Site icon Vistara News

Celebriety Fashion Corner | ಮಲ್ಟಿ ಟಾಸ್ಕಿಂಗ್‌ ಜ್ಯೋತ್ಸ್ನಾ ವೆಂಕಟೇಶ್‌ರ ಫ್ಯಾಷನ್‌-ಫಿಟ್ನೆಸ್‌ ಪ್ರೇಮ

Celebriety Fashion Corner

– ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಿಟ್ನೆಸ್‌ ದಿವಾ, ಫ್ಯಾಷನ್‌ ದಿವಾ, ಗೋಲ್ಡ್‌ ಮೆಡಲ್‌ ಗೆದ್ದ (Celebriety Fashion Corner) ರಾಷ್ಟ್ರಮಟ್ಟದ ಲೇಡಿ ಬಾಡಿಬಿಲ್ಡರ್‌, ಉನ್ನತ ಮಟ್ಟದಲ್ಲಿ ಮಕ್ಕಳಿಗಾಗಿ ಫ್ಯಾಷನ್‌ ವೀಕ್‌ ಆರಂಭಿಸಿ ಯಶಸ್ವಿಯಾದ ಮೊದಲ ಫ್ಯಾಷನ್‌ ಉದ್ಯಮಿ ಜ್ಯೋತ್ಸ್ನಾ ವೆಂಕಟೇಶ್‌. ಮಲ್ಟಿ ಟ್ಯಾಲೆಂಟೇಡ್‌ ಹಾಗೂ ಮಲ್ಟಿ ಟಾಸ್ಕಿಂಗ್‌ ಮಹಿಳೆ ಎಂದರೂ ಅತಿಶಯೋಕ್ತಿಯಾಗದು. ಈ ಬಾರಿಯ ಸೆಲೆಬ್ರಿಟಿ ಫ್ಯಾಷನ್‌ ಕಾರ್ನರ್‌ನಲ್ಲಿ ಜ್ಯೋತ್ಸ್ನಾ ತಮ್ಮ ಫ್ಯಾಷನ್‌-ಫಿಟ್ನೆಸ್‌ ಜರ್ನಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಫ್ಯಾಷನ್‌-ಫಿಟ್ನೆಸ್‌ ಎರಡೂ ಕ್ಷೇತ್ರಗಳಲ್ಲಿ ಯಶಸ್ವಿ ಮಹಿಳೆಯಾಗಿರುವ ಆರಂಭದಲ್ಲಿ ಎದುರಿಸಿದ ಸವಾಲುಗಳೇನು?
ಜ್ಯೋತ್ಸ್ನಾ : ದಶಕಗಳಿಂದ ನಾನು ಕೂಡ ಸಾಮಾನ್ಯ ಮಹಿಳೆಯಾಗಿದ್ದೆ. ಸುಮಾರು ೮೦ ಕೆ.ಜಿ ತೂಕವಿದ್ದೆ. ಮಿಸೆಸ್‌ ಸೌತ್‌ ಇಂಡಿಯಾ ಪೆಜೇಂಟ್‌ನಲ್ಲಿ ಭಾಗವಹಿಸಲು ತೂಕ ಇಳಿಸಿಕೊಂಡೆ. ಅಂದು ನನಗೆ ಪರ್ಸನಲ್‌ ಟ್ರೇನಿಂಗ್‌ ನೀಡುವವರು ಇರಲಿಲ್ಲ. ನನಗೆ ನಾನೇ ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡು ವರ್ಕೌಟ್‌ ಮಾಡಿದೆ. ಅಗತ್ಯಕ್ಕೆ ತಕ್ಕಂತೆ ಸುಮಾರು ೨೦ ಕೆ. ಜಿ ತೂಕ ಕಡಿಮೆ ಮಾಡಿಕೊಂಡೆ. ವಿಜೇತಳಾದೆ. ಇದು ನನ್ನ ಜರ್ನಿಯ ಆರಂಭದ ದಿನಗಳು.

Celebriety Fashion Corner

೪೦ರ ವಯಸ್ಸಿನಲ್ಲಿ ನೀವು ಬಾಡಿ ಬಿಲ್ಡಿಂಗ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬಗ್ಗೆ ಹೇಳಿ..
ಜ್ಯೋತ್ಸ್ನಾ :
ಹೌದು. ಬಾಡಿ ಬಿಲ್ಡಿಂಗ್‌ನಲ್ಲಿವಿಜೇತರಾಗುವುದು ಸುಲಭದ ಕೆಲಸವಾಗಿರಲಿಲ್ಲ. ಇದಕ್ಕಾಗಿ ನಾನು ಜೀವನಶೈಲಿ ಬದಲಿಸಿಕೊಂಡೆ. ಸಾಕಷ್ಟು ತ್ಯಾಗ ಮಾಡಿದೆ. ಕೊನೆಗೂ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್‌ನಲ್ಲಿ ಗೋಲ್ಡ್‌ ಮೆಡಲ್‌ ಗೆದ್ದೆ. ಇದು ನನಗೆ ಎಲ್ಲದಕ್ಕಿಂತ ಹೆಮ್ಮೆಯೆನಿಸಿತು.

Celebriety Fashion Corner

ಉದ್ಯಾನನಗರಿಯಲ್ಲಿ ಮಕ್ಕಳ ಫ್ಯಾಷನ್‌ ವೀಕ್‌ಅನ್ನು ದೊಡ್ಡ ಮಟ್ಟದಲ್ಲಿ ನಡೆಸಿದ ಕ್ರೆಡಿಟ್‌ ನಿಮಗೆ ಸಲ್ಲುತ್ತದೆ. ಇದಕ್ಕಾಗಿ ನೀವು ಮಾಡಿದ್ದೇನು?
ಜ್ಯೋತ್ಸ್ನಾ : ಹೌದು. ಮಕ್ಕಳನ್ನು ಹ್ಯಾಂಡಲ್‌ ಮಾಡುವುದೇ ದೊಡ್ಡ ಕೆಲಸ. ಅದರಲ್ಲೂ ಫ್ಯಾಷನ್‌ ವೀಕ್‌ಗಾಗಿ ಅವರನ್ನು ಗ್ರೂಮ್‌ ಮಾಡುವುದು, ರ್ಯಾಂಪ್‌ ವಾಕ್‌ ಮಾಡಿಸುವುದು ಪ್ರತಿಬಾರಿಯೂ ಸವಾಲಿನಂತೆ. ನನಗೆ ಈ ಕ್ಷೇತ್ರದ ಮೇಲೆ ಮೊದಲಿನಿಂದಲೂ ಒಲವಿರುವುದರಿಂದ ಇದೆಲ್ಲ ಸುಲಭವಾಯ್ತು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಾಗ ಇವೆಲ್ಲಾ ಸುಲಭವಾಗುತ್ತದೆ. ಪ್ರತಿ ಮಕ್ಕಳನ್ನು ನನ್ನ ಮಕ್ಕಳಂತೆ ಪ್ರೀತಿಸುತ್ತೇನೆ. ಗ್ರೂಮ್‌ ಮಾಡುತ್ತೇನೆ. ಹಾಗಾಗಿ ಇವೆಲ್ಲಾ ಸಾಧ್ಯವಾಗಿದೆ.

Celebriety Fashion Corner

ಫಿಟ್ನೆಸ್‌ ಹಾಗೂ ಫ್ಯಾಷನ್‌ ಕ್ಷೇತ್ರ ಹೇಗೆ ಬ್ಯಾಲೆನ್ಸ್‌ ಮಾಡುತ್ತೀರಾ?
ಜ್ಯೋತ್ಸ್ನಾ : ಫಿಟ್ನೆಸ್‌ ನನ್ನ ಮೊದಲ ಮಂತ್ರ. ದಿನಚರಿ ಬೆಳಗ್ಗೆ ೫.೩೦ಕ್ಕೆ ಆರಂಭವಾಗುತ್ತದೆ. ಮಲ್ಟಿ ಟಾಸ್ಕಿಂಗ್‌ ಆಗಿರುವುದರಿಂದ ಎಲ್ಲವನ್ನೂ ಕೂಲಾಗಿಯೇ ನಿಭಾಯಿಸುತ್ತೇನೆ.

ಮಾಡೆಲ್‌ಗಳಿಗೆ ಫಿಟ್ನೆಸ್‌ ಬಹಳ ಮುಖ್ಯ. ಅವರಿಗೆ ಈ ಬಗ್ಗೆ ಏನು ಸಲಹೆ ನೀಡುತ್ತೀರಾ?
ಜ್ಯೋತ್ಸ್ನಾ :
ಮಾಡೆಲ್‌ಗಳು ಕೇವಲ ನೋಡಲು ಸುಂದರವಾಗಿ ಕಂಡರೆ ಸಾಲದು. ಫಿಟ್ನೆಸ್‌ ಕೂಡ ಮುಖ್ಯ. ಎನರ್ಜಿ ಲೆವೆಲ್‌ ಹೆಚ್ಚಿಸಿಕೊಳ್ಳಲು ವರ್ಕೌಟ್‌ ಇದಕ್ಕೆ ಸಹಕಾರಿ. ಇದನ್ನು ಜೀವನದ ಭಾಗವಾಗಿಸಿಕೊಳ್ಳಿ.

Celebriety Fashion Corner

ಫೆಸ್ಟೀವ್‌ ಸೀಸನ್‌ನಲ್ಲಿ ಫಿಟ್ನೆಸ್‌ ಕಾಪಾಡಿಕೊಳ್ಳುವುದು ಹೇಗೆ?


ಜ್ಯೋತ್ಸ್ನಾ :
ಹಬ್ಬವನ್ನು ಸಂಭ್ರಮಿಸಿ. ಆದರೆ, ಫಿಟ್ನೆಸ್‌ ಬಗ್ಗೆಯೂ ಗಮನವಿರಲಿ. ವರ್ಕೌಟ್ ಹೆಚ್ಚು ಮಾಡಿ. ಆದಷ್ಟೂ ಕಡಿಮೆ ಕ್ಯಾಲೋರಿ ತಿನಿಸನ್ನು ಸವಿಯಿರಿ.

ಇದನ್ನೂ ಓದಿ | Weekend Style | ಸೀಸನ್‌ಗೆ ತಕ್ಕಂತೆ ಬದಲಾಗುವ ನಿಶಾ ಫ್ಯಾಷನ್‌

Exit mobile version