Site icon Vistara News

UPSC: ಐಇಎಸ್‌ / ಐಎಸ್‌ಎಸ್‌ಇ 2024 ಪರೀಕ್ಷೆಯ ದಿನಾಂಕ ಪ್ರಕಟ: ಇಲ್ಲಿದೆ ವೇಳಾಪಟ್ಟಿ

UPSC

UPSC

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (UPSC)ವು 2024ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ (Indian Economic Service-IES) / ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ (Indian Statistical Service Examination-ISSE)ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯುಪಿಎಸ್‌ಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಟೈಮ್‌ ಟೇಬಲ್‌ ಪ್ರಕಟಿಸಿದ್ದು, ಈ ಬಗ್ಗೆ ವಿವರ ಇಲ್ಲಿದೆ.

ಯಾವಾಗ, ಯಾವ ಪರೀಕ್ಷೆ?

ಯುಪಿಎಸ್‌ಸಿ ಐಇಎಸ್ / ಐಎಸ್ಎಸ್ಇ 2024 ಪರೀಕ್ಷೆಗಳು ಜೂನ್ 21ರಂದು ಆರಂಭವಾಗಲಿದ್ದು, 22, 23ರಂದು ನಡೆಯಲಿದೆ. ಈ ಪರೀಕ್ಷೆ ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಅಧ್ಯಯನ, ಸಾಮಾನ್ಯ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಭಾರತೀಯ ಅರ್ಥಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳಲ್ಲಿ ನಡೆಯಲಿದೆ. ಆರ್ಥಿಕ ಮತ್ತು ಸಂಖ್ಯಾಶಾಸ್ತ್ರೀಯ ಕ್ಷೇತ್ರಗಳಲ್ಲಿ ವೃತ್ತಿ ಜೀವನದ ನಡೆಸಲು ಬಯಸುವವರು ಈ ಪ್ರತಿಷ್ಠಿತ ಪರೀಕ್ಷೆಯ ವೇಳಾಪಟ್ಟಿಯನ್ನು ಎಚ್ಚರಿಕೆಯಿಂದ ಗಮನಿಸುವಂತೆ ಪ್ರಕಟಣೆ ತಿಳಿಸಿದೆ. ಪ್ರಶ್ನೆ ಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಜೂನ್‌ 21ರಂದು ಬೆಳಿಗ್ಗೆ 9 ಗಂಟೆಗೆ ಸಾಮಾನ್ಯ ಇಂಗ್ಲಿಷ್‌ ಮತ್ತು ಅಪರಾಹ್ನ 2.30ಕ್ಕೆ ಸಾಮಾನ್ಯ ಅಧ್ಯಯನ ಪರೀಕ್ಷೆ ನಡೆಯಲಿದೆ. ಜೂನ್‌ 22ರಂದು ಬೆಳಿಗ್ಗೆ 9 ಗಂಟೆಗೆ ಸಾಮಾನ್ಯ ಅರ್ಥಶಾಸ್ತ್ರ-I, ಸ್ಟ್ಯಾಟಿಸ್ಟಿಕ್ಸ್‌-I ಮತ್ತು ಅಪರಾಹ್ನ 2.30ರಿಂದ ಸಾಮಾನ್ಯ ಅರ್ಥಶಾಸ್ತ್ರ-II ಹಾಗೂ ಸ್ಟ್ಯಾಟಿಸ್ಟಿಕ್ಸ್‌-II ಎಕ್ಸಾಂ ಆಯೋಜಿಸಲಾಗಿದೆ. ಇನ್ನು ಜೂನ್‌ 23ರಂದು ಬೆಳಿಗ್ಗೆ 9 ಗಂಟೆಯಿಂದ ಸಾಮಾನ್ಯ ಅರ್ಥಶಾಸ್ತ್ರ-III ಮತ್ತು ಸ್ಟ್ಯಾಟಿಸ್ಟಿಕ್ಸ್‌-III ಹಾಗೂ ಅಪರಾಹ್ನ 2.30ರಿಂದ ಭಾರತೀಯ ಅರ್ಥಶಾಸ್ತ್ರ ಹಾಗೂ ಸ್ಟ್ಯಾಟಿಸ್ಟಿಕ್ಸ್‌-IV ಪರೀಕ್ಷೆ ನಡೆಯಲಿದೆ.

ವೇಳಾಪಟ್ಟಿ ವೀಕ್ಷಿಸಲು ಹೀಗೆ ಮಾಡಿ

Indian Economic Service – Indian Statistical Service Examinationನ ಟೈಮ್‌ ಟೇಬಲ್‌ ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ.

ಹಾಲ್‌ ಟಿಕೆಟ್‌ ಯಾವಾಗ?

ಈ ಪರೀಕ್ಷೆಗೆ 2024ರ ಏಪ್ರಿಲ್ 10ರಿಂದ 30ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಲಿಖಿತ ಪರೀಕ್ಷೆಯು ಗರಿಷ್ಠ 1,000 ಅಂಕಗಳನ್ನು ಹೊಂದಿದೆ. ಪ್ರವೇಶ ಪತ್ರ (Hall Ticket)ವನ್ನು ಪರೀಕ್ಷೆಯ ಏಳು ದಿನಗಳ ಮೊದಲು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಬಹುದು. ಈ ಪರೀಕ್ಷೆಯ ಮೂಲಕ ಆಯ್ಕೆಯಾದ ಅಧಿಕಾರಿಗಳನ್ನು ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಹಾಗೂ ಕಾರ್ಯಗತಗೊಳಿಸುವಲ್ಲಿ ಮತ್ತು ಸರ್ಕಾರದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಲು ನೇಮಿಸಲಾಗುತ್ತದೆ.

ಇದನ್ನೂ ಓದಿ: UPSC EXAM-2023: ಯುಪಿಎಸ್‌ಸಿ ಟಾಪರ್ ವಾಸಿಸುತ್ತಿದ್ದುದು ಮನೆಯಲ್ಲಲ್ಲ, ಈ ಜೋಪಡಿಯಲ್ಲಿ!

Exit mobile version