-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ನೇಹಿತರೊಂದಿಗೆ ಫ್ರೆಂಡ್‌ಶಿಪ್ ಡೇ ಸೆಲೆಬ್ರೇಟ್ ಮಾಡುತ್ತಿದ್ದೀರಾ! ಹಾಗಾದಲ್ಲಿ ನಿಮ್ಮ ಸ್ನೇಹದ ಬಳಗಕ್ಕೆ ತಕ್ಕಂತೆ, ಇಲ್ಲವೇ ನಿಮ್ಮ ಹಾಗೂ ನಿಮ್ಮ ಸ್ನೇಹಿತರ ಟೀಮ್‌ನ ಅಭಿರುಚಿಗೆ ಮ್ಯಾಚ್ ಆಗುವಂತೆ ಒಂದಿಷ್ಟು ಡ್ರೆಸ್‌ಕೋಡ್ ಫಾಲೋ ಮಾಡಿ. ಆಕರ್ಷಕವಾಗಿ ಕಾಣಿಸಿಕೊಂಡು ಸೆಲೆಬ್ರೇಟ್ ಮಾಡಿ ಎನ್ನುತ್ತಿದ್ದಾರೆ ಸ್ಟೈಲಿಸ್ಟ್‌ಗಳು.
ಟೀಮ್ ಮೆಂಬರ್ಸ್‌ಗೆ ತಕ್ಕಂತೆ ಪ್ಲಾನ್ ಮಾಡಿ
ಇಬ್ಬರೇ ಸ್ನೇಹಿತರು ಸೆಲೆಬ್ರೇಟ್ ಮಾಡುತ್ತಿದ್ದಲ್ಲಿ ಟ್ವಿನ್ನಿಂಗ್ ಮಾಡಬಹುದು ಅಥವಾ ಒಂದೇ ಶೈಲಿಯ ಸ್ಟೈಲಿಂಗ್ ಮಾಡಬಹುದು. ಇಬ್ಬರಿಗಿಂತ ಹೆಚ್ಚು ಮಂದಿ ಇದ್ದಲ್ಲಿ ಹುಡುಗ-ಹುಡುಗಿಯರ ಗ್ಯಾಂಗ್‌ನಂತಹ ಟೀಮ್ ಇದ್ದಲ್ಲಿ ಟ್ವಿನ್ನಿಂಗ್ ಮಾಡಲು ಕಷ್ಟವಾಗಬಹುದು. ಆಗ ಕನಿಷ್ಠ ಪಕ್ಷ, ಒಂದೇ ಶೇಡ್‌ನ ಡ್ರೆಸ್‌ಗಳನ್ನು ಧರಿಸಬಹುದು.
ಔಟಿಂಗ್ ಆದಲ್ಲಿ ಕ್ಯಾಶುವಲ್‌ಗೆ ಆದ್ಯತೆ ನೀಡಿ
ಸ್ನೇಹಿತರೆಲ್ಲಾ ಔಟಿಂಗ್ ಹೋಗುತ್ತಿದ್ದಲ್ಲಿ, ಆಗ ಸಿಂಪಲ್ ಕ್ಯಾಶುವಲ್ಸ್ ಔಟ್‌ಫಿಟ್ಸ್ ಆಯ್ಕೆ ಮಾಡಿದರೇ ಉತ್ತಮ. ಅದರಲ್ಲೂ ಪಿಕ್ನಿಕ್, ವೀಕೆಂಡ್ ಔಟಿಂಗ್ ಆದಲ್ಲಿ ಯೂನಿಸೆಕ್ಸ್ ಡಿಸೈನ್‌ನ ಆರಾಮ ಏನಿಸುವ ಕಾರ್ಗೋ ಪ್ಯಾಂಟ್ಸ್, ಸ್ಟ್ರೇಟ್ ಕಟ್ ಪ್ಯಾಂಟ್ಸ್ ಹಾಗೂ ಟೀ ಶರ್ಟ್ ಧರಿಸಬಹುದು.
ಇದನ್ನೂ ಓದಿ: Friendship Day : ಫ್ರೆಂಡ್‌ಶಿಪ್ ಡೇ ಬಂದೇಬಿಡ್ತು! ಎಂದು? ಏನಿದರ ವಿಶೇಷ?
ಜೆನ್ ಜಿ ಹುಡುಗ-ಹುಡುಗಿಯರಾದಲ್ಲಿ
ಟೀನೇಜ್ ಹುಡುಗ-ಹುಡುಗಿಯರು ಇಂದು ಟ್ರೆಂಡ್‌ನಲ್ಲಿರುವ ಓವರ್‌ಸೈಝ್ ಡ್ರೆಸ್‌ಗಳಲ್ಲಿ, ಕೆ ಪಾಪ್ ಹೇರ್‌ಸ್ಟೈಲ್‌ಗಳಲ್ಲಿ ಕಾಣಿಸಿಕೊಳ್ಳಬಹುದು. ಇದು ಫಂಕಿ ಲುಕ್ ನೀಡುವುದರೊಂದಿಗೆ ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್ ನೀಡುತ್ತದೆ.
ಕಚೇರಿಯ ಸ್ನೇಹಿತರಾದಲ್ಲಿ ಹೀಗೆ ಮಾಡಿ
ಕಚೇರಿಯ ಸ್ನೇಹಿತರಾದಲ್ಲಿ ಆದಷ್ಟೂ ಫಾರ್ಮಲ್ಸ್ ಲುಕ್ ಉತ್ತಮ. ಎಲ್ಲರೂ ಸಮಾನ ಮನಸ್ಕರಾದಲ್ಲಿ ಡ್ರೆಸ್‌ಕೋಡ್ ಪ್ಲಾನ್ ಮಾಡಿ ಧರಿಸಬಹುದು. ಉದಾಹರಣೆಗೆ., ಹುಡುಗರಾದಲ್ಲಿ ಜೀನ್ಸ್ ಪ್ಯಾಂಟ್-ಟೀ ಶರ್ಟ್, ಲೇಡಿಸ್ ಆದಲ್ಲಿ ಇಂಡೋ-ವೆಸ್ಟರ್ನ್ ಸೀರೆಗಳಲ್ಲಿ ಕಾಣಿಸಿಕೊಳ್ಳುವುದು, ಇಲ್ಲವೇ ಒಂದೇ ಬಗೆಯ ಔಟ್‌ಫಿಟ್‌ನಲ್ಲಿ ಬರುವುದು.
ಗೆಟ್ ಟುಗೆದರ್ ಪಾರ್ಟಿ ಡ್ರೆಸ್‌ಕೋಡ್
ಗೆಟ್ ಟು ಗೆದರ್ ಲಂಚ್ ಪಾರ್ಟಿ, ಬ್ರಂಚ್ ಅಥವಾ ನೈಟ್ ಪಾರ್ಟಿಗಾದಲ್ಲಿ ಯೂನಿಫಾರ್ಮ್‌ನಂತಹ ಔಟ್‌ಫಿಟ್‌ಗಳ ಅಗತ್ಯ ಕಂಡು ಬರುವುದಿಲ್ಲ. ಬದಲಿಗೆ ಕಾಕ್‌ಟೈಲ್ ಔಟ್‌ಫಿಟ್ಸ್ ಆಯ್ಕೆ ಮಾಡಬಹುದು. ಇದು ರಿಲಾಕ್ಸಿಂಗ್‌ಗೆ ಬೆಸ್ಟ್. ಸೀಸನ್‌ಗೆ ತಕ್ಕಂತೆಯೂ ಔಟ್‌ಫಿಟ್ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)