–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಐ ಮೇಕಪ್ (Eye Makeup) ಇಡೀ ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಸೀಸನ್‌ಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಐ ಮೇಕಪ್ ಮಾಡುವುದರಿಂದ ಆಕರ್ಷಕವಾಗಿ ಕಾಣಬಹುದು.
“ಪ್ರತಿ ಹೆಣ್ಣಿನ ಕಣ್ಣಿನ ಅಂದವನ್ನು ಟ್ರೆಂಡಿ ಐ ಶ್ಯಾಡೋಸ್‌ನಿಂದ ದುಪ್ಪಟ್ಟು ಮಾಡಬಹುದು. ಅವರವರ ಮುಖದ ಆಕಾರ, ಕಣ್ಣಿನ ಗಾತ್ರ, ಬಣ್ಣಕ್ಕೆ ತಕ್ಕಂತೆ ಅಲಂಕರಿಸಿಕೊಂಡಲ್ಲಿ ಮತ್ತಷ್ಟು ಮೆರುಗು ಹೆಚ್ಚಾಗುತ್ತದೆ. ಆದರೆ, ಯಾವುದೇ ಐ ಮೇಕಪ್ ಮಾಡುವ ಮುನ್ನ ಈ ಬಗ್ಗೆ ಒಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕು” ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ ರೀಟಾ.
ಅವರ ಪ್ರಕಾರ, ಐ ಮೇಕಪ್ ಸಂದರ್ಭಕ್ಕೆ ಸೂಟ್ ಆಗುವಂತೆ ಮಾಡುವುದು ಅಗತ್ಯ. ಇಲ್ಲವಾದಲ್ಲಿ ನೋಡುಗರಿಗೆ ಆಭಾಸವಾಗಬಹುದು ಎನ್ನುತ್ತಾರೆ. ಕೆಲವು ಸಂದರ್ಭಕ್ಕೆ ಸೂಟ್ ಆಗುವಂತಹ ೫ ಮೇಕಪ್ ಬಗ್ಗೆ ಇಲ್ಲಿ ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | Eyebrow Makeup | ಆಕರ್ಷಕ ಐಬ್ರೋಗೂ ಮೇಕಪ್!
ಆಫೀಸ್‌ಗಿರಲಿ ಸಿಂಪಲ್ ಐ ಮೇಕಪ್
ಪ್ರತಿನಿತ್ಯ ಆಫೀಸ್‌ಗೆ ಹೋಗುವವರ ಐ ಮೇಕಪ್ ಸಿಂಪಲ್ ಆಗಿರಲಿ. ಬ್ಲಾಕ್ ಐ ಲೈನರ್ ಹಚ್ಚಿ. ಕಪ್ಪು ಬಣ್ಣದ ಚಿಕ್ಕ ಎಳೆಯನ್ನು ಎಳೆಯಿರಿ. ಕಣ್ಣಿನ ಮೇಲ್ಭಾಗದಲ್ಲಿ ನಿಮ್ಮ ಉಡುಪಿಗೆ ಮ್ಯಾಚ್ ಆಗುವ ಲೈಟ್ ಐ ಶ್ಯಾಡೋ ಹಚ್ಚಿ. ದಪ್ಪ ಕಣ್ಣುಗಳಾದಲ್ಲಿ ಲೈನನ್ನು ಸ್ಪಲ್ಪ ದಪ್ಪವಾಗಿ ಹಾಕಿ. ಕಾಜಲ್ ಹಚ್ಚಿ. ಐಬ್ರೋ ಮೇಕಪ್ ಬೇಡ.
ಸಮಾರಂಭಗಳಿಗೆ ಕಲರ್‌ಫುಲ್ ಐ ಮೇಕಪ್
ಮದುವೆ, ಸಭೆ, ಸಮಾರಂಭ ಮುಂತಾದ ಸಮಯದಲ್ಲಿ ಡ್ರೆಸ್‌ಕೋಡ್‌ನಷ್ಟೇ ಕಣ್ಣಿನ ಅಂದಕ್ಕೆ ಪ್ರಾಮುಖ್ಯತೆ ನೀಡಿ. ಯಾವ ಬಣ್ಣದ ಉಡುಗೆಯನ್ನು ಧರಿಸುತ್ತೀರೋ ಅದೇ ಬಣ್ಣಗಳಿಂದ ಕೂಡಿದ ಐ ಮೇಕಪ್ ಮಾಡಿ. ಆಕರ್ಷಕವಾಗಿ ಕಾಣುತ್ತದೆ. ನೀಲಿ, ಗುಲಾಬಿ, ಕಂದು ಬಣ್ಣದ ಐ ಮೇಕಪ್ ಮಾಡಿ. ಐಬ್ರೋ ಮೇಕಪ್ ಕೂಡ ಮಾಡಿ. ಕ್ಯಾಟ್ ಐ ಲೈನ್ ಬರೆಯಿರಿ. ಮಸ್ಕರಾ ಬಳಸಿ.
ಸಂಜೆಗಿರಲಿ ಶೈನಿಂಗ್ ಐ ಮೇಕಪ್
ಸಂಜೆ ಮತ್ತು ರಾತ್ರಿಯ ವೇಳೆ ಶೈನಿಂಗ್ ಐ ಶೇಡ್ ಹಚ್ಚಿ. ಗೋಲ್ಡ್ ಮತ್ತು ಸಿಲ್ವರ್ ಬಣ್ಣಗಳನ್ನು ಹೆಚ್ಚಾಗಿ ಬಳಸಿ. ಲೈಟಿಂಗ್‌ನಲ್ಲಿ ಕಣ್ಣುಗಳು ಹೊಳೆಯುತ್ತವೆ. ಯಾವುದೇ ಬಣ್ಣಗಳನ್ನು ಹಚ್ಚಿದರೂ ಜೊತೆಗೆ ಗೋಲ್ಡ್ ಅಥವಾ ಸಿಲ್ವರ್ ಶೇಡ್ ಮಿಕ್ಸ್ ಮಾಡಿ.
ಔಟಿಂಗ್‌ಗೆ ಫಂಕಿ ಮೇಕಪ್
ಔಟಿಂಗ್‌ಗೆ ಹೋಗುವಾಗ ಐ ಲೈನರ್ಸ್‌ನಿಂದ ರಿವರ್ಸ್ ಕ್ಯಾಟ್ ಐ ಲೈನ್ ಮಾಡಿ. ಬ್ಲ್ಯೂ, ಗ್ರೀನ್ ಪ್ರಯೋಗ ಮಾಡಿ. ಐ ಶ್ಯಾಡೋ ಕಡಿಮೆ ಬಳಸಿ. ಯಾವುದೇ ಕಾರಣಕ್ಕೂ ಗಾಢ ಬಣ್ಣದಿಂದ ಅಲಂಕರಿಸಿಕೊಳ್ಳಬೇಡಿ.
ಹಾಲಿಡೇ ಐ ಮೇಕಪ್
ಲಾಂಗ್ ಜರ್ನಿ ಮಾಡುವಾಗ, ಟ್ರಿಪ್‌ಗೆ ಹೊಗುವಾಗ ಸಾಧ್ಯವಾದಷ್ಟು ವಾಟರ್ ಫ್ರೂಪ್ ಐ ಮೇಕಪ್ ಮಾಡಿ. ನೀರು ತಾಕಿದರೂ ಏನೂ ಆಗದು. ಶ್ಯಾಡೋ ಬಳಕೆ ಬೇಡ. ಲೈನರ್ ಹಾಕಿ. ಫೋಟೋಗಳಲ್ಲಿ ಚೆನ್ನಾಗಿ ಕಾಣುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Festive makeup | ಹಬ್ಬದ ಆಕರ್ಷಕ ಮೇಕಪ್‌ಗೆ 5 ಐಡಿಯಾ