-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶನ ಹಬ್ಬಕ್ಕೆ ಟ್ರೆಡಿಷನಲ್ ಫ್ಯಾಷನ್ ಟ್ರೆಂಡಿಯಾಗಿದೆ. ಇದಕ್ಕಾಗಿ ಫೆಸ್ಟಿವಲ್ ಫ್ಯಾಷನ್‌ನಲ್ಲಿ ಎಥ್ನಿಕ್ ಲುಕ್ ನೀಡುವ ಫ್ಯಾಷನ್‌ವೇರ್‌ಗಳನ್ನು ಆಯ್ಕೆ ಮಾಡಿ, ಒಂದಿಷ್ಟು ದೇಸಿ ಸ್ಟೈಲ್‌ಸ್ಟೇಟ್‌ಮೆಂಟ್‌ಗಳನ್ನು ತಮ್ಮದಾಗಿಸಿಕೊಳ್ಳಬೇಕು. ಹಬ್ಬದ ಸಾಂಪ್ರದಾಯಿಕ ಫ್ಯಾಷನ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದಿದ್ದಾರೆ ಫ್ಯಾಷನಿಸ್ಟಾಗಳು.
ಹಬ್ಬದ ಫ್ಯಾಷನ್ ಹೀಗೆ ಫಾಲೋ ಮಾಡಿ
ಈ ಬಾರಿಯು ಗೌರಿ-ಗಣೇಶನ ಹಬ್ಬದ ಫ್ಯಾಷನ್‌ನಲ್ಲಿ ಮಹಿಳೆಯರಿಗೆ ಎಂದಿನಂತೆ ಲೆಕ್ಕವಿಲ್ಲದಷ್ಟು ಬಗೆಯ ಟ್ರೆಡಿಷನಲ್ ಲುಕ್ ನೀಡುವ ಸೀರೆಗಳು ಹಾಗೂ ಡಿಸೈನರ್‌ವೇರ್‌ಗಳು ಬಂದಿವೆ. ನಾನಾ ಬಗೆಯ ಆಭರಣಗಳು ಕಾಲಿಟ್ಟಿವೆ. ಮೇಕಪ್ ಕಾನ್ಸೆಪ್ಟ್ ಕೂಡ ಬಿಡುಗಡೆಯಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಹಿಳೆಯರು ತಮ್ಮದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಅನುಸರಿಸಿದರೇ ಸಾಕು. ತಾತ್ಕಾಲಿಕವಾಗಿ ಮಿಕ್ಸ್ ಮ್ಯಾಚ್ ಹಾಗೂ ವೆಸ್ಟೆರ್ನ್ವೇರ್‌ಗಳಿಗೆ ಟಾಟಾ ಹೇಳಿದರೆ ಸಾಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹಬ್ಬಕ್ಕೆ ಮ್ಯಾಚ್ ಆಗುವ ಎಥ್ನಿಕ್ ವೇರ್ಸ್
ಟ್ರೆಡಿಷನಲ್ ಲುಕ್ ನೀಡುವ ರೇಷ್ಮೆ ಸೀರೆ ಇಲ್ಲವೇ ಲಂಗ ದಾವಣಿ, ಹಾಫ್ ಸೀರೆಯನ್ನು ಖರೀದಿಸಿ, ಸೆಲೆಕ್ಟ್ ಮಾಡಿ, ಉಡಿ. ಫ್ಯಾನ್ಸಿ ಸೀರೆ ಅಥವಾ ಇಂಡೋ-ವೆಸ್ಟರ್ನ್ ಸೀರೆ ಇಲ್ಲವೇ ಉಡುಪಿನ ಆಯ್ಕೆ ಸದ್ಯಕ್ಕೆ ಬೇಡ. ಸೀರೆಗೆ ಅಥವಾ ಲಂಗ-ದಾವಣಿಗೆ ಬಾರ್ಡರ್ ಇದ್ದರಂತೂ ನೋಡಲು ಪಕ್ಕಾ ಸಾಂಪ್ರದಾಯಿಕ ಲುಕ್ ನೀಡುವುದು. ಡ್ರೇಪಿಂಗ್ ಕೂಡ ಪ್ರಯೋಗಾತ್ಮಕ ಬೇಡ ಎನ್ನುತ್ತಾರೆ ಸ್ಟೈಲಿಸ್ಟ್ ರಜನಿ.
ಇದನ್ನೂ ಓದಿ: Ganesh Chaturthi Recipes: ಈ 5 ತಿನಿಸುಗಳು ಗಣಪತಿಗೆ ತುಂಬಾ ಇಷ್ಟ; ಹೀಗೆ ಸುಲಭವಾಗಿ ತಯಾರಿಸಿ
ಸಾಂಪ್ರದಾಯಿಕ ಅಭರಣಗಳನ್ನು ಧರಿಸಿ
ಸೀರೆ ಉಟ್ಟ ನಂತರ ಕತ್ತಿಗೆ ನೆಕ್ಲೇಸ್, ಹಾರ, ಜುಮ್ಕಾ, ಹ್ಯಾಂಗಿಂಗ್ಸ್, ಕೈ ತುಂಬಾ ಬಳೆ, ಮಾಂಗ್‌ಟೀಕಾ, ಮಾಟಿ, ಕೆನ್ನೆ ಸರಪಳಿ, ಉಂಗುರ, ಕಾಲ್ಗೆಜ್ಜೆ ಹೀಗೆ ಎಲ್ಲವನ್ನು ಧರಿಸಿ. ಇದು ನಿಮಗೆ ಕಂಪ್ಲೀಟ್ ಸಾಂಪ್ರದಾಯಿಕ ಹೆಣ್ಣಿನ ಲುಕ್ ನೀಡುತ್ತದೆ.
ಜಡೆ ಹೆಣೆದು ಕುಚ್ಚು ಹಾಕಿ
ನಿಮ್ಮ ತಲೆ ಕೂದಲು ಗಿಡ್ಡವಾಗಿರಲಿ, ಉದ್ದವಾಗಿರಲಿ ಜಡೆ ಹೆಣೆದುಕೊಳ್ಳಿ. ಇದೀಗ ಕೃತಕ ಜಡೆಗಳು ಹೇರ್ ಎಕ್ಸ್‌ಟೆನ್ಷನ್‌ಗಳು ದೊರೆಯುತ್ತವೆ. ಇವುಗಳಿಂದ ಉದ್ದನೆಯ ಜಡೆಯನ್ನು ಸೃಷ್ಟಿಸಬಹುದು. ಕುಚ್ಚು ಹಾಕಬಹುದು. ಚವರಿಯನ್ನು ಬಳಸಿಯೂ ಮೊಗ್ಗಿನ ಜಡೆ ಹಾಕಬಹುದು. ಬೇಕಿದ್ದಲ್ಲಿ ಜ್ಯುವೆಲರಿ ಜಡೆಯನ್ನು ಹಾಕಬಹುದು ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ಜಯಾ.
ಗೌರಮ್ಮನಂತಹ ಮೇಕಪ್
ಮೇಕಪ್ ಕೂಡ ನಿಮ್ಮ ಅಟೈರ್‌ಗೆ ಹೊಂದಬೇಕು. ಹಣೆಗೆ ಅಗಲವಾದ ಮ್ಯಾಚಿಂಗ್ ಬಿಂದಿ, ಐ ಮೇಕಪ್, ಕಣ್ಣಿಗೆ ಕಾಡಿಗೆ ಹಿತ ಮಿತವಾಗಿ ಹಚ್ಚಬೇಕು. ಯಾವುದೇ ಕಾರಣಕ್ಕೂ ಮಾದಕ ಎನಿಸುವ ಸ್ಮೋಕಿ ಐ ಮೇಕಪ್ ಆಗಲಿ , ಹೆವ್ವಿ ಓವರ್ ಎಂದೆನಿಸುವ ಮೇಕಪ್ ಆಗಿ ಮಾಡಕೂಡದು ಎಂದು ಸಲಹೆ ನೀಡುತ್ತಾರೆ ಸೌಂದರ್ಯ ತಜ್ಞೆ ರಿಯಾ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)