ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯಾ ತೃತೀಯಾಗೆ ನಾನಾ ವಿನ್ಯಾಸದ ಲೆಕ್ಕವಿಲ್ಲದಷ್ಟು ಬಗೆಯ ಬಂಗಾರದ ಜ್ಯುವೆಲರಿಗಳು ಆಭರಣಗಳ ಲೋಕಕ್ಕೆ ಕಾಲಿಟ್ಟಿವೆ. ಸಾವಿರಾರು ಡಿಸೈನ್‌ನ ಪುಟ್ಟ ಕಿವಿಯೊಲೆಯಿಂದಿಡಿದು, ಟೆಂಪಲ್ ಡಿಸೈನ್‌ನ ಭಾರಿ ತೂಕದ ಕಮರ್‌ಬಾಂದ್‌ವರೆಗಿನ ಆಭರಣಗಳು ಸದ್ದು ಮಾಡಿವೆ. ಇದಕ್ಕೆ ಪೂರಕ ಎಂಬಂತೆ, ಜ್ಯುವೆಲರಿ ಬ್ರಾಂಡ್‌ಗಳು, ಶೋ ರೂಂಗಳು ಹಾಗೂ ಚಿಕ್ಕ ಪುಟ್ಟ ಶಾಪ್‌ಗಳು ಕೂಡ ಗ್ರಾಹಕರಿಗೆ ಮೇಕಿಂಗ್ ಚಾರ್ಜ್ ಕಡಿತ, ನೋ ವೇಸ್ಟೇಜ್ ಚಾರ್ಜ್, ಗಿಫ್ಟ್ ವೋಚರ್ ಸೇರಿದಂತೆ ನಾನಾ ವಿಧದ ಆಫರ್ಸ್‌ಗಳ ಮಹಾಪೂರವನ್ನೇ ಹರಿಸಿವೆ.
ಆಭರಣಲೋಕದಲ್ಲೊಂದು ಸುತ್ತು
From affordable lightweight to heavy gold big necklaces, chokers, layer necklaces, multi stone necklaces, 2 in one necklaces, net necklaces, nature design necklaces, folklor, yellow-white gold sequence and necklaces, layered necklaces are offered in countless varieties.
ಕಿವಿಯೊಲೆ-ಉಂಗುರ-ಬ್ಯಾಂಗಲ್ಸ್ ಮಹಾಪೂರ
ಫ್ಯಾಷನ್ ಇಯರಿಂಗ್ಸ್, ಮಲ್ಟಿ ಲೆಯರ್ಡ್ ಬಿಗ್ ಜುಮಕಿ, ಲಾಂಗ್ ಕಂಟೆಂಪರರಿ ಹ್ಯಾಂಗಿಗ್ಸ್, ಶ್ಯಾಂಡಿಲಾರ್, ರೋಪ್ ಇಯರಿಂಗ್ಸ್, ಬಿಗ್ ಸ್ಟೋನ್ –ಪರ್ಲ್ ಸ್ಟಡ್ಸ್, ಫ್ಲೋರಲ್ ಓಲೆ, ಅನ್‌ಕಟ್ ಡೈಮಂಡ್ ಬಿಗ್ ಸ್ಟಡ್ಸ್, ಸಿಂಗಲ್ ಹರಳಿನ ಸ್ಟಡ್ಸ್, ಟ್ವಿಸ್ಟೆಡ್ ಹೀಗೆ ಊಹೆಗೂ ಮೀರಿದ ವಿನ್ಯಾಸಗಳು ಇಯರಿಂಗ್ಸ್ ಕೆಟಗರಿಯಲ್ಲಿ ಬಿಡುಗಡೆಗೊಂಡರೇ, ಫ್ಯಾಷನ್ ಲೈಟ್‌ವೈಟ್ ಬ್ರೆಸ್‌ಲೇಟ್, ಬಂಗಾರದ ಎಥ್ನಿಕ್ ಫಿಂಗರ್ ರಿಂಗ್ಸ್‌ನ ನಾನಾ ಡಿಸೈನ್‌ಗಳು ಈ-ಜನರೇಷನ್‌ನವರಿಗೂ ಪ್ರಿಯವಾಗುವಂತಹ ವಿನ್ಯಾಸದಲ್ಲಿ ಎಂಟ್ರಿ ನೀಡಿವೆ. ಈ ಬಾರಿ ಲೈಟ್‌ವೇಟ್‌ನ ಸೆಟ್ ಬ್ಯಾಂಗಲ್ಸ್ ಹಾಗೂ ಸಿಂಗಲ್ ಕಡ ಹಾಗೂ ಕಂಗನ್‌ಗಳು ಲಗ್ಗೆ ಇಟ್ಟಿವೆ.
ಹುಡುಗಿಯರ ಫೇವರೇಟ್ ಫ್ಯಾಷನ್ ಜ್ಯುವೆಲರಿ
ಯುವತಿಯರ ಫೆವರೇಟ್ ಲಿಸ್ಟ್‌ನಲ್ಲಿರುವ ಫ್ಯಾಷನ್ ಜ್ಯುವೆಲರಿಗಳು ಹೊಸ ವಿನ್ಯಾಸದೊಂದಿಗೆ ಬಂದಿವೆ. ಝರ್ಕೋನಿ, ಟೀನ್ ಜುವೆಲರಿ, ಸಿಲ್ವರ್ ಜುವೆಲರಿ, ರೋಡಿಯಂ ಕೋಟೆಡ್‌ನ ಬಂಗಾರದ ಈ ಆಭರಣಗಳು ಈಗಾಗಲೇ ಹುಡುಗಿಯರನ್ನು ಹಾಗೂ ಕಾರ್ಪೋರೇಟ್ ಕ್ಷೇತ್ರದ ಸ್ತ್ರೀಯರನ್ನೂ ಆಕರ್ಷಿಸಿವೆ. ಇದರೊಂದಿಗೆ ಪಾರ್ಟಿಗೆ ಸೂಟ್ ಆಗುವ ಚೈನ್ ವಿತ್ ಅನ್‌ಕಟ್/ಕಟ್ ಡೈಮಂಡ್‌ನ ಪೆಂಡೆಂಟ್‌ಗಳು ಸಿಂಪಲ್ ಡಿಸೈನ್‌ನಲ್ಲಿ ಕಾಲಿಟ್ಟಿವೆ. ಜರ್ಕೊನಿ ಪಾರ್ಟಿ ನೆಕ್ಲೇಸ್ ಕೂಡ ಪ್ರಚಲಿತದಲ್ಲಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ಸಾಮಾನ್ಯರ ಕೈಗೆಟಕುತ್ತಿರುವ ಡೈಮಂಡ್ ಆಭರಣಗಳು
ಡೈಮಂಡ್ ಆಭರಣಗಳನ್ನು ಇದೀಗ ಸಾಮಾನ್ಯರು ಕೊಳ್ಳಬಹುದು ಹಾಗೆನ್ನುತ್ತಾರೆ ಜ್ಯುವೆಲರಿ ಡಿಸೈನರ್‌ಗಳು. ಹೌದು. ಇದೀಗ ಲಕ್ಷ ರೂ. ಗಳಿಗಿಂತ ಕಡಿಮೆ ದರದಲ್ಲಿ ಪೆಂಡೆಂಟ್, ಉಂಗುರಗಳು ಹಾಗೂ ಸಿಂಪಲ್ ಸ್ಟಡ್ಸ್ ದೊರೆಯುತ್ತಿವೆ. ಅಂತಹ ನಾನಾ ಡಿಸೈನ್‌ಗಳನ್ನು ಜ್ಯುವೆಲರಿ ಬ್ರಾಂಡ್‌ಗಳು ಬಿಡುಗಡೆ ಮಾಡಿವೆ.
ಇದನ್ನೂ ಓದಿ : Viral Video: ಫ್ಯಾಶನ್ ಶೋದಲ್ಲಿ ಮಾಡೆಲ್ ಮೈಮೇಲಿದ್ದ ಜಾಕೆಟ್ ತೆಗೆದುಹಾಕಿದ ರೋಬೋಟ್; ಇಷ್ಟವಾಗಿಲ್ಲವೆಂದ ನೆಟ್ಟಿಗರು
ಅಕ್ಷಯ ತೃತೀಯಾಗೆ ಆನ್‌ಲೈನ್ ಖರೀದಿ
· ಬಹಳಷ್ಟು ಜ್ಯುವೆಲರಿ ಬ್ರಾಂಡ್‌ಗಳು ಆನ್‌ಲೈನ್ ಮುಖಾಂತರವೂ ಆಭರಣಗಳನ್ನು ನೋಡಿ, ಖರೀದಿಸುವ ಸೌಲಭ್ಯ ನೀಡಿವೆ.
· ಬೇಕಿದ್ದಲ್ಲಿ, ಆನ್‌ಲೈನ್‌ನಲ್ಲಿ ಮೊದಲೇ ಸೆಲೆಕ್ಟ್ ಮಾಡಿ, ಆ ದಿನದಂದು ಖರೀದಿಸಬಹುದು.
· ಬಂಗಾರದ ಆಭರಣದ ಹಾಲ್‌ಮಾರ್ಕ್ ನೋಡಿ ಖರೀದಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)