದ್ಯಾಲಯಗಳ ಕುಲಪತಿಗಳು
- ಡಾ. ಬಿ.ಕೆ.ರವಿ – ಕೊಪ್ಪಳ ವಿಶ್ವವಿದ್ಯಾಲಯ
- ಅಶೋಕ್ ಸಂಗಪ್ಪ ಆಲೂರು – ಕೊಡಗು ವಿವಿ
- ಡಾ.ಎಂ.ಆರ್ ಗಂಗಾಧರ್ – ಚಾಮರಾಜನಗರ ವಿವಿ
- ಡಾ.ಆನಂದ್ ಶರದ್ – ಬಾಗಲಕೋಟೆ ವಿವಿ
- ಡಾ.ಬಿ.ಎಸ್ ಬಿರಾದಾರ – ಬೀದರ್ ವಿವಿ
- ಡಾ.ಸುರೇಶ್ ಎಚ್ ಜಂಗಮಶೆಟ್ಟಿ – ಹಾವೇರಿ ವಿವಿ
- ಡಾ.ಟಿ.ಸಿ.ತಾರಾನಾಥ – ಹಾಸನ ವಿವಿ
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್10 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!