Site icon Vistara News

ನಿರ್ಜನ ಅಂಟಾರ್ಟಿಕದ ನೀರ್ಗಲ್ಲಿನಡಿ ಪತ್ತೆಯಾದ ಜಲರಾಶಿ

ಕಾಲಿಫೋರ್ನಿಯಾ: ಆಂಟಾರ್ಟಿಕಾದಲ್ಲಿರುವ ನೀರ್ಗಲ್ಲಿನ(ice) ಅಡಿಯಲ್ಲಿ ಬೃಹತ್‌ ಜಲವಿರುವ ಸಾಧ್ಯತೆ ಕಂಡುಬಂದಿದೆ. ವಿಶ್ವದ ಅನೇಕ ತಜ್ಞರು ಹಾಗೂ ಸಂಶೋಧಕರು ಈ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕ್ಲೊಹ್‌ ಗುಸ್ಟಫ್ಸನ್‌ ನೀಡಿದ್ದಾರೆ. ʼಅಂಟಾರ್ಟಿಕದಲ್ಲಿರುವ ನೀರ್ಗಲ್ಲುಗಳಲ್ಲಿ ವೇಗವಾಗಿ ಚಲಿಸುವ ನೀರ್ಗಲ್ಲು ಸಾಗರವನ್ನು ಸೇರುತ್ತದೆ. ಸುಮಾರು 90% ನೀರ್ಗಲ್ಲುಗಳನ್ನು ಅಲ್ಲಿಂದ ಹೊರತರುವಲ್ಲಿ ನೀರ್ಗಲ್ಲಿನ ತೊರೆಗಳದ್ದೇ ಪ್ರಮುಖ ಪಾತ್ರ ವಹಿಸುತ್ತವೆ. ನೀರ್ಗಲ್ಲು ಸಹ ಹರಿಯುವ ನೀರಿನ ಹಾಗಿರುತ್ತದೆ. ನೀರ್ಗಲ್ಲಿನ ಕೆಳಭಾಗದಲ್ಲಿ ನೀರು ಹೆಚ್ಚಿದ್ದರೆ ವೇಗವಾಗಿ ಹರಿಯುತ್ತದೆ. ಜಲ ಇಲ್ಲದಿದ್ದರೆ ವೇಗವಾಗಿ ಹರಿಯುವುದು ಕಷ್ಟವಾಗುತ್ತದೆʼ ಎಂದು ತಿಳಿಸಿದ್ದಾರೆ.

ನೀರ್ಗಲ್ಲಿನ ಅಡಿಯಲ್ಲಿ ಅಲ್ಪ ಪ್ರಮಾಣದಲ್ಲಿ ಅಂದರೆ ಕೆಲವು ಮಿಲಿಮೀಟರ್‌ ಅಥವಾ ಮೀಟರ್‌ ಲೆಕ್ಕದ ಆಳದಲ್ಲಿ ಮಾತ್ರ ನೀರು ಇರುವುದು ತಜ್ಞರಿಗೆ ತಿಳಿದಿತ್ತು. ಆದರೆ ಪಶ್ಚಿಮ ಅಂಟಾರ್ಟಿಕದಲ್ಲಿರುವ ವ್ಹಿಲಿಯನ್ಸ್‌ ಐಸ್‌ ಅಡಿಯಲ್ಲಿ ದೊಡ್ಡ ಪ್ರಮಾಣದ ಜಲರಾಶಿಯ ಬಗ್ಗೆ ಸಂಶೋಧನೆ ನಡೆಸಲು ಕ್ಲೊಹ್‌ ಗುಸ್ಟಫ್ಸನ್‌ ಮುಂದಾಗಿದ್ದರು.

ಸಂಶೋಧನೆ ನಡೆಸಿದಾಗ ಈವರೆಗೆ ಪತ್ತೆಯಾದಕ್ಕಿಂತ ಸುಮಾರು 10 ಪಟ್ಟು ಹೆಚ್ಚಿನ ಜಲರಾಶಿ ಅಂಟಾರ್ಟಿಕದ ಐಸ್‌ ಕೆಳಭಾಗದಲ್ಲಿ ಇದೆ ಎಂದು ತಿಳಿಸಿದ್ದಾರೆ. ಈ ಜಲರಾಶಿಯು ನೀರ್ಗಲ್ಲಿನ ಚಲನೆಗೆ ಪೂರಕವಾಗಿರುತ್ತದೆ. ಸಮುದ್ರ ಮಟ್ಟದಲ್ಲಿ ಉಂಟಾಗುವ ವಾತಾವರಣದಲ್ಲಿ ಬದಲಾವಣೆಯಿಂದ ಇದರ ಮೇಲೂ ಪರಿಣಾಮ ಬೀರಬಹುದು. ಆದರೆ, ಅದನ್ನು ಅರ್ಥಮಾಡಿಕೊಳ್ಳುವ ಕಾರ್ಯ ಸುಲಭವಾಗಿಲ್ಲ ಎಂದು ಹೇಳಿದ್ದಾರೆ.

ʼಈಗಾಗಲೇ ಅಂಟಾರ್ಟಿಕದ ನೀರ್ಗಲ್ಲಿನಲ್ಲಿರುವ ನೀರಿನ ಮಟ್ಟವನ್ನು ಲೆಕ್ಕ ಹಾಕಿದರೆ, ಈಗಿರುವ ಸಮುದ್ರ ಸುಮಾರು ಇನ್ನೂ 57 ಮೀಟರ್‌ ಮೇಲೇರುತ್ತದೆ ಎಂದು ಕೋಹ್ಲಾ ತಿಳಿಸಿದ್ದಾರೆ. ಆದರೆ ಇದು ಇನ್ನು ಎಷ್ಟು ಸಮಯದಲ್ಲಿ ಅಂಟಾರ್ಟಿಕದ ನೀರ್ಗಲ್ಲು ಸಾಗರವನ್ನು ಸೇರಿ ಸಮುದ್ರ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮುಖ್ಯವಾಗಿ ತಿಳಿಯಬೆಕಾಗಿರುವ ವಿಷಯ ಎಂದು ಕ್ಲೋಹ್‌ ಗುಸ್ಟಫ್ಸನ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಈ 7 ಸಂಗತಿ ಕಂಡರೆ ಪ್ರವಾಸಿಗರಿಗೆ ಮೆಚ್ಚು

Exit mobile version