Site icon Vistara News

Flight Turbulence: ಹವಾಮಾನ ವೈಪರೀತ್ಯ; ಎರಡು ಪಟ್ಟು ಗಡಗಡ ನಡುಗಲಿದೆ ವಿಮಾನ!

flight turbulence

ವಿಮಾನ ಪ್ರಯಾಣದಲ್ಲಿ ಟರ್ಬ್ಯುಲೆನ್ಸ್‌ ಎಂದು ಭಯ ಪಡುತ್ತಿದ್ದ ಮಂದಿಗಿನ್ನು ಶಾಕ್‌ ಕಾದಿದೆ. ಮುಂಬರುವ ದಿನಗಳಲ್ಲಿ ಇನ್ನು ಟರ್ಬ್ಯುಲೆನ್ಸ್‌ ಈಗಿನದ್ದಕ್ಕಿಂತ ದುಪ್ಪಟ್ಟು ಅಥವಾ ಮೂರು ಪಟ್ಟು ಹೆಚ್ಚಲಿದೆ. ಆ ಮೂಲಕ ಇನ್ನು ಟೇಕ್‌ ಆಫ್‌ ಆದ ಕೂಡಲೇ ಸೀಟ್‌ ಬೆಲ್ಟ್‌ ತೆಗೆದಿಟ್ಟು ಆರಾಮಾಗಿ ಕಾಲು ಚಾಚುವ ಮಂದಿಯಿನ್ನು ಸೀಟ್‌ ಬೆಲ್ಟ್‌ ಕಟ್ಟಿಕೊಂಡೇ ಇರಬೇಕಾದ ಪರಿಸ್ಥಿತಿಯೂ ಬಂದೊದಗಲಿದೆ.

ಏರುತ್ತಿರುವ ಸಮುದ್ರ ಮಟ್ಟ, ಬರ, ಹವಾಮಾನ ವೈಪರೀತ್ಯ ಹಾಗೂ ಬದಲಾವಣೆಗಳಿಂದಾಗಿ 2050-2080ರ ಸಮಯಕ್ಕೆ ಜಗತ್ತಿನೆಲ್ಲೆಡೆ ವಿಮಾನ ಪ್ರಮಾಣದಲ್ಲಿ ಟರ್ಬ್ಯುಲೆನ್ಸ್‌ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವಿಮಾನ ಆಗಸದಲ್ಲಿ ಹಾರುತ್ತಿರುವಾಗ ಎದುರಾಗುವ ವಿವಿಧ ಬಗೆಯ ವಾಯುವಿನ ಚಲನೆಯ ವೇಗದಲ್ಲಿ ವ್ಯತ್ಯಾಸ ಇರುವುದರಿಂದ ಉಂಟಾಗುವ ಅಲ್ಲಾಡುವಂತಹ ಪ್ರಕ್ರಿಯೆಯೇ ಈ ಟರ್ಬ್ಯುಲೆನ್ಸ್‌. ಸರಾಗವಾಗಿ ಚಲನೆಯೇ ಗೊತ್ತಾಗದ ಹಾಗೆ ವಿಮಾನದೊಳಗೆ ಕೂತಿರುವ ವ್ಯಕ್ತಿಗೆ ಇದ್ದಕ್ಕಿಂತೆ ಅಲ್ಲಾಡುವ ವಿಮಾನ ಭಯ ಹುಟ್ಟಿಸುತ್ತದೆ. ಸದಾ ವಿಮಾನದಲ್ಲಿ ಓಡಾಡಿಕೊಂಡಿರುವ ವ್ಯಕ್ತಿಗೆ ಇದು ಎಂದಿನ ವಿಷಯವೆಂದು ಗೊತ್ತಿದ್ದರೂ, ಆಗಸದಲ್ಲೆಲ್ಲೋ ಹಾರುತ್ತಿರುವ ವ್ಯಕ್ತಿಗೆ ಇಂಥ ಸಂದರ್ಭ ಎಲ್ಲ ಸರಿಯಾಗಿದೆ ತಾನೇ ಎಂಬ ಸಣ್ಣದೊಂದು ಸಂಶಯ ನುಸುಳದೆ ಇರುವುದಿಲ್ಲ.

ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ಎದುರಾಗುವ ಕಲ್ಲು, ಗುಂಡಿಗಳಲ್ಲಿ ಏಳಿಸಿ ಬೀಳಿಸಿ ಹೋಗುತ್ತಿರುವಂತಹ ಪ್ರಕ್ರಿಯೇಯೂ ವಿಮಾನದ್ದೇ. ಆದರೆ, ಆಗಸದಲ್ಲಿ ಚಲಿಸುವ ವಾಹನವಾದ್ದರಿಂದ, ಒಮ್ಮೆ ಕೊಂಚ ಹೆಚ್ಚು ಹೊತ್ತು ವಿಮಾನ ಅಲ್ಲಾಡಿದರೂ, ಏನಾಯಿತು ಎಂಬಂಥ ಪ್ರಶ್ನಾರ್ಥಕ ಚಿಹ್ನೆ ಕಾಡುವುದು ಸಹಜ. ಸಾಮಾನ್ಯವಾಗಿ ವಾತಾವರಣದಲ್ಲಿ ಬದಲಾವಣೆಯಾಗಿದ್ದಾಗ, ಮಳೆಯ ಮುನ್ಸೂಚನೆ ಇದ್ದಾಗ ಹೀಗೆ ವಾತಾವರಣದ ಯಾವುದೇ ಏರುಪೇರಿನ ಸಂದರ್ಭ ಟರ್ಬ್ಯುಲೆನ್ಸ್‌ ಅಧಿಕವಾಗಿರುತ್ತಿತ್ತು.

ಯುಕೆಯ ಯುನಿವರ್ಸಿಟಿ ಆಫ್‌ ರೀಡಿಂಗ್‌ನ ಅಟ್‌ಮಾಸ್ಫಿಯರಿಕ್‌ ಸೈನ್ಸ್‌ ಪ್ರೊಫೆಸರ್‌ ಪೌಲ್‌ ವಿಲಿಯಮ್ಸ್‌ ಪ್ರಕಾರ, ಸಣ್ಣ ಮಟ್ಟಿನ ಟರ್ಬ್ಯುಲೆನ್ಸ್‌ ಇದ್ದಾಗ ಯಾವುದೇ ತೊಂದರೆಗಳಿಲ್ಲದೆ ಆರಾಮವಾಗಿ ಕೂರಬಹುದಾಗಿದ್ದರೆ, ಮಧ್ಯಮಗಾತ್ರ ಟರ್ಬ್ಯುಲೆನ್ಸ್‌ ಇದ್ದರೆ ಸೀಟ್‌ ಬೆಲ್ಟ್‌ ಹಾಕಿಕೊಳ್ಳಬೇಕಾಗುತ್ತದೆ. ಆದರೆ ಈ ಸಂದರ್ಭ ಆಹಾರ ವಿತರಣೆ ಮತ್ತಿತರ ಎಲ್ಲ ವ್ಯವಸ್ಥೆಗಳು ಹಾಗೆಯೇ ಮುಂದುವರಿಯುತ್ತಿದ್ದು, ವಿಮಾನದ ಸಿಬ್ಬಂದಿಗಳು ಮೊದಲೇ ಈ ಬಗ್ಗೆ ಎಲ್ಲರಿಗೂ ವಿವರಿಸುತ್ತಾರೆ. ಸೀಟ್‌ ಬೆಲ್ಟ್‌ ಕಟ್ಟಬೇಕಿದ್ದರೂ ಮುಂಚಿತವಾಗಿಯೇ ತಿಳಿಸುತ್ತಾರೆ.

ಆದರೆ, ಅತ್ಯಂತ ಕೆಟ್ಟ ಟರ್ಬ್ಯುಲೆನ್ಸ್‌ಗಳು ಗುರುತ್ವಾಕರ್ಷಣೆಯಿಂಗಲೂ ಹೆಚ್ಚಾಗಿರಲಿದ್ದು, ನೀವೇನಾದರೂ ಸೀಟ್‌ ಬೆಲ್ಟ್‌ ಧರಿಸಿರದಿದ್ದರೆ ಖಂಡಿತ ಕೂತ ಜಾಗದಿಂದ ನಿಮ್ಮನ್ನೆತ್ತಿ ಇನ್ನೊಂದು ಜಾಗಕ್ಕೆ ನಿಮ್ಮನ್ನು ಒಗೆದಿರುತ್ತದೆ. ಇಂತಹ ಟರ್ಬ್ಯುಲೆನ್ಸ್‌ನಿಂದ ವಿಪರೀತ ತೊಂದರೆಗಳುಂಟಾಗುವುದಲ್ಲದೆ, ಗಾಯಗಳೂ ಸಂಭವಿಸುತ್ತದೆ. ಕೆಲವೊಮ್ಮೆ ಇಂತಹುಗಳಿಂದ ಮೂಳೆ ಮುರಿತದಂತಹ ದೊಡ್ಡ ತೊಂದರೆಗಳೂ ಸಂಭವಿಸುತ್ತದೆ ಎಂದು ವಿಲಿಯಮ್ಸ್‌ ಹೇಳಿದ್ದಾರೆ.

ಯುಎಸ್‌ನಲ್ಲಿ ಪ್ರತಿ ವರ್ಷ, ಸುಮಾರು 65,000 ವಿಮಾನಗಳು ಮಧ್ಯಮ ಗಾತ್ರದ ಟರ್ಬ್ಯುಲೆನ್ಸ್‌ಗೆ ಒಳಗಾದರೆ, ಸುಮಾರು 5,500 ವಿಮಾನಗಳು ಅತೈಧಿಕ ಮಟ್ಟದ ಟರ್ಬ್ಯುಲೆನ್ಸ್‌ಗೆ ಒಳಗಾಗುತ್ತವೆ. ವಾತಾವರಣದಲ್ಲಿ ಬದಲಾವಣೆ ಇತ್ತೀಚೆಗೆ ಬಹಳ ದೊಡ್ಡ ಸಮಸ್ಯೆಯಾಗಿದ್ದು, ಇದರ ಪರಿಣಾಮ ಹೆಚ್ಚುತ್ತಿರುವ ಟರ್ಬ್ಯುಲೆನ್ಸ್‌ಗಳ ಗಂಭೀರತೆಯೇ ಆಗಿದೆ ಎಂದು ಆವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Viral News: ಜಗತ್ತಿನ ಅತ್ಯಂತ ಕಡಿಮೆ ಸಮಯದ ವಿಮಾನ ಪ್ರಯಾಣವಿದು; ಇಷ್ಟೇ ಪ್ರಯಾಣಕ್ಕೆ ಅಷ್ಟೊಂದು ಶುಲ್ಕವೇಕೆ?

ಮುಂಬರುವ ವರ್ಷಗಳಲ್ಲಿ, ದಶಕಗಳಲ್ಲಿ ವಿಶ್ವದೆಲ್ಲೆಡೆ ಇದು ಇನ್ನೂ ಹೆಚ್ಚಾಗಲಿದ್ದು ಬಹುಶಃ ದುಪ್ಪಟ್ಟು ಅಥವಾ ಮೂರು ಪಟ್ಟು ಅಧಿಕವಾಗಲಿದೆ ಎಂದಿದ್ದಾರೆ. ಇನ್ನೊಂದು ಬಗೆಯ ಟರ್ಬ್ಯುಲೆನ್ಸ್‌ಗೆ ಕ್ಲೀಯರ್‌ ಏರ್‌ ಟರ್ಬ್ಯುಲೆನ್ಸ್‌ ಎಂದು ಹೆಸರಿದೆ. ಈ ವಿಧದಲ್ಲಿ ಮಳೆಗಾಲದ ತೊಂದರೆಗಳಾದ ಗುಡುಗು, ಮಿಂಚು ಹಾಗೂ ಮೋಡಗಳಿಂದಾಗಿ ಟರ್ಬ್ಯುಲೆನ್ಸ್‌ ಉಂಟಾಗುವುದಾಗಿದ್ದು, ಇಂಥವುಗಳನ್ನು ನಿಲ್ರಕ್ಷಿಸುವುದು ಕಷ್ಟ ಸಾಧ್ಯ ಎಂದು ಅವರು ಹೇಳಿದ್ದಾರೆ. ಆದರೆ ವಿಶ್ವದ ಅತ್ಯಂತ ಬ್ಯುಸಿಯಾಗಿರುವ ವಾಯು ಮಾರ್ಗಗಳಲ್ಲಿ ಈ ಕ್ಲೀಯರ್‌ ಏರ್‌ ಟರ್ಬ್ಯುಲೆನ್ಸ್‌ ೨೦೫೦-೮೦ರ ನಡುವೆ ಹೆಚ್ಚಾಗಲಿದೆ.

ಮುಂಬುವ ದಿನಗಳಲ್ಲಿ ಹಾಗಾದರೆ ವಿಮಾಣ ಪ್ರಯಾಣ ಕಡಿಮೆ ಸುರಕ್ಷಿತ ಎಂಬ ಅರ್ಥವಲ್ಲ. ಆದರೆ ಖಂಡಿತವಾಗಿ ವಿಮಾನ ಪ್ರಯಾಣದಲ್ಲಿಡೀ ಸೀಟ್‌ ಬೆಲ್ಟ್‌ ಧರಿಸಿಕೊಂಡೇ ಇರಬೇಕಾದ ದಿನ ದೂರವಿಲ್ಲ. ತೆಗೆದಿಡಲು ಅವಕಾಶ ಕಡಿಮೆ ಇರಲಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: Droupadi Murmu: ಅಸ್ಸಾಂನಲ್ಲಿ ಸುಖೋಯ್​ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು

Exit mobile version