-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೆಸ್ಟಿವ್ ಸೀಸನ್‌ನಲ್ಲಿ ಸಾಲು ಸಾಲು ಫ್ಯಾಷನ್ ಶೋಗಳ (Fashion news) ನಡುವೆಯೇ ನಡೆದ ಕೆಸರ್ ಜ್ಯುವೆಲರಿಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬ್ರೈಡಲ್ ಫ್ಯಾಷನ್ ಶೋನಲ್ಲಿ ಆಕರ್ಷಕ ಟೆಂಪಲ್ ಜ್ಯುವೆಲರಿಗಳು ಹಾಗೂ ಟ್ರೆಡಿಷನಲ್ ಆಭರಣಗಳು ಅನಾವರಣಗೊಂಡವು.
ಡಿಸೈನರ್ ಅಪರ್ಣಾ ಅವರ ಡಿಸೈನರ್‌ವೇರ್‌ಗಳನ್ನು ಧರಿಸಿ ಸೆಲೆಬ್ರೆಟಿ ಶೋ ಸ್ಟಾಪರ್ ಹೆಜ್ಜೆ ಹಾಕಿದರೇ, ಇತರೇ ಮಾಡೆಲ್‌ಗಳು ಪಕ್ಕಾ ಫೆಸ್ಟಿವ್ ಸೀಸನ್‌ಗೆ ಹೊಂದುವಂತಹ ಜ್ಯುವೆಲರಿಗಳನ್ನು ಧರಿಸಿ ಕ್ಯಾಟ್‌ವಾಕ್ ಮಾಡಿದರು. ಸೂಪರ್ ಮಾಡೆಲ್ ಜಾಕಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡು ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ಕಾಣಿಸಿಕೊಂಡರು. ಈ ಫ್ಯಾಷನ್ ಶೋಗೆ ಫ್ಯಾಷನ್ ಡೈರೆಕ್ಟರ್ ಫಾಹೀಮ್ ರಾಜಾ ಅವರು ಕೊರಿಯೊಗ್ರಾಫಿ ಮಾಡಿದ್ದರು. ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ತೌಸಿಫ್ ಸೆಟ್ ಅವರು ಮಾಡೆಲ್‌ಗಳ ಮೇಕೋವರ್ ಹಾಗೂ ಮೇಕಪ್ ವಹಿಸಿಕೊಂಡಿದ್ದರು.
ನಟಿ ಮಾಡೆಲ್ ವಾರೀನಾ ಹುಸೇನ್ ವಾಕ್
ಈ ಫ್ಯಾಷನ್ ಶೋನಲ್ಲಿ ಮಾಡೆಲ್‌ಗಳ ಮಧ್ಯೆ ಬಾಲಿವುಡ್ ನಟಿ ಹಾಗೂ ಮಾಡೆಲ್ ವಾರೀನಾ ಹುಸೇನ್ ಮಿಂಚಿದರು. ಅತ್ಯಾಕರ್ಷಕವಾಗಿ ಕಾಣಿಸುತ್ತಿದ್ದ ವಾರೀನ್ ಅವರ ಮೇಕಪ್, ಕನ್ನಡಿಗ ತೌಸಿಫ್ ಅವರು ಮಾಡಿದ್ದರು. ಬ್ಯೂಟಿಫುಲ್ ಆಗಿ ಮಿನುಗುತ್ತಿದ್ದ ಸಿಕ್ವೀನ್ಸ್ ಗೌನ್ ಧರಿಸಿದ್ದ ನಟಿ ವಾರೀನಾ ಹುಸೇನ್, ರ್ಯಾಂಪ್ ಮೇಲೆ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ಕ್ಯಾಟ್ ವಾಕ್ ಮಾಡಿದರು.
ಇದನ್ನೂ ಓದಿ: Fashion News: ರ‍್ಯಾಂಪ್ ಮೇಲೆ ರಾಷ್ಟ್ರ ಪ್ರೇಮ ಸಾರಿದ ಮಹಿಳೆಯರ ಫ್ಯಾಷನ್ ಶೋ
ಫ್ಯಾಷನ್ ಹಬ್‌ನಂತಾಗುತ್ತಿರುವ ಬೆಂಗಳೂರು
“ಬೆಂಗಳೂರಿನ ರ‍್ಯಾಂಪ್‌ನಲ್ಲಿ ವಾಕ್ ಮಾಡುವುದೇ ಒಂದು ಖುಷಿ. ಇದೀಗ ಉದ್ಯಾನನಗರಿಯೂ ಕೂಡ ಮುಂಬಯಿಯಂತೆ ವೇಗವಾಗಿ ಬೆಳೆಯುತ್ತಿದೆ. ಅಲ್ಲದೇ, ಫ್ಯಾಷನ್ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಅಲ್ಲದೇ ಇಲ್ಲಿನ ಫ್ಯಾಷನ್ ಕ್ಷೇತ್ರದ ದಿಗ್ಗಜರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮಾಡೆಲ್‌ಗಳು ಅಷ್ಟೇ! ಸಿನಿಮಾಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಒಟ್ಟಾರೆ ಬೆಂಗಳೂರು ಇದೀಗ ಫ್ಯಾಷನ್ ಹಬ್ ಆಗುತ್ತಿದೆ “ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.
ಟ್ರೆಡಿಷನಲ್ ಜ್ಯುವೆಲರಿ ಅನಾವರಣ
ರ‍್ಯಾಂಪ್‌ನಲ್ಲಿ ಸುಮಾರು 12 ಮಾಡೆಲ್‌ಗಳು ಟ್ರೆಡಿಷನಲ್ ಜ್ಯುವೆಲರಿ ಧರಿಸಿ ಅತ್ಯಾಕರ್ಷಕ ವಾಕ್ ಮಾಡಿದರು. ಇವರಿಗೆಲ್ಲಾ ಮಾಡೆಲ್ ಜಾಕಿ ಸ್ಟೈಲಿಂಗ್ ಮಾಡಿದ್ದರು. ಜತೆಗೆ ನಾನಾ ಕಡೆಗಳಿಂದ ಆಗಮಿಸಿದಂತಹ ಬಿಸ್ನೆಸ್ ಟೈಕಾನ್‌ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)