-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿಣ್ಣರನ್ನು ಮುದ್ದು ಮುದ್ದಾಗಿ ಬಿಂಬಿಸುವ ಡಂಗ್ರೀಸ್ ಫ್ಯಾಷನ್ ಇದೀಗ ಚಾಲ್ತಿಯಲ್ಲಿದೆ. ಈ ಸೀಸನ್‌ನ ಕಿಡ್ಸ್ ವೆಸ್ಟರ್ನ್ವೇರ್ ಕೆಟಗರಿಯಲ್ಲಿ ನಾನಾ ಬಗೆಯ ಡಂಗ್ರೀಸ್‌ಗಳು ಎಂಟ್ರಿ ನೀಡಿದ್ದು, ಅವುಗಳಲ್ಲಿ ವಿಶೇಷವಾಗಿ 3 ಶೈಲಿಯವು ಟ್ರೆಂಡಿಯಾಗಿವೆ. ಪುಟ್ಟ ಮಕ್ಕಳ ಮನೋಭಿಲಾಷೆಗೆ ಹೊಂದುವಂತಹ ವಿನ್ಯಾಸದಲ್ಲಿ ಬಿಡುಗಡೆಯಾಗಿವೆ.
ಮಕ್ಕಳ ಡಂಗ್ರೀಸ್ ಆರಾಮದಾಯಕವಾಗಿರಲಿ
“ಡಂಗ್ರೀಸ್‌ಗಳು ಮೊದಲಿನಿಂದಲೂ ಫ್ಯಾಷನ್‌ನಲ್ಲಿವೆ. ಆದರೆ, ಅತಿ ಹೆಚ್ಚಾಗಿ ಹಾಲಿಡೇ ಹಾಗೂ ಔಟಿಂಗ್ ಸಮಯದಲ್ಲಿ ಮಾತ್ರ ಇವಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಇದೀಗ ಇವು ಹೊಸ ರೂಪ ಪಡೆದು, ಕೊಂಚ ಫಂಕಿ ವಿನ್ಯಾಸದಲ್ಲಿ ಬಿಡುಗಡೆಯಾಗಿದ್ದು, ಮಕ್ಕಳ ಪೋಷಕರನ್ನು ಸೆಳೆದಿವೆ. ಪರಿಣಾಮ, ಮಕ್ಕಳಿಗೆ ಡಂಗ್ರೀಸ್ ಆಯ್ಕೆ ಮಾಡುತ್ತಿರುವುದು ಕಂಡು ಬರುತ್ತಿದೆ” ಎನ್ನುತ್ತಾರೆ ಸ್ಟೈಲಿಸ್ಟ್ ರೀಟಾ. ಅವರ ಪ್ರಕಾರ, ಮಕ್ಕಳ ಪರ್ಸನಾಲಿಟಿಗೆ ತಕ್ಕಂತೆ ಇವನ್ನು ಆಯ್ಕೆ ಮಾಡುವುದು ಮುಖ್ಯ. ಇಲ್ಲವಾದಲ್ಲಿ ಅವು ದೊಗಲೆಯಾಗಿ ನೋಡಲು ಚೆನ್ನಾಗಿ ಕಾಣದಿರಬಹುದು. ಅಷ್ಟು ಮಾತ್ರವಲ್ಲದೇ, ದೊಡ್ಡವರು ಧರಿಸುವ ಡಂಗ್ರೀಸ್‌ನಂತಿರಕೂಡದು. ನೋಡಲು ಆಕರ್ಷಕವಾಗಿರಬೇಕು. ಆರಾಮದಾಯಕವಾಗಿರಬೇಕು ಎನ್ನುತ್ತಾರೆ.
ಇನ್ನು ಈ ಸೀಸನ್‌ನಲ್ಲಿ ಟ್ರೆಂಡ್‌ನಲ್ಲಿರುವ 3 ಶೈಲಿಯ ಡಂಗ್ರೀಸ್‌ಗಳಲ್ಲಿ ಇದೀಗ ಸ್ಕರ್ಟ್ ಶೈಲಿಯ ಡಂಗ್ರೀಸ್, ಶಾರ್ಟ್ ಡಂಗ್ರೀಸ್ ಹಾಗೂ ಪ್ರಿಂಟೆಡ್ ಫಂಕಿ ಡಂಗ್ರೀಸ್ ಚಾಲ್ತಿಯಲ್ಲಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ.
ಸ್ಕರ್ಟ್ ಸ್ಟೈಲ್ ಡಂಗ್ರೀಸ್
ಯುವತಿಯರ ಫ್ಯಾಷನ್ ಲಿಸ್ಟ್‌ನಲ್ಲಿದ್ದ ಇವು, ಇದೀಗ ಮಕ್ಕಳ ಫ್ಯಾಷನ್‌ನಲ್ಲೂ ಕಾಣಿಸಿಕೊಂಡಿವೆ. ಈ ಉಡುಪಿನಲ್ಲಿ ಅಮ್ಮ-ಮಗಳು ಟ್ವಿನ್ನಿಂಗ್ ಮಾಡಬಹುದು. ಇನ್ನು ನಾನಾ ಸ್ಕರ್ಟ್ ಶೈಲಿಯಲ್ಲೆ ಬಗೆ ಬಗೆಯ ಮಿನಿ, ಮಿಡಿ ಹಾಗೂ ಎಪ್ರಾನ್ ಶೈಲಿಯ ಡಂಗ್ರೀಸ್‌ಗಳು ಪಾಪ್ಯುಲರ್ ಆಗಿವೆ.
ಇದನ್ನೂ ಓದಿ; Stars Festival fashion: ಗಣೇಶ ಹಬ್ಬದ ಸೆಲೆಬ್ರೇಷನ್‌ಗೆ ಟ್ರೆಡಿಷನಲ್ ಲುಕ್‌ನಲ್ಲಿ ಮಿನುಗಿದ ತಾರೆಯರು
ಶಾರ್ಟ್ ಡಂಗ್ರೀಸ್
ಸದ್ಯ ಮಕ್ಕಳ ಫ್ಯಾಷನ್‌ನಲ್ಲಿ ಪ್ಯಾಂಟ್ ಡಂಗ್ರೀಸ್ ಸೈಡಿಗೆ ಸರಿದಿದೆ. ಈಗ ಏನಿದ್ದರೂ ಶಾರ್ಟ್ ಡಂಗ್ರೀಸ್ ಸ್ಥಾನ ಪಡೆದುಕೊಂಡಿದೆ. ನೋಡಲು ಕ್ಯೂಟ್ ಆಗಿ ಕಾಣಿಸುವ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಅದರಲ್ಲೂ ಲೈಟ್‌ವೈಟ್ ಫ್ಯಾಬ್ರಿಕ್‌ನಲ್ಲಿ ಕಾಣಿಸಿಕೊಂಡಿರುವುದು ಮಕ್ಕಳಿಗೆ ಆರಾಮದಾಯಕ ಎನಿಸಿವೆ.
ಪ್ರಿಂಟೆಡ್ ಫಂಕಿ ಡಂಗ್ರೀಸ್
ಫ್ಲೋರಲ್, ಅನಿಮಲ್ಸ್ ಹಾಗೂ ಕಾಟೂನ್ ಪ್ರಿಂಟ್ ಇರುವ ಸಾಫ್ಟ್ ಕಾಟನ್ ಡಂಗ್ರೀಸ್ ಇದೀಗ ಅತಿ ಹೆಚ್ಚು ಮಾರಾಟವಾಗುತ್ತಿವೆ. ಇದಕ್ಕೆ ಕಾರಣ, ಸಾಫ್ಟ್ ಫ್ಯಾಬ್ರಿಕ್ ಹಾಗೂ ಆಕರ್ಷಕವಾದ ಮಕ್ಕಳನ್ನು ಖುಷಿ ಪಡಿಸುವ ಚಿತ್ತಾರವಿರುವ ಪ್ರಿಂಟ್ಸ್. ಹಾಗಾಗಿ, ಈ ಶೈಲಿಯ ಡಂಗ್ರೀಸ್ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರೀಟಾ.
(ಲೇಖಕಿ ಫ್ಯಾಷನ್ ಪತ್ರಕರ್ತೆ)