Site icon Vistara News

Karnataka Election 2023: ರಾಜ್ಯ ವಿಧಾನಸಭೆ ಚುನಾವಣೆ ಕ್ಷಣಕ್ಷಣದ ಸುದ್ದಿ: ಬಹಿರಂಗ ಪ್ರಚಾರ ಅಂತ್ಯ, ನಾಡಿದ್ದು ಮತದಾನ

election live

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Election 2023) ಪ್ರಚಾರದ ಕಣಕ್ಕೆ ಇಂದು ಸಂಜೆ ತೆರೆ ಬೀಳುತ್ತಿದೆ. ಅಭ್ಯರ್ಥಿಗಳು ಹಾಗೂ ಸ್ಟಾರ್‌ ಪ್ರಚಾರಕರು ಮತದಾರರನ್ನು ಒಲಿಸಲು ಕೊನೆ ಕ್ಷಣದ ಕಸರತ್ತಿನಲ್ಲಿ ತಲ್ಲೀನರಾಗಿದ್ದಾರೆ. ಕೆಲವೆಡೆ ಎದುರಾಳಿ ಪ್ರಚಾರಕರ ತಂಡದ ಮೇಲೆ ಹಲ್ಲೆ ನಡೆದಿದೆ. ಬೆಂಗಳೂರಿನಲ್ಲಿ ರಾಹುಲ್‌ ಗಾಂಧಿ (Rahul Gandhi) ಜನಸಾಮಾನ್ಯರಂತೆ ಓಡಾಡುತ್ತಿದ್ದಾರೆ.

Harish Kera

ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ

ಬೆಂಗಳೂರು: ಇಂದು ಬೆಂಗಳೂರಿನ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಭರ್ಜರಿ ರೋಡ್‌ ಶೋ ನಡೆಸಿದರು. ಜಿಟಿ ಮಾಲ್‌ನಿಂದ ಆರಂಭವಾದ ಪ್ರಿಯಾಂಕಾ ರೋಡ್ ಶೋದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಪ್ರಿಯಕೃಷ್ಣ, ಕೃಷ್ಣಪ್ಪ ಭಾಗಿಯಾದರು. ವಿಜಯನಗರದ ಗಲ್ಲಿ ಗಲ್ಲಿಯಲ್ಲಿ ಸಾಗಿರುವ ಪ್ರಿಯಾಂಕಾ ಮೇಲೆ ಜನ ಪುಷ್ಪವೃಷ್ಟಿ ಮಾಡಿದರು.

Harish Kera

ಇಂದು ಶಿಕಾರಿಪುರದಲ್ಲಿ ಕಿಚ್ಚ, ಪುತ್ತೂರಿನಲ್ಲಿ ರಮ್ಯಾ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಕಣದ ಕೊನೆಯ ದಿನದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಕಣಕ್ಕೆ ರಣಗೇರಿಸುತ್ತಿದ್ದಾರೆ. ಇಂದು ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ಪರ ಕಿಚ್ಚ ಸುದೀಪ್‌ ಹಾಗೂ ಪುತ್ತೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ರೈ ಪರ ನಟಿ ರಮ್ಯಾ ಪ್ರಚಾರ ನಡೆಸಲಿದ್ದಾರೆ.

Harish Kera

ಮದ್ಯಪ್ರಿಯರಿಗೆ ಕಹಿ ಸುದ್ದಿ, ಇನ್ನು ಮೂರು ದಿನ ಸಿಗೋಲ್ಲ ಲಿಕ್ಕರ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಯಿಂದ ಇನ್ನು ಮೂರು ದಿನ ಮದ್ಯ ಮಾರಾಟ ನಿಲ್ಲಿಸಲಾಗುತ್ತಿದೆ. ರಾಜಧಾನಿ ಹಾಗೂ ರಾಜ್ಯದ ಎಲ್ಲೆಡೆ ಇಂದು ಪೂರ್ತಿ ʼಡ್ರೈ ಡೇಸ್‌ʼ ಚುನಾವಣಾ ಆಯೋಗ ಖಡಕ್ ಆದೇಶ ನೀಡಿದೆ. ಇಂದು ಸಂಜೆ 6 ಗಂಟೆಯಿಂದ ಮೇ 11ರ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.

Harish Kera

ಬಿಎಂಟಿಸಿ ಬಸ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರ ಕಣದಲ್ಲಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಸೋಮವಾರ ಬಿಎಂಟಿಸಿ ಬಸ್‌ನಲ್ಲಿ ಜನಸಾಮಾನ್ಯರ ಜತೆ ಪ್ರಯಾಣಿಸಿದರು.

Exit mobile version