-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿ ಡಿಸೈನರ್ ಫಾರ್ ಎವರ್ ನವೀನ್ ಕುಮಾರ್ ಅವರ ಡಿಸೈನರ್‌ವೇರ್‌ಗಳಲ್ಲಿ ಜಾಯ್ ಅಲುಕಾಸ್‌ನ ಸೀತಾ ಕಲ್ಯಾಣ ಥೀಮ್‌ನ ವಜ್ರಾಭರಣ ಜ್ಯುವೆಲರಿಗಳನ್ನು ಧರಿಸಿದ ಮಾಡೆಲ್‌ಗಳು ರ‍್ಯಾಂಪ್ (Fashion Show) ಮೇಲೆ ಹೆಜ್ಜೆ ಹಾಕುತ್ತಾ ನೋಡುಗರ ಮನ ಸೆಳೆದರು.
ಒಬ್ಬರಿಗಿಂತ ಒಬ್ಬರ ಗೌನ್‌ಗಳು ಅತ್ಯಾಕರ್ಷಕವಾಗಿದ್ದವು. ಫ್ಯಾಷನ್ ಪ್ರಿಯರ ಮನ ಗೆದ್ದವು. ಎರಡು ಸಿಕ್ವೇನ್ಸ್‌ನಲ್ಲಿ ನಡೆದ, ಈ ರ‍್ಯಾಂಪ್ ಶೋನಲ್ಲಿ, ನಟಿ ಮಿಲನಾ ನಾಗರಾಜ್, ನಟಿ, ಸೂಪರ್ ಮಾಡೆಲ್ ಆಫ್ ಇಂಡಿಯಾ ಸಂಹಿತಾ ವಿನ್ಯಾ ಹಾಗೂ ನಟಿ, ಮಾಡೆಲ್ ರಚಿಕಾ ಸುರೇಶ್ ಸೆಲೆಬ್ರೆಟಿ ಶೋ ಸ್ಟಾಪರ್‌ಗಳಾಗಿ ರ‍್ಯಾಂಪ್ ಶೋ ಕಳೆ ಹೆಚ್ಚಿಸಿದರು. ಬೆಂಚ್‌ಮಾರ್ಕ್ ಇವೆಂಟ್ಸ್ ಆಯೋಜನೆಯಲ್ಲಿ ನಡೆದ ಈ ರ‍್ಯಾಂಪ್ ಶೋ ಗೆ ಪ್ರಿಯಾ ಮಣಿಕಂದನ್ ಕೊರಿಯಾಗ್ರಾಫಿ ಮಾಡಿದ್ದರು.
ಅತ್ಯಾಕರ್ಷಕ ರ‍್ಯಾಂಪ್ ಶೋ
ಎರಡು ರೌಂಡ್‌ನಲ್ಲಿ ನಡೆದ ಈ ಫ್ಯಾಷನ್ ಶೋನಲ್ಲಿ, ಮೊದಲ ಸಿಕ್ವೇನ್ಸ್‌ನಲ್ಲಿ ಡೈಮಂಡ್ ಜ್ಯುವೆಲರಿ ಧರಿಸಿದ ಮಾಡೆಲ್‌ಗಳು ಸೆಲೆಬ್ರೆಟಿ ಡಿಸೈನರ್ ಪಾರ್ ಎವರ್ ನವೀನ್ ಕುಮಾರ್ ಡಿಸೈನ್ ಮಾಡಿರುವ ಆಕರ್ಷಕ ವೈಟ್ ಗೌನ್ಸ್ ಧರಿಸಿದ್ದರು. ಮತ್ತೊಂದು ಸಿಕ್ವೇನ್ಸ್‌ನಲ್ಲಿ ಜಾಯ್ ಅಲುಕಾಸ್‌ನ ಆರ್ಟ್ ಜ್ಯುವೆಲರಿಯೊಂದಿಗೆ ಸುಂದರವಾದ ರಾ ಸಿಲ್ಕ್ ಗೌನ್‌ಗಳನ್ನು ಧರಿಸಿ ಹೆಜ್ಜೆ ಹಾಕಿದರು.
ಇದನ್ನೂ ಓದಿ: Fashion Show News: ಹುಬ್ಬಳ್ಳಿಯಲ್ಲಿ ಯಶಸ್ವಿಯಾದ ಫ್ಲವರ್ ಗರ್ಲ್ಸ್ ರ‍್ಯಾಂಪ್ ಶೋ
ಸೆಲೆಬ್ರೆಟಿ ಡಿಸೈನರ್ ಫಾರ್ ಎವರ್ ನವೀನ್ ಕುಮಾರ್ ಫ್ಯಾಷನ್ ಟಾಕ್
ರ‍್ಯಾಂಪ್ ಶೋಗೆ ಅತ್ಯಾಕರ್ಷಕ ಗೌನ್‌ಗಳನ್ನು ಡಿಸೈನ್ ಮಾಡಿ ಫ್ಯಾಷನ್ ಪ್ರಿಯರ ಮೆಚ್ಚುಗೆ ಗಳಿಸಿದ ಸೆಲೆಬ್ರೆಟಿ ಡಿಸೈನರ್ ಫಾರ್ ಎವರ್ ನವೀನ್ ಕುಮಾರ್ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿ, ಈ ಶೋನ ಎರಡು ರೌಂಡ್‌ನಲ್ಲೂ ಡಿಸೈನರ್ ಗೌನ್‌ಗಳನ್ನು ಡಿಸೈನ್ ಮಾಡಿ ಅದರೊಂದಿಗೆ ಜ್ಯುವೆಲರಿ ಮ್ಯಾಚ್ ಮಾಡಿದ್ದು, ಮಾಡೆಲ್‌ಗಳನ್ನು ಆಕರ್ಷಕವಾಗಿ ಬಿಂಬಿಸಲು ಸಾಧ್ಯವಾಯಿತು. ಸುಮಾರು 16 ಮಾಡೆಲ್‌ಗಳು, ಶೋ ಸ್ಟಾಪರ್‌ಗಳು ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು. ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಮೆಚ್ಚುಗೆ ವ್ಯಕ್ತವಾಯಿತು. ಇದು ಸಂತಸ ತಂದಿತು ಎಂದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)