-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್ ಫೆಸ್ಟಿವ್ ಸೀಸನ್‌ನ ಸಂಭ್ರಮ (Festive Shopping) ಹೆಚ್ಚಿಸುವ ವೆರೈಟಿ ಅಲಂಕಾರಿಕ ಲ್ಯಾಂಟೆರ್ನ್ಸ್‌ಗಳು ಆಗಮಿಸಿವೆ. ನೋಡಲು ಮನಮೋಹಕವೆನಿಸುವ ಹಾಗೂ ಹಬ್ಬದ ವಾತಾವರಣಕ್ಕೆ, ಒಳಾಂಗಣ ವಿನ್ಯಾಸಕ್ಕೆ ಪೂರಕವಾಗುವಂತಹ ನಾನಾ ಬಗೆಯ ಟ್ರೆಂಡಿ ಲ್ಯಾಂಟೆರ್ನ್ಗಳು ಮಾರುಕಟ್ಟೆಗೆ ಆಗಮಿಸಿವೆ.
ಅಲಂಕಾರಿಕ ಲ್ಯಾಂಟೆರ್ನ್ಸ್
ಫೆಸ್ಟಿವ್ ಸೀಸನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಈಗಾಗಲೇ ನಾನಾ ಬಗೆಯ ಲ್ಯಾಂಟೆರ್ನ್ಸ್(ಫನೋಸ್) ಲಗ್ಗೆ ಇಟ್ಟಿದ್ದು, ಒಂದಕ್ಕಿಂತ ಒಂದು ನೋಡಲು ಮನಮೋಹಕವಾಗಿವೆ ಎನ್ನುತ್ತಾರೆ ಇಂಟೀರಿಯರ್ ಡಿಸೈನರ್ಸ್. ನೋಡಲು ಎಲ್ಲಾ ಲ್ಯಾಂಟೆರ್ನ್ಸ್‌ಗಳು ಒಂದೇ ಬಗೆಯದ್ದಾಗಿ ಕಂಡರೂ ನಾನಾ ವಿನ್ಯಾಸ ಹೊಂದಿರುತ್ತವೆ. ಸ್ಟ್ಯಾಂಡಿಂಗ್, ಹ್ಯಾಂಗಿಂಗ್, ವಾಲ್ ಮೌಂಟ್, ಮೊರಾಕಾನ್ ಲ್ಯಾಂಪ್ಸ್ ಸೇರಿದಂತೆ ಟ್ರೆಡಿಷನಲ್ ಲುಕ್ ನೀಡುವಂತವು ಹೆಚ್ಚು ಚಾಲ್ತಿಯಲ್ಲಿವೆ. ಈ ಸೀಸನ್‌ನ ಮನೆಯ ಅಲಂಕಾರಿಕ ವಸ್ತುಗಳಾಗಿ ಇವನ್ನು ಬಳಸಲಾಗುತ್ತಿದೆ. ಇನ್ನು ಈ ಲ್ಯಾಂಟೆರ್ನ್ಸ್‌ಗಳ ಜತೆಗೆ ಅಲಂಕರಿಸಬಹುದಾದ ನಕ್ಷತ್ರಗಳ ಸಾಲು ಹಾಗೂ ಅರ್ಧ ಚಂದ್ರನ ಆಕಾರದ ಹ್ಯಾಂಗಿಂಗ್ ಸ್ಕ್ರೀನ್ ಹಾಗೂ ಮಿನಿ ಲೈಟಿಂಗ್ಸ್ ಸೆಟ್ ರಾಯಲ್ ಕ್ರೀಮ್ ಹಾಗೂ ಮಿಲ್ಕಿ ವೈಟ್ ಶೇಡ್‌ನಲ್ಲಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಅವರು.
ಹೆನ್ನಾ ಆರ್ಟ್ ಲ್ಯಾಂಟೆರ್ನ್ಸ್
ಹೆನ್ನಾ ಆರ್ಟ್ ಶೈಲಿಯ ಆ್ಯಂಟಿಕ್ ಲುಕ್ ನೀಡುವ ಇವು ಮೆಟಲ್ ಹಾಗೂ ನಾನ್ ಮೆಟಲ್ ನಲ್ಲೂ ಲಭ್ಯ. ಮಿನಿ ಸೈಝ್‌ನಿಂದಿಡಿದು ದೊಡ್ಡ ಆಕಾರದವು ದೊರೆಯುತ್ತಿವೆ. ಅದರಲ್ಲೂ ವೈಟ್, ಐವರಿ ಹಾಗೂ ಕ್ರೀಮ್ ಶೇಡ್‌ನವು, ಬರ್ಡ್ ಕೇಝ್‌ನಂತಹ ಡಿಸೈನ್ ಹೊಂದಿರುವಂತವು ಈ ಸೀಸನ್‌ನಲ್ಲಿ ಹೆಚ್ಚು ಪಾಪುಲರ್ ಆಗಿವೆ. ಇದರೊಳಗೆ ಆರ್ಟಿಫೀಷಿಯಲ್ ದೀಪದಂತಹ ಮಿನಿ ಲೈಟಿಂಗ್ ಇರಿಸಿದಲ್ಲಿ ನೋಡಲು ಸುತ್ತಮುತ್ತಲಿನ ವಾತವಾರಣ ಆಕರ್ಷಕವಾಗಿ ಕಾಣಿಸುವುದು ಎನ್ನುತ್ತಾರೆ ಇಂಟಿರಿಯರ್ ಡಿಸೈನರ್ ನಿಶಾ. ಅವರ ಪ್ರಕಾರ, ಈ ಹಬ್ಬದ ಸೀಸನ್‌ನಲ್ಲಿ, ಯಾವುದೇ ಮನೆಯನ್ನೂ ಸಿಂಗರಿಸಬಹುದಾದ ವೆರೈಟಿ ಹೋಮ್ ಡೆಕೋರೇಷನ್ ಐಟಂಗಳು ಇವಾಗಿದೆ ಎನ್ನುತ್ತಾರೆ.
ಇದನ್ನೂ ಓದಿ: Festive Shopping | ದೀಪಾವಳಿ ಶಾಪಿಂಗ್ ಮೇನಿಯಾ
ಮಿನಿ ಸ್ಟಾರ್ ಲಾಂಟೆರ್ನ್ಸ್
ಹಾಲೋಗ್ರಾಫಿಕ್ ಡಿಸೈನ್‌ನ ಈ ಮಿನಿ ಸ್ಟಾರ್ ಲ್ಯಾಂಟೆರ್ನ್‌ಗಳನ್ನು ಮನೆಯ ಯಾವ ಭಾಗದಲ್ಲಾದರೂ ತೂಗು ಹಾಕಬಹುದು. ಬಾಗಿಲಿನ ಮುಂಭಾಗ, ಲಿವಿಂಗ್ ರೂಮ್‌ನ ಕಾರ್ನರ್ ಹೀಗೆ ಕಾರ್ನರ್ ಸೂಟ್ ಆಗುತ್ತವೆ. ಇವು ಆನ್‌ಲೈನ್‌ನಲ್ಲೂ ದೊರೆಯುತ್ತವೆ. ವಿನೂತನ ಬಗೆಯ ಲ್ಯಾಂಟೆರ್ನ್‌ಗಳನ್ನು ಖರೀದಿಸಬೇಕಿದ್ದಲ್ಲಿ ಈ ಫೆಸ್ಟಿವ್ ಸೀಸನ್ ಬೆಸ್ಟ್. ಪ್ರತಿ ಬಾರಿಯೂ ಹೊಸ ಬಗೆಯ ವಿನ್ಯಾಸದವು ದೊರೆಯುತ್ತವೆ. ಇವನ್ನು ಲಿವಿಂಗ್ ರೂಂ ಹಾಗೂ ಡೈನಿಂಗ್ ರೂಂ ಮಧ್ಯೆ ಹಾಕಬಹುದು. ಗೋಡೆಯ ಬದಿಯಲ್ಲೂಸಿಂಗರಿಸಬಹುದು ಎನ್ನುತ್ತಾರೆ ಇಂಟಿರಿಯರ್ ಡಿಸೈನರ್ಸ್.
( ಲೇಖಕಿ : ಫ್ಯಾಷನ್ ಪತ್ರಕರ್ತೆ)