Site icon Vistara News

Sira News: ನಗರ ಡಿವೈಎಸ್‌ಪಿ, ಗ್ರಾಮಾಂತರ ಸಿಪಿಐ ಕಚೇರಿ ಉದ್ಘಾಟನೆ: ಜನಪ್ರತಿನಿಧಿಗಳ ಅಸಮಾಧಾನ

ಶಿರಾ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ನೀತಿ ಸಂಹಿತೆ ಸಹ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಂಡರೂ ಉದ್ಘಾಟನೆ ಮಾಡುವ ಭಾಗ್ಯ ಮಾತ್ರ ಜನಪ್ರತಿನಿಧಿಗಳಿಗೆ ಸಿಗುತ್ತಿಲ್ಲ. ಇದೀಗ ನಗರದಲ್ಲಿ ಸೋಮವಾರ ಡಿವೈಎಸ್ಪಿ ಮತ್ತು ಗ್ರಾಮಾಂತರ ಸಿಪಿಐ ಕಚೇರಿ ಕಟ್ಟಡಗಳನ್ನು ಉದ್ಘಾಟನೆ ಮಾಡಲಾಗಿದ್ದು, ಜನಪ್ರತಿನಿಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಶಿರಾದಲ್ಲಿ ಸೋಮವಾರ ಪೊಲೀಸ್‌ ಉಪಅಧೀಕ್ಷಕರ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ತರಾತುರಿಯಲ್ಲಿ ಚಾಲನೆಗೆ ವಿರೋಧ

ಚುನಾವಣೆಯ ಸಮೀಪಿಸುತ್ತಿದ್ದಂತೆ ಸರ್ಕಾರದ ಅನೇಕ ಕಟ್ಟಡಗಳು ಉದ್ಘಾಟನಾ ಸಮಾರಂಭಗಳು ಬಾರಿ ಸದ್ದು ಮಾಡುತ್ತವೆ.

ಅಧಿಕಾರಿಗಳಿಂದ ಉದ್ಘಾಟನೆ

ನಗರದ ಅಮರಾಪುರ ರಸ್ತೆಯಲ್ಲಿರುವ ನಗರ ಡಿವೈಎಸ್‌ಪಿ ಮತ್ತು ಗ್ರಾಮಾಂತರ ಸಿಪಿಐ ಕಚೇರಿ ಕಟ್ಟಡಗಳನ್ನು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಉದ್ಘಾಟನೆ ಮಾಡಿದ್ದಾರೆ. ಇದು ಜನಪ್ರತಿನಿಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದರೆ, ಚುನಾವಣೆಯಂತಹ ಸಂದರ್ಭದಲ್ಲಿ ತುರ್ತು ಅವಶ್ಯಕತೆ ಇರುವ ಕೆಲಸಗಳಿಗೆ ಅಧಿಕಾರಿಗಳೂ ಸಹ ಚಾಲನೆ ನೀಡಬಹುದಾಗಿದೆ. ಜನೋಪಯೋಗಿ ಕಾಮಗಾರಿಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉದ್ಘಾಟನೆ ಮಾಡಬಹುದು ಎಂದೂ ಸಮಜಾಯಿಷಿಯನ್ನು ನೀಡಲಾಗಿದೆ.

ಇದನ್ನೂ ಓದಿ: IPL 2023: ಚೆನ್ನೈ-ಆರ್​ಸಿಬಿ ವಿರುದ್ಧ ಯಾರಿಗೆ ಜಯ; ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

ಹಾಗೆಯೇ ಕಳೆದ ಬಾರಿ ನಡೆದಿದ್ದ ಉಪ ಚುನಾವಣೆ ವೇಳೆಯಲ್ಲಿ ಇಲ್ಲಿ ನಿರ್ಮಾಣವಾಗಿದ್ದ ಮಿನಿ ವಿಧಾನಸೌಧದವನ್ನು ತರಾತುರಿಯಲ್ಲಿ ಸರ್ಕಾರ ಉದ್ಘಾಟನೆ ನೆರವೇರಿಸಿತ್ತು. ಇದು ಪ್ರತಿಪಕ್ಷಗಳ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

Exit mobile version