Site icon Vistara News

India Vs Bharat: ಶಾಲಾ ಪುಸ್ತಕಗಳಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ’ ಬಳಕೆಗೆ ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು

Ramayana, Mahabharata likely to be part of NCERT SS Textbook Says Committee

ನವದೆಹಲಿ: ಶಾಲಾ ಪಠ್ಯಗಳಲ್ಲಿ (School Textbooks) ಇಂಡಿಯಾ (India) ಪದ ಬದಲಿಗೆ ಭಾರತ (Bharat) ಪದ ಬಳಸಲು ಉನ್ನತಾಧಿಕಾರದ ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು ಮಾಡಿದೆ(NCERT panel recommends). ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ರಚಿಸಿರುವ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿಯು, ಪ್ರಾಚೀನ ಇತಿಹಾಸದ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ ಎಂದು ಪರಿಚಯಿಸಲು ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಬುಧವಾರ ಹೇಳಿದರು(India Vs Bharat).

ಹೊಸ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಅಭಿವೃದ್ಧಿಗೆ ಅಡಿಪಾಯ ಹಾಕುವ ಪ್ರಮುಖ ದಾಖಲೆಯಾಗಿರುವ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ಏಳು ಸದಸ್ಯರ ಸಮಿತಿಯು ಸರ್ವಾನುಮತ ಶಿಫಾರಸಗಳನ್ನು ನೀಡಿದೆ.

ಸಂವಿಧಾನದ ಆರ್ಟಿಕಲ್ 1ರಲ್ಲಿ ಇಂಡಿಯಾ ಎಂದು ಹೇಳಲಾಗುವ ಭಾರತವು ಒಕ್ಕೂಟಗಳ ರಾಷ್ಟ್ರವಾಗಿದೆ ಎಂದು ತಿಳಿಸಲಾಗಿದೆ. ಭಾರತವು ಪ್ರಾಚೀನ ಹೆಸರಾಗಿದ್ದು, 7000 ವರ್ಷಗಳ ಪ್ರಾಚೀನ ವಿಷ್ಣು ಪುರಾಣ ಸೇರಿದಂತೆ ಅನೇಕ ಪುರಾಣ, ಗ್ರಂಥಗಳಲ್ಲಿ ಭಾರತ ಎಂಬ ಹೆಸರು ಉಲ್ಲೇಖಿಸಲಾಗಿದೆ.

1757ರ ಪ್ಲಾಸಿ ಕದನದ ಬಳಿಕ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಇಂಡಿಯಾ ಎಂದು ಬಳಸಲು ಆರಂಭಿಸಲಾಯಿತು. ಹಾಗಾಗಿ, ಸಮಿತಿಯು ಅವಿರೋಧವಾಗಿ ಇಂಡಿಯಾ ಪದ ಬದಲಿಗೆ ಭಾರತ ಎಂಬ ಪದವನ್ನು ಎಲ್ಲ ವರ್ಗದ ಸಾಮಾಜಿಕ ವಿಜ್ಞಾನ ಪಠ್ಯಗಳಲ್ಲಿ ಬಳಸಲು ಶಿಫಾರಸು ಮಾಡಿದೆ ಎಂದು ಐಸಾಕ್ ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ : NCERT text: ಶಾಲಾ ಪಠ್ಯಪುಸ್ತಕ ಸಮಿತಿಗೆ ಸುಧಾ ಮೂರ್ತಿ, ಶಂಕರ್ ಮಹಾದೇವನ್ ನೇಮಕ

ಇಂಡಿಯಾ ಬದಲಿಗೆ ಭಾರತ ಪದ ಬಳಕೆಯು ಮೊದಲಿಗೆ ಜಿ20 ಶೃಂಗ ಸಭೆಯ ಸಂದರ್ಭದಲ್ಲಿ ಆರಂಭವಾಯಿತು. ಭಾರತಕ್ಕೆ ಆಗಮಿಸಿದ ವಿದೇಶಿ ಗಣ್ಯರಿಗೆ ರಾಷ್ಟ್ರಪತಿಗಳು ನೀಡಿದ್ದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಮುದ್ರಿಸಲಾಗಿತ್ತು. ಸಂವಿಧಾನದಲ್ಲೂ ಇಂಡಿಯಾ ಪದ ಬದಲಿಗೆ ಭಾರತ ಪದ ಬಳಸಲಾಗುತ್ತದೆ ಎಂಬ ಚರ್ಚೆ ಶುರುವಾಯಿತು. ಬಳಿಕ ಜಿ20 ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಫಲಕದಲ್ಲೂ ಭಾರತ ಎಂದು ಬರೆಯಲಾಗಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version