Site icon Vistara News

Party Fashion: ಬಿಹೈವ್‌ ಹೈ ಪಾರ್ಟಿ ಫ್ಯಾಷನ್‌ ಶೋನಲ್ಲಿ ಬಾಲಿವುಡ್‌ ನಟಿ ನೇಹಾ ದುಪಿಯಾ

Bollywood actress Neha Dhupia

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಿಹೈವ್‌ ಜೊರ್ಬಾ ಹೈ ಫ್ಯಾಷನ್‌ ಪಾರ್ಟಿ ಉದ್ಯಾನನಗರಿ ಫ್ಯಾಷನ್‌ ಪ್ರಿಯರ ಜೋಷ್‌ ಹೆಚ್ಚಿಸಿತ್ತು. ಹೌದು. ಚರ್ಚ್ ಸ್ಟ್ರೀಟ್‌ನಲ್ಲಿರುವ ಬಿಹೈವ್‌ನಲ್ಲಿ ನಡೆದ ಜೊರ್ಬಾ ಪೇಜ್‌ ತ್ರೀ ಫ್ಯಾಷನ್ ಪಾರ್ಟಿಯಲ್ಲಿ, ಫ್ಯಾಷನ್‌ ಶೋ ಜತೆಗೆ ಬೆಸ್ಟ್‌ ಡ್ರೆಸ್ಡ್‌ ಸ್ಪರ್ಧೆಯೂ ಕೂಡ ನಡೆಯಿತು. ಇವೆಲ್ಲದರ ನಡುವೆ ವಿಭಿನ್ನವಾದ ಕಾಸ್ಟ್ಯೂಮ್ಸ್‌ ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು ಆಕರ್ಷಕ ಫ್ಯಾಷನ್‌ ವಾಕ್‌ ಮಾಡಿದರು. ಇವೆಲ್ಲದರ ನಡುವೆ ಆಗಮಿಸಿದ ಬಾಲಿವುಡ್‌ ತಾರೆ ನೇಹಾ ದುಪಿಯಾ ಫ್ಯಾಷನ್‌ ಪ್ರಿಯರ ಜೋಷ್‌ ಏರಿಸಿದರು.

ನಟಿ ನೇಹಾ ದುಪಿಯಾ ಫ್ಯಾಷನ್‌ ಜೋಷ್‌

ಹೈ ಫ್ಯಾಷನ್‌ ಶೋ ಹಾಗೂ ಪಾರ್ಟಿಯಲ್ಲಿ ಪಾಲ್ಗೊಂಡ ಬಾಲಿವುಡ್‌ ತಾರೆ ನೇಹಾ ದುಪಿಯಾ, ಕಾರ್ಯಕ್ರಮಕ್ಕೆ ಚಾಲನೆ ನೀಡುವುದರೊಂದಿಗೆ ಬಿಹೈವ್‌ ಪ್ರಿಮೀಯಮ್‌ನ ಸಿಇಒ ಶೇಷಗಿರಿ ರಾವ್‌ ಪಾಪ್ಲಿಕರ್‌ ಅವರೊಂದಿಗೆ ವನ್‌ ಟು ವನ್‌ ಇಂಟಾರಾಕ್ಟ್‌ ಮಾಡಿ ಪ್ರಶ್ನೆಗಳಿಗೆ ಉತ್ತರಿಸಿದರು.

“ಐ ಲವ್‌ ಬೆಂಗಳೂರು. ಕೇವಲ ಇದು ಫ್ಯಾಷನ್‌ ಸಿಟಿ ಮಾತ್ರವಲ್ಲ, ಜೊತೆಗೆ ಸದಾ ಲವಲವಿಕೆಯಿಂದಿರುವ ನಗರವಿದು. ಇಲ್ಲಿನ ಜನರ ಫ್ಯಾಷೆನಬಲ್‌ ಸೆನ್ಸ್ ಮೆಚ್ಚಬೇಕಾದ್ದು.ಇಲ್ಲಿ ಭಾಗವಹಿಸಿರುವ ಸ್ಪರ್ಧಿಗಳು ಕೂಡ ಸಖತ್‌ ಫ್ಯಾಷನ್‌ ಸೆನ್ಸ್‌ ಹೊಂದಿದ್ದಾರೆ” ಎಂದರು.

ನೇಹಾ ದುಪಿಯಾ ಮೆಚ್ಚುಗೆ

ಹೈ ಫ್ಯಾಷನ್‌ ಪಾರ್ಟಿಗಳು ಗ್ಲಾಮರ್‌ ಜೊತೆಗೆ ಕಂಪ್ಲೀಟ್‌ ವಿಭಿನ್ನ ಥೀಮ್‌ ಹೊಂದಿರುತ್ತವೆ. ಈ ಬಗ್ಗೆ ನಟಿ ನೇಹಾ ದುಪಿಯಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟು ಮಾತ್ರವಲ್ಲದೇ, ಬೆಸ್ಟ್ ಡ್ರೆಸ್ಡ್ ಕಪಲ್‌ ಹಾಗೂ ಇನ್ನಿತರ ಫ್ಯಾಷನ್‌ ಕೆಟಗರಿಗಳಿಗೆ ಜ್ಯೂರಿಯಾಗಿ ಪಾಲ್ಗೊಂಡರು. ವಿಜೇತರಾದವರಿಗೆ ವಿಶ್‌ ಮಾಡಿ ಬಹುಮಾನಗಳನ್ನು ವಿತರಿಸಿದರು.‌

ಇದನ್ನೂ ಓದಿ: Kids Dungrees Fashion: ಮುದ್ದು ಮಕ್ಕಳ ಫ್ಯಾಷನ್‌ನಲ್ಲಿ 3 ಶೈಲಿಯ ಕ್ಯೂಟ್‌ ಡಂಗ್ರೀಸ್‌

ಸೆಲೆಬ್ರೆಟಿ ಡಿಸೈನರ್‌ ರಾಜೇಶ್‌ ಶೆಟ್ಟಿ ಕೊರಿಯಾಗ್ರಾಫಿ

ಹೈ ಫ್ಯಾಷನ್‌ ಎನ್ನಬಹುದಾದ ಈ ಫ್ಯಾಷನ್‌ ಪಾರ್ಟಿಯ ಶೋ ಕೊರಿಯಾಗ್ರಾಫಿಯನ್ನು ಸೆಲೆಬ್ರೆಟಿ ಶೋ ಡೈರೆಕ್ಟರ್‌ ರಾಜೇಶ್‌ ಶೆಟ್ಟಿ ವಹಿಸಿಕೊಂಡಿದ್ದರು. ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು ರ್ಯಾಂಪ್‌ ಮೇಲೆ ವಾಕ್‌ ಮಾಡಿ ನೋಡುಗರ ಮನ ಸೆಳೆದರು. ಜತೆಗೆ ಯುವ ಜನರನ್ನು ಹುಚ್ಚೆಬ್ಬಿಸಿದರು. ಈ ಫ್ಯಾಷನ್‌ ಪಾರ್ಟಿಯಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಪಿಯಾನೋ ಕಲಾವಿದರಾದ ಐರಿನಾ ಗಲ್ಕಿನಾ, ಭಾರತದ ನಂಬರ್‌ ವನ್‌ ಮಹಿಳಾ ಡಿಜೆ ರಿಂಕ್‌, ಫ್ಯಾಷನ್‌ ಡಿಸೈನರ್‌ ನಾಗ್ಸ್ ಭಾಗವಹಿಸಿದ್ದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version