-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್ ಫೆಸ್ಟಿವ್ ಸೀಸನ್‌ನಲ್ಲಿ ಯುವಕರಿಗೂ ನಾನಾ ಬಗೆಯ (Festive season Mens Fashion) ಎಥ್ನಿಕ್ ಟ್ರೆಡಿಷನಲ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿದ್ದು, ಸೀಸನ್‌ನ ಕಾನ್ಸೆಪ್ಟನ್ನೇ ಬದಲಿಸಿವೆ. ಅದರಲ್ಲೂ ಗ್ರ್ಯಾಂಡ್ ಲುಕ್ ನೀಡುವ ಎಥ್ನಿಕ್‌ವೇರ್‌ಗಳು ಯುವಕರಿಗೆ ಸೆಲೆಬ್ರೆಟಿ ಲುಕ್ ನೀಡಲು ಸಜ್ಜಾಗಿವೆ.
ಪಥಾನಿ ಸೂಟ್ಸ್
ಈ ಫೆಸ್ಟಿವ್ ಸೀಸನ್‌ನಲ್ಲಿ ಬಿಡುಗಡೆಗೊಂಡಿರುವ ಪಥಾನಿ ಕುರ್ತಾ, ಕುರ್ತಾ ಸೆಟ್ ಹಾಗೂ ಪಥಾನಿ ಸೂಟ್‌ಗಳು ಹೊಸ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ನೋಡಲು ಮಾನೋಕ್ರೋಮ್ ಶೇಡ್‌ನಲ್ಲಿದ್ದರೂ ಸಿಕ್ವಿನ್ಸ್ ಹೊಂದಿದವು ಟ್ರೆಂಡಿಯಾಗಿವೆ. ಇವು ಹಬ್ಬದ ಸೆಲೆಬ್ರೇಷನ್‌ಗೆ ಸಾಥ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಸಯ್ಯದ್.
ಈದ್ ಕುರ್ತಾ ಕಮಾಲ್
ಈದ್ ಸಂಭ್ರಮಕ್ಕೆ ಜತೆಯಾಗುವ ಈ ವಿಶೇಷ ಕುರ್ತಾಗಳು ನೋಡಲು ಸಿಂಪಲ್ ಎನಿಸುತ್ತಾವದರೂ ಬೆಳಕಲ್ಲಿ ಮಿನುಗುತ್ತವೆ. ಸಿಕ್ವಿನ್ಸ್, ಮಿರರ್ ಎಂಬ್ರಾಯ್ಡರಿ ಹಾಗೂ ಶೈನಿಂಗ್ ಪ್ರಿಂಟ್ಸ್ ಹೊಂದಿದ ವಿಶೇಷ ವಿನ್ಯಾಸದಲ್ಲಿ ಈ ಸೀಸನ್‌ನಲ್ಲಿ ಬಿಡುಗಡೆಗೊಂಡಿವೆ. ಯುವಕರು ಮೊದಲಿನಂತೆ ಶೈನಿಂಗ್ ಧರಿಸುವುದಿಲ್ಲ ಎಂಬ ಕಾನ್ಸೆಪ್ಟ ಅನ್ನು ಇವು ಮರೆಯಾಗಿಸಿವೆ.
ಲಕ್ನೋಯಿ ನವಾಬಿ ಕುರ್ತಾ ಜಾದೂ
ನವಾಬ್ ಲುಕ್ ನೀಡುವ ಲಕ್ನೋಯಿ ನವಾಬ್ ಡಿಸೈನರ್ ಕುರ್ತಾಗಳು ಇದೀಗ ಯುವಕರ ರಾಯಲ್ ಲುಕ್ ಹೆಚ್ಚಿಸಲು ಎಂಟ್ರಿ ನೀಡಿವೆ. ಮೊದಲೆಲ್ಲಾ ಈ ಕುರ್ತಾಗಳನ್ನು ಕೇವಲ ನವಾಬರು ಧರಿಸುತ್ತಿದ್ದರು. ಇದೀಗ ಸಾಮಾನ್ಯರು ಕೂಡ ಇವನ್ನು ಧರಿಸಿ, ರಾಯಲ್ ಲುಕ್ ಪಡೆಯಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಡಿಜಿಟಲ್ ಪ್ರಿಂಟ್ಸ್, ಚಿಕನ್‌ಕಾರಿ ವರ್ರ್ಕ ಮಾತ್ರವಲ್ಲ, ಲೈಟ್‌ವೇಟ್ ಕಾಟನ್‌ನಲ್ಲೂ ಈ ವಿನ್ಯಾಸದವು ಲಭ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ರಂಜಾನ್ ಮೆನ್ಸ್‌ವೇರ್ ಆಯ್ಕೆ
- ಸೀಸನ್ಗೆ ತಕ್ಕಂತೆ ಹೊಂದುವಂತಹ ಫ್ಯಾಬ್ರಿಕ್ನದ್ದನ್ನೇ ಆಯ್ಕೆ ಮಾಡಬೇಕಾಗುತ್ತದೆ.
- ನವಾಬ್ ಲುಕ್ ನೀಡುವ ಸಿಂಪಲ್ ಡಿಸೈನ್ನವು ಕೂಡ ದೊರೆಯುತ್ತಿವೆ.
- ಎಥ್ನಿಕ್ವೇರ್ ಪ್ರಯೋಗಿಸುವ ಯುವಕರು ಈ ಸೀಸನ್‌ನಲ್ಲಿ ಮೆನ್ಸ್‌ವೇರ್ ಖರೀದಿಸಿ, ಅಗತ್ಯವಿದ್ದಾಗ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)