Site icon Vistara News

Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

Cannes 2024 Fashion celebrities trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಮತ್ತೊಮ್ಮೆ ಸೆಲೆಬ್ರೆಟಿಗಳ (Cannes 2024 Fashion) ಫ್ಯಾಷನ್‌ ಟ್ರೆಂಡ್‌ಗೆ ಸಾಕ್ಷಿಯಾಗುತ್ತಿದೆ. ಹೌದು, ಈಗಾಗಲೇ ಆರಂಭವಾಗಿರುವ ವಿಶ್ವದ ಪ್ರತಿಷ್ಠಿತ 77ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಹಾಲಿವುಡ್‌-ಬಾಲಿವುಡ್‌ ಸೇರಿದಂತೆ ನಾನಾ ಕ್ಷೇತ್ರದ ಫ್ಯಾಷನ್‌ ಐಕಾನ್‌ಗಳು ಪಾಲ್ಗೊಂಡು ತಮ್ಮದೇ ಆದ ಫ್ಯಾಷನ್‌ವೇರ್ಸ್ ಅನಾವರಣಗೊಳಿಸತೊಡಗಿದ್ದಾರೆ.

ಫ್ಯಾಷನ್‌ ವಿಮರ್ಶಕರ ರಿವ್ಯೂ
” ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಎಂದಿನಂತೆ ನಾನಾ ಧಿರಿಸು ಹಾಗೂ ಗೌನ್‌ಗಳ ಅನಾವರಣದಿಂದಲೇ ಆರಂಭವಾಗಿದೆ. ಸ್ಪರ್ಧೆಗಿಳಿದವರಂತೆ ತಾರೆಯರು ಕೂಡ ಊಹೆಗೂ ಮೀರಿದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸತೊಡಗಿದ್ದಾರೆ. ಹಾಲಿವುಡ್‌ ತಾರೆಯರು ನಾನ್‌ ವೇರಬಲ್‌ ಡಿಸೈನರ್‌ವೇರ್‌ಗಳಿಗೆ ಆದ್ಯತೆ ನೀಡಿದರೇ, ನಮ್ಮ ರಾಷ್ಟ್ರದ ಸೆಲೆಬ್ರೆಟಿಗಳು ವೇರಬಲ್‌ ಪ್ಲಸ್‌ ನಾನ್‌ ವೇರಬಲ್‌ ಡಿಸೈನರ್‌ ಗೌನ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಇನ್ನು ಸಾಕಷ್ಟು ದಿನಗಳು ಈ ಫೆಸ್ಟಿವಲ್‌ ನಡೆಯುವುದರಿಂದ ಈಗಲೇ ಏನೂ ಹೇಳಲಾಗದು” ಎನ್ನುತ್ತಾರೆ ಫ್ಯಾಷನ್‌ ದಿಗ್ಗಜರಾದ ಸೆಲೆಬ್ರೆಟಿ ಡಿಸೈನರ್‌ ನೀರಜ್‌ ವರ್ಮಾ.
” ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಬಾಲಿವುಡ್‌ ನಟಿ ಐಶ್ವರ್ಯಾ ರೈ ಪ್ರತಿಬಾರಿಯೂ ವಿನೂತನ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ನಿರೀಕ್ಷೆ ಇದೆ. ಇನ್ನು ಕಿಯಾರಾ, ಶೋಭಿತಾ, ಜಾಕ್ವೇಲಿನ್‌ ಹಾಗೂ ಅದಿತಿ ರಾವ್‌ ಹೈದರಿ ಕೂಡ ಮುಂಬರುವ ದಿನಗಳಲ್ಲಿ ಭಾಗವಹಿಸಲಿದ್ದು, ಇವರ ಡಿಸೈನರ್‌ವೇರ್‌ಗಳ ಬಗ್ಗೆಯೂ ಸಾಕಷ್ಟು ಕುತೂಹಲವಿದೆ” ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ರೋಹನ್‌ ರಾಜ್‌.

ಇದನ್ನೂ ಓದಿ: Sandalwood Actress At Cannes 2023: ಮತ್ತೊಮ್ಮೆ ಕಾನ್‌ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ

ಟಿವಿ ತಾರೆ ದೀಪ್ತಿಯ ಆಕರ್ಷಕ ಲಾಂಗೆಸ್ಟ್‌ ಗೌನ್‌

ಆರಂಭದಲ್ಲೆ, ಟಿವಿ ತಾರೆ ದೀಪ್ತಿ ಸದ್ವಾನಿಯ ಹಳದಿ ಕಲರ್‌ ರಫಲ್‌ ನೆಟ್ಟೆಡ್‌ ಗೌನ್‌ ಕಾನೆ ಫೆಸ್ಟಿವಲ್‌ನ ಆರಂಭದ ದಿನದಲ್ಲೆ ಎಲ್ಲರನ್ನು ಸೆಳೆಯಿತು. ಆಂಚಲ್‌ ಕಾಚರ್‌ ಡಿಸೈನ್‌ನ ಈ ಗೌನ್‌ ಮೊದಲನೆ ದಿನದ ಅತಿ ಉದ್ದನೆಯ ಗೌನ್‌ ಎಂದು ರೆಕಾರ್ಡ್‌ ಮಾಡಿತು.

ಶಾರ್ಕ್‌ ಟ್ಯಾಂಕ್‌ ಖ್ಯಾತಿಯ ನಮಿತಾ ತಾಪರ್‌ ಲುಕ್‌:

ಉದ್ಯಮಿ ಹಾಗೂ ಶಾರ್ಕ್‌ ಟ್ಯಾಂಕ್‌ ಖ್ಯಾತಿಯ ನಮಿತಾ ಟಾಪರ್‌ರ ಪಾಸ್ಟೆಲ್‌ ಶೇಡ್‌ನ ಆಫ್‌ ಶೋಲ್ಡರ್‌, ಸ್ಲಿಟ್‌ ಇರುವ ಬಲೂನ್‌ ಸ್ಲೀವ್‌ನ ಗೌನ್‌ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯಿತು.

ಡಿಸೈನರ್‌ವೇರ್‌ ಕಾಪಿ ಮಾಡಿದ ಊರ್ವಶಿ

ಪಿಂಕ್‌ ಗೌನ್‌ನಲ್ಲಿ ಊರ್ವಶಿ ಚಂದನಾಗಿ ಕಾಣಿಸಿದರೂ, ದೀಪಿಕಾ ಪಡುಕೋಣೆಯ ಗೌನ್‌ ಕಾಪಿ ಮಾಡಿದ ಬಿರುದು ದೊರೆಯಿತು.

ಹಾಲಿವುಡ್‌ ತಾರೆಯರ ಬೆಸ್ಟ್‌ ಲುಕ್ಸ್‌

ನಟಿ ನೌಮಿ ಕಾಂಪ್ಬೆಲ್‌ ಬ್ಲಾಕ್‌ ಶೇಡ್‌ ಆರ್ಕಿವ್‌ ಚಾನೆಲ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಅನ್ಯಾ ಟಾಯ್ಲರ್‌ ಡಿಯೋರ್‌ ಶೋಲ್ಡರ್‌ಲೆಸ್‌ ಕ್ರೀಮಿಶ್‌ ಸಿಂಡ್ರೆಲ್‌ ಗೌನ್‌ನಲ್ಲಿ ಗಮನ ಸೆಳೆದರು. ಕ್ರಿಸ್‌ ಹೆಮ್ಸ್ವರ್ತ್‌ – ಎಲ್ಸಾ ಕಪಲ್‌ ಕಾಂಟ್ರಸ್ಟ್‌ ಬ್ಲಾಕ್‌ & ವೈಟ್‌ ಔಟ್‌ಫಿಟ್‌ನಲ್ಲಿ ರೆಡ್‌ ಕಾರ್ಪೆಟ್‌ ತುಳಿದರು. ಲಾ ರೋಚ್‌ ಬ್ಲಾಕ್‌ ಶೈನಿಂಗ್‌ ಕೋಟ್‌ ಶರ್ಟ್-ಪ್ಯಾಂಟ್‌ನಲ್ಲಿ, ಸಬ್ರು ಡಬ್ಬಲ್‌ ಶೇಡ್‌ ವನ್‌ ಶೋಲ್ಡರ್‌ ಗೌನ್‌ನಲ್ಲಿ, ಗ್ರೇಟಾ ರೆಡ್‌ ಫಿಶ್‌ಟೇಲ್‌ ಗೌನ್‌ನಲ್ಲಿ, ಇವಾ ಬಾಲ್ಮೈಮ್‌ ಶಿಮ್ಮರ್‌ ಗೌನ್‌ನಲ್ಲಿ ಫ್ಯಾಷನ್‌ ಪ್ರಿಯರನ್ನು ಸೆಳೆದರು. ಇವರೊಂದಿಗೆ ಸಿನಿಮಾ ಪ್ರೀಮಿಯರ್‌ ಟೀಮ್‌ನವರು ನಾನಾ ಶೈಲಿಯ ಡಿಸೈನರ್‌ವೇರ್ಗಳಲ್ಲಿ ಕಾಣಿಸಿಕೊಂಡರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version