Site icon Vistara News

CM Siddaramaiah : ವಿವಿಗಳು ಮೌಢ್ಯ ತುಂಬಿದ ಪದವೀಧರರನ್ನು ಸೃಷ್ಟಿಸಿದರೇನು ಫಲ?: ಸಿದ್ದರಾಮಯ್ಯ

Siddaramaiah Education

ಬೆಂಗಳೂರು: ವೈಜ್ಞಾನಿಕತೆ (Scientific spirit) ಮತ್ತು ವೈಚಾರಿಕತೆ (Rationalism) ಇಲ್ಲದೆ ತಲೆ ತುಂಬ ಕೇವಲ ಮೌಢ್ಯವನ್ನೇ ತುಂಬಿಕೊಂಡ ಪದವೀಧರರು (Graduated youngsters) ವಿಶ್ವ ವಿದ್ಯಾಲಯಗಳಿಂದ (Universities) ಹೊರಗೆ ಬಂದರೆ ದೇಶಕ್ಕೆ, ನಾಡಿಗೆ ಮತ್ತು ಈ ಸಮಾಜಕ್ಕೆ ಏನು ಪ್ರಯೋಜನ? ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಪ್ರಶ್ನಿಸಿದ್ದಾರೆ. ಆದ್ದರಿಂದ ವೈಜ್ಞಾನಿಕ ಮನೋಭಾವದ ಪದವೀಧರರನ್ನು ಸಜ್ಜುಗೊಳಿಸಿ ಎಂದು ಕುಲಪತಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸೋಮವಾರ (ಆಗಸ್ಟ್‌ 21ರಂದು) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ಕಾರದ ವ್ಯಾಪ್ತಿಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ರೀತಿ ಪ್ರಶ್ನಿಸಿದರು.

ದೇಶವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಆರ್ಥಿಕವಾಗಿ ಮತ್ತು ನಾಗರಿಕವಾಗಿ ಮುನ್ನಡೆಸುವ ಪದವೀಧರರನ್ನು ವಿಶ್ವ ವಿದ್ಯಾಲಯಗಳು ಸಜ್ಜುಗೊಳಿಸಬೇಕು. ಅದನ್ನು ಬಿಟ್ಟು ಕೇವಲ ಮೌಡ್ಯಗಳನ್ನು ತುಂಬಿಕೊಂಡು ಹೊರಗೆ ಬಂದರೆ ಅದರಿಂದ ದೇಶಕ್ಕೂ ಉಪಯೋಗವಿಲ್ಲ. ನಾಡಿಗೂ ಪ್ರಯೋಜನವಿಲ್ಲ. ಪದವೀಧರರ ಭವಿಷ್ಯಕ್ಕೂ ಉಪಯೋಗವಿಲ್ಲ ಎಂದರು.

ಶೈಕ್ಷಣಿಕ ಸೇರ್ಪಡೆ ಅನುಪಾತ ಹೆಚ್ಚಳಕ್ಕೆ ಕ್ರಮ

ಶೈಕ್ಷಣಿಕ ಸೂಚ್ಯಂಕವೆಂದು ವಿಶ್ವಸಂಸ್ಥೆಯೇ ಮಾನ್ಯತೆ ನೀಡಿರುವ ನಿವ್ವಳ ನೋಂದಣಿ ಅನುಪಾತ (Gross Enrolment Index-GER) ವನ್ನು ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಿವ್ವಳ ನೋಂದಣಿ ಅನುಪಾತ (GER) ಎಂದರೆ ಪ್ರಾಥಮಿಕ, ಮಧ್ಯಮ ಮತ್ತು ಪ್ರೌಢ ಶಾಲೆ ಹಂತಗಳಲ್ಲಿ ಶಾಲೆಗೆ ಸೇರುವ ವಿದ್ಯಾರ್ಥಿಗಳ ಪ್ರಮಾಣವನ್ನು ಗುರುತಿಸುವ ಮಾನದಂಡವಾಗಿದೆ. ಕರ್ನಾಟಕದ ನಿವ್ವಳ ನೋಂದಣಿ ಅನುಪಾತ (GER) 36% ಆಗಿದ್ದು, ರಾಷ್ಟ್ರೀಯ ಅನುಪಾತ (27.4%)ಕ್ಕಿಂತ ತುಂಬಾ ಹೆಚ್ಚಾಗಿದೆ. ಕರ್ನಾಟದಕ ಜಿಇಆರ್‌ ಅನುಪಾತವನ್ನು ಮುಂದಿನ ದಿನಗಳಲ್ಲಿ ಶೇ. 50ಕ್ಕೆ ಹೆಚ್ಚಿಸುವ ಗುರಿ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ನಿವ್ವಳ ನೋಂದಣಿ ಅನುಪಾತದಲ್ಲಿ ಪುರುಷರ ಜಿಇಆರ್‌- 34.8%, ಮಹಿಳೆಯರ ಜಿಇಆರ್‌ 37.2% ಇದ್ದರೆ, ಪರಿಶಿಷ್ಟ ಜಾತಿ- 25.6%, ಪರಿಶಿಷ್ಟ ಪಂಗಡಗಳ ಜಿಇಆರ್‌ 23.4% ಆಗಿದೆ.

ರಾಜ್ಯದ 32 ಸಾರ್ವಜನಿಕ ವಿವಿಗಳಲ್ಲಿ 1.31 ಲಕ್ಷ ವಿದ್ಯಾರ್ಥಿಗಳಿದ್ದಾರೆ. GER ಪ್ರಮಾಣ ಸರ್ಕಾರಿ ಕಾಲೇಜುಗಳಲ್ಲಿ ಎಷ್ಟು, ಖಾಸಗಿ ಕಾಲೇಜುಗಳಲ್ಲಿ ಎಷ್ಟು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಲ್ಪಸಂಖ್ಯಾತರದ್ದು ಎಷ್ಟು ಎಂದು ಮಾಹಿತಿ ಇಟ್ಟುಕೊಂಡಿರಬೇಕು ಎನ್ನುವುದನ್ನು ಯುಯುಸಿಎಂಎಸ್‌ ನಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

GER ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಾದ ಚಾಮರಾಜನಗರ, ಯಾದಗಿರಿ, ಹಾಸನ, ಕೊಪ್ಪಳ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಮತ್ತು ಸಂಶೋಧನೆಗಳನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಇದನ್ನೂ ಓದಿ: Education News : ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮೊತ್ತ 25 ಸಾವಿರ ರೂ.ಗೆ ಏರಿಕೆ

ಮೈಸೂರು ವಿವಿ ಗುಣಮಟ್ಟ ಹೆಚ್ಚಿಸಲು ಸೂಚನೆ

ರಾಜ್ಯದ ಅತ್ಯಂತ ಹಳೆಯ ಮತ್ತು ಮೊದಲ ವಿವಿ ಆಗಿರುವ ಮೈಸೂರು ವಿವಿಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ರಾಜ್ಯದ 32 ಸಾರ್ವಜನಿಕ ವಿವಿಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Exit mobile version