-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ಗೆ ಫ್ರಿಂಜ್ ಕ್ರಾಪ್ ಜಾಕೆಟ್‌ಗಳು ಲಗ್ಗೆ ಇಟ್ಟಿವೆ. ಅದರಲ್ಲೂ ಕಾಲೇಜ್ ಕ್ಯಾಂಪಸ್‌ನಲ್ಲಿ ಇ ಜನರೇಷನ್ ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಡೆನಿಮ್‌ನಲ್ಲಿ ಮಾತ್ರವಲ್ಲ ಕಾರ್ಗೋ ಹಾಗೂ ಇತರೇ ಫ್ಯಾಬ್ರಿಕ್‌ನಲ್ಲೂ ಈ ಜಾಕೆಟ್‌ಗಳು ಎಂಟ್ರಿ ನೀಡಿವೆ.
ಟ್ರೆಂಡಿಯಾದ ವೈವಿಧ್ಯಮಯ ಫ್ರಿಂಜ್ ಕ್ರಾಪ್ ಜಾಕೆಟ್ಸ್
ಕ್ರಾಪ್ ಜಾಕೆಟ್‌ಗಳಿಗೆ ಫ್ರಿಂಜ್ ವಿನ್ಯಾಸವಿರುವಂತಹ ಡಿಸೈನ್‌ಗಳು ಈ ಬಾರಿಯ ಮಾನ್ಸೂನ್‌ಗೆ ಕಾಲಿಟ್ಟಿವೆ. ನೋಡಲು ನೇತಾಡುವ ಥ್ರೆಡ್‌ಗಳಂತೆ ಕಾಣುವ ಫ್ರಿಂಝ್ ವಿನ್ಯಾಸ ಕ್ರಾಪ್ ಜಾಕೆಟ್‌ನ ಕೊನೆಯಲ್ಲಿರುತ್ತವೆ. ಇವು ತಕ್ಷಣಕ್ಕೆ ನೋಡಲು ಟೊರ್ನ್ ಜಾಕೆಟ್‌ನಂತೆಯೂ ಕಾಣಬಹುದು. ಕೊಂಚ ಫಿನಿಶಿಂಗ್ ಇದ್ದಲ್ಲಿ ಇವುಗಳ ರೂಪ ಬದಲಾದಂತೆ ಕಾಣಲೂಬಹುದು.
ಸೀಸನ್‌ನಲ್ಲಿ ಹೆಚ್ಚಿದ ಬೇಡಿಕೆ
ಇದೀಗ ಫ್ರಿಂಜ್ ಜಾಕೆಟ್‌ಗಳಲ್ಲಿ ಡೆನಿಮ್‌ನದ್ದು ಫಾಸ್ಟ್ ಮೂವಿಂಗ್ ಇದೆ. ಇನ್ನು ಕಲರ್ ಜೀನ್ಸ್ ಫ್ಯಾಬ್ರಿಕ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ದಪ್ಪನೆಯ ಫ್ಯಾಬ್ರಿಕ್‌ನ ವೂಲ್ ಮೆಟಿರಿಯಲ್‌ನವು ಬಂದಿವೆ ಎನ್ನುತ್ತಾರೆ ಮಾರಾಟಗಾರರು. ಅವರ ಪ್ರಕಾರ, ಈ ಶೈಲಿಯ ಜಾಕೆಟ್‌ಗಳು ಕಾಲೇಜು ಹುಡುಗಿಯರನ್ನು ಸೆಳೆದಿವೆಯಂತೆ.
ಕಾಲೇಜು ಹುಡುಗಿಯರ ಲೇಯರ್ಡ್ ಲುಕ್‌ಗೆ ಸಾಥ್
ಫ್ರಿಂಜ್ ಜಾಕೆಟ್‌ಗಳು ಕಾಲೇಜು ಹುಡುಗಿಯರ ಲೇಯರ್ಡ್ ಲುಕ್‌ಗೆ ಸಾಥ್ ನೀಡುತ್ತಿವೆ ಎನ್ನಬಹುದು. ಒಳಗೆ ಸ್ಲೀವ್‌ಲೆಸ್, ಹಾಲ್ಟರ್ ನೆಕ್ ಅಥವಾ ಬಾಡಿಕಾನ್ ಟಾಪ್ ಅಥವಾ ಟೀಶರ್ಟ್ ಮೇಲೆ ಇವನ್ನು ಧರಿಸಬಹುದು. ಅಲ್ಲದೇ ಫ್ರಾಕ್ ಮೇಲೂ ಇವನ್ನು ಧರಿಸಬಹುದು. ನೋಡಲು ಡಿಫರೆಂಟ್ ಲುಕ್‌ನೊಂದಿಗೆ ಫಂಕಿ ಲುಕ್ ನೀಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್ಸಿ.
ಇದನ್ನೂ ಓದಿ: Kaftan set Fashion: ಮಳೆಗಾಲದಲ್ಲೂ ಮರೆಯಾಗದ ಫ್ಲೋರಲ್ ಕಫ್ತಾನ್ ಸೆಟ್ ಫ್ಯಾಷನ್
ಫ್ರಿಂಜ್ ಜಾಕೆಟ್ ಪ್ರಿಯರಿಗಾಗಿ ಟಿಪ್ಸ್
- ಫ್ರಿಂಜ್ ಜಾಕೆಟ್ ದಪ್ಪನೆಯ ಫ್ಯಾಬ್ರಿಕ್ನದ್ದಾಗಿರುವುದರಿಂದ ಇನ್ನರ್ ಡ್ರೆಸ್ ಲೈಟ್ವೈಟ್ನದ್ದನ್ನು ಧರಿಸಿ.
- ಕ್ಯಾಶುವಲ್ ಲುಕ್‌ಗೆ ಬೆಸ್ಟ್ ಎನ್ನಬಹುದು.
- ಪರ್ಫೆಕ್ಟ್ ಫಂಕಿ ಲುಕ್ ನೀಡಬಹುದು.
- ಕತ್ತಿಗೆ ಆಕ್ಸೆಸರೀಸ್ ಮಿನಿಮಲ್ ಆಗಿರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)