Site icon Vistara News

Doctors Fashion news: ರ‍್ಯಾಂಪ್‌ ವಾಕ್‌ ಮಾಡಿ ಟ್ರೆಂಡ್‌ ಸೆಟ್‌ ಮಾಡಿದ ಬೆಂಗಳೂರಿನ ಡಾಕ್ಟರ್ಸ್!

Doctors of Bangalore set the trend by walking the ramp

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರಿನ ಡಾಕ್ಟರ್ಸ್ ರ‍್ಯಾಂಪ್‌ ವಾಕ್‌ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೌದು. ಪ್ರೊಫೆಷನಲ್‌ ಮಾಡೆಲ್‌ಗಳು ಅಥವಾ ಇತರೇ ಕ್ಷೇತ್ರದವರು ರ‍್ಯಾಂಪ್‌ ವಾಕ್‌ ಮಾಡುವುದು ಸಾಮಾನ್ಯ. ಆದರೆ, ಸದಾ ಬ್ಯುಸಿ ಇರುವ ಡಾಕ್ಟರ್ಸ್ ರ‍್ಯಾಂಪ್‌ ವಾಕ್‌ ಮಾಡುವುದನ್ನು ನೋಡಿದ್ದೀರಾ! ವೈದ್ಯರು ಕ್ಷಣ ಕಾಲ ಮಾಡೆಲ್‌ಗಳಾಗಿ ಫ್ಯಾಷನ್‌ ರ‍್ಯಾಂಪ್‌ ಮೇಲೆ ಕಾಣಿಸಿಕೊಂಡು ಹೆಜ್ಜೆ ಇಟ್ಟು ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಸೆಲೆಬ್ರೆಟಿ ಶೋ ಡೈರೆಕ್ಟರ್‌ ಹಾಗೂ ಮಾಡೆಲ್‌ ಪ್ರಿಯಾ ಪ್ರಶಾಂತ್‌ ನೇತೃತ್ವದಲ್ಲಿ ಮಲಬಾರ್‌ ಜ್ಯುವೆಲರಿ ಶೋರೂಮ್‌ನಲ್ಲಿ ನಡೆದ ಫ್ಯಾಷನ್‌ ಶೋನಲ್ಲಿ, ನಾನಾ ವೈದ್ಯರು ಬಿಂದಾಸ್‌ ಕ್ಯಾಟ್‌ ವಾಕ್‌ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಡಾಕ್ಟರ್ಸ್ ಕನಸನ್ನು ನನಸು ಮಾಡಿದ ಪ್ರಿಯಾ ಪ್ರಶಾಂತ್‌

ನನಗೆ ಗೊತ್ತಿದ್ದಂತೆ, ಬಹಳಷ್ಟು ವೈದ್ಯರಿಗೆ ಸದಾ ತಾವು ಕಾರ್ಯನಿರ್ವಹಿಸುವ ಕ್ಷೇತ್ರದ ಹೊರತಾಗಿ ತಾವು ಕೂಡ ಫ್ಯಾಷನ್‌ ಲೋಕದ ರ‍್ಯಾಂಪ್‌ನಲ್ಲಿ ವಾಕ್‌ ಮಾಡುವ ಆಸೆ ಇರುವುದನ್ನು ಗುರುತಿಸಿದೆ. ಬೇರೆಲ್ಲಾ ಕ್ಷೇತ್ರದವರಿಗೆ ಸಾಧ್ಯವಾದ ವಿಷಯ, ಇವರಿಗೆ ಯಾಕೆ ಆಗುವುದಿಲ್ಲ! ಎಂಬುದನ್ನು ಗುರುತಿಸಿದೆ. ಇದಕ್ಕೆ ಪೂರಕ ಎಂಬಂತೆ, ಕೆಲವು ವೈದ್ಯರು ರ‍್ಯಾಂಪ್‌ ವಾಕ್‌ ಮಾಡಲು ಸಿದ್ಧರಾದರು. ನಂತರ ಅವರಿಗಾಗಿ ಒಂದು ಶೋ ಮಾಡಿದೆವು. ಆದರ್ಶ್ ಜೈನ್‌ ಜತೆ ಸೇರಿ ಈ ಫ್ಯಾಷನ್‌ ಇವೆಂಟ್‌ ಆಯೋಜಿಸಿದೆವು ಎಂದು ಮಾಡೆಲ್‌ ಪ್ರಿಯಾ ಪ್ರಶಾಂತ್‌ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡರು.

ಇದನ್ನೂ ಓದಿ: Star Saree Fashion: ಸ್ಟ್ರೀಟ್‌ ಫ್ಯಾಷನ್‌ಗೂ ಎಂಟ್ರಿ ಕೊಟ್ಟಿದೆ ಇಂಡೊ-ವೆಸ್ಟರ್ನ್ ಸೀರೆ!

ಇದನ್ನೂ ಓದಿ: Star Saree Fashion: ಸ್ಟ್ರೀಟ್‌ ಫ್ಯಾಷನ್‌ಗೂ ಎಂಟ್ರಿ ಕೊಟ್ಟಿದೆ ಇಂಡೊ-ವೆಸ್ಟರ್ನ್ ಸೀರೆ!

ಯಶಸ್ವಿ ರ‍್ಯಾಂಪ್‌ ಕಾರಣಕರ್ತರು

ರೂಪದರ್ಶಿ ಮಧುಬೆಹೇನ್‌, ವಿಎಲ್‌ಸಿಸಿಯವರ ಅನು, ಜ್ಯೋತಿ, ನಿಶಿತಾ ಮೇಕಪ್‌, ಮ್ಯಾಡಿಯವರ ಡಿಸೈನರ್‌ವೇರ್, ಮಲಬಾರ್‌ ಗೋಲ್ಡ್ ಅವರ ಜ್ಯುವೆಲರಿ ಧರಿಸಿದ ವೈದ್ಯರು ಪ್ರೊಫೆಷನಲ್‌ ಮಾಡೆಲ್‌ಗಳಂತೆ ಆದರ್ಶ್ ಜೈನ್‌ ಕೊರಿಯಾಗ್ರಾಫಿಯಲ್ಲಿ ರ‍್ಯಾಂಪ್‌ ಮೇಲೆ ವಾಕ್‌ ಮಾಡಿದರು.

ಮಾಡೆಲ್‌ಗಳಾದ ವೈದ್ಯರು

ಡಾ. ಕೋಮಲ, ಡಾ. ಕೃತಿಕಾ ಭೀಮಪ್ಪ, ಡರ್ಮಲಾಜಿಸ್ಟ್ ಡಾ. ಕವಿತಾ, ಡಾ. ಶ್ವೇತಾ, ರೆಡಿಯಾಲಾಜಿಸ್ಟ್ ಸೀಮಾ, ಡಾ. ವಾಣಿ, ಡಾ, ರಶ್ಮಿ, ಗೈನಾಕಾಲಾಜಿಸ್ಟ್ ಡಾ. ಫಣಿ ಮಾಧುರಿ, ಡಾ. ಸೌಮ್ಯಾ, ಗೈನಾಕಲಾಜಿಸ್ಟ್ ಡಾ. ರಶ್ಮಿ ನಾಯಕ್‌, ಡಾ. ಸೀಮಾ ಜನಾರ್ಧನ್‌, ಡಾ, ವಾಣಿ ಕಗ್ಗಲು, ಡಾ. ಕವಿತಾ ಜಿ. ಮಂಡಲ್‌, ಡಾ. ಶ್ವೇತಾ ಆನಂದ್‌, ರ‍್ಯಾಂಪ್‌ ವಾಕ್‌ ಮಾಡಿ ಸೈ ಎನಿಸಿಕೊಂಡರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version