Site icon Vistara News

Saree Sambhrama : ಬಂಗಾಳಿ ಟ್ರೆಡಿಷನಲ್‌ ಸೀರೆಯಲ್ಲಿ ಉದ್ಯಾನನಗರಿ ನಾರಿಯರ ಸಂಭ್ರಮ

Saree Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಹಿಳೆಯರೆಲ್ಲರೂ ಒಂದೇ ವರ್ಣದ ಯೂನಿಫಾರ್ಮ್​ ರೀತಿ ಕಾಣಿಸುತ್ತಿದ್ದ ರೆಡ್‌ ಮತ್ತು ವೈಟ್‌ ಬಾರ್ಡರ್‌ ಇರುವ ಸಾಂಪ್ರದಾಯಿಕ ಸೀರೆ ಉಟ್ಟು ಥೇಟ್‌ ಬಂಗಾಳದ (Saree Sambhrama) ನಾರಿಯರಂತೆ ಕಾಣಿಸುತ್ತಿದ್ದರು. ಒಬ್ಬೊಬ್ಬರು ತಮ್ಮದೇ ಆದ ರೀತಿಯಲ್ಲಿ ವಾಕ್‌ ಮಾಡಿದರು, ಫೋಸ್‌ ನೀಡಿದರು. ಜೊತೆಗೆ ಬಂಗಾಳದಲ್ಲಿ ಆಚರಿಸುವ ದಾಂಡಿಯಾ ಆಡಿದರು. ಉದ್ಯಾನನಗರಿಯ ನಮಸ್ತೆ ಬಿಟಿಕೆಜಿ ಸಂಸ್ಥೆಯ ಆಶ್ರಯದಲ್ಲಿ ನಡೆದ ಮಾತಾ-ಶಕ್ತಿ ಹೆಸರಿನ ಸೀರೆ ಸಂಭ್ರಮದ ಈ ಕಾರ್ಯಕ್ರಮದಲ್ಲಿ, ಉದ್ಯಾನನಗರಿಯ ಮಹಿಳೆಯರು ಟ್ರೆಡಿಷನಲ್‌ ಬಂಗಾಳಿ ಸೀರೆಯಲ್ಲಿ ಫ್ಯಾಷೆನೆಬಲ್ ಆಗಿ ಕಾಣಿಸಿಕೊಂಡರು.

ಮಾತಾ-ಶಕ್ತಿ ಥೀಮ್‌

ಈ ಹೆಸರು ಸ್ತ್ರೀ ಶಕ್ತಿ ಬಿಂಬಿಸುತ್ತದೆ. ನಾರಿಯ ಶಕ್ತಿಯ ಧ್ಯೋತಕವಾದ ಮಾತಾ-ಶಕ್ತಿ ಹೆಸರು ಕಾರ್ಯಕ್ರಮದ ಥೀಮ್‌ ಆಗಿತ್ತು. ಸಂಸ್ಥೆಯ ೧೩೧ ನೇ ಕಾರ್ಯಕ್ರಮದ ಅಂಗವಾಗಿ ನವರಾತ್ರಿಗೂ ಮುನ್ನವೇ ಆಚರಿಸಲು ಉದ್ದೇಶಿಸಿದ ಸೀರೆ ಸಂಭ್ರಮದ ಕಾರ್ಯಕ್ರಮ ಇದಾಗಿತ್ತು.

ಸೀರೆಯಲ್ಲಿ ದಾಂಡಿಯಾ ಸಂಭ್ರಮ

ಬಂಗಾಳಿ ಮಹಿಳೆಯರ ಸಾಂಪ್ರದಾಯಿಕ ಕೆಂಪು –ಬಿಳಿ ವರ್ಣದ ಸೀರೆಯುಟ್ಟು ಎಲ್ಲರೂ ಸಂಭ್ರಮಿಸಿದ್ದು ಮಾತ್ರವಲ್ಲ, ಎಲ್ಲರೂ ಅಲ್ಲಿನ ದಾಂಡಿಯಾ ನೃತ್ಯವನ್ನು ಮಾಡಿ, ಸಂತಸದಿಂದ ಸಂಭ್ರಮಿಸಿದರು. ಈ ಬಂಗಾಳಿ ಸ್ಟೈಲಿಂಗ್‌ನಲ್ಲಿ ಸಿಂಗರಿಸಿಕೊಳ್ಳುವುದು ಮಾತ್ರವಲ್ಲ, ಭಾರತದ ನಾನಾ ಕಡೆಯಲ್ಲಿ ಹಳ್ಳಿಗಳಲ್ಲಿ ಹ್ಯಾಂಡ್‌ಲೂಮ್‌ ಸೀರೆ ಸಿದ್ಧಪಡಿಸುವ ಕಲಾವಿದರನ್ನು ನೇಯ್ಗೆಗಾರರನ್ನು ಉತ್ತೇಜಿಸುವ ಉದ್ಧೇಶವನ್ನು ಈ ಸಂಸ್ಥೆ ಇರಿಸಿಕೊಂಡಿದ್ದು, ಅವರಿಂದಲೇ ಕೊಂಡುಕೊಳ್ಳುತ್ತಿದೆ ಎಂದು ಸೀರೆ ಸ್ಪೆಷಲಿಸ್ಟ್ ಪಾಯಲ್ ಸೇನ್‌ ತಿಳಿಸಿದ್ದಾರೆ.

ಇದನ್ನೂ ಓದಿ : Hair colouring tips : ಹೇರ್‌ ಕಲರಿಂಗ್‌ ಮಾಡಿಕೊಳ್ಳುವವರು ತಿಳಿದಿರಲೇಬೇಕಾದ 5 ಸಂಗತಿಗಳು

ಸೀರೆಗೆ ಬಂತು ವಿದ್ಯಾ ಬಾಲನ್‌ ಹೆಸರು

ದುರ್ಗಾ ಪೂಜೆಗೆ ವಿಶೇಷವಾಗಿ ಧರಿಸುವ ಈ ಧನಿಯಾಕಾಲಿ ಸೀರೆ, ಇದೀಗ ನಟಿ ವಿದ್ಯಾಬಾಲನ್‌ ಉಟ್ಟು ಕಾಣಿಸಿಕೊಂಡ ನಂತರ, ಇದು ವಿದ್ಯಾ ಬಾಲನ್‌ ಕಾಟನ್‌ ಸೀರೆ ಎಂದು ಖ್ಯಾತಿ ಗಳಿಸಿದೆ. ಬಂಗಾಲದ ಹರಿಪಾಲ್‌ ರಾಜ್‌ಬಾಲಹಟ್‌, ರಸಿದ್‌ಪುರ್‌, ಅಂತ್‌ಪುರ್‌, ರಾಮ್‌ನಗರ್‌, ಗುರಪ್‌ ಪ್ರದೇಶಗಳಲ್ಲಿ ನುರಿತ ಕಲಾವಿದರು ನೇಯುವ ಈ ಸೀರೆಗಳು ಅಲ್ಲಿನ ಸಾಂಪ್ರದಾಯಿಕ ಸೀರೆಗಳಲ್ಲೊಂದಾಗಿದೆ. ಅಲ್ಲಿನ ಪ್ರತಿ ಮಹಿಳೆಯು ಈ ರೀತಿಯ ಒಂದಾದರೂ ಸೀರೆ ಹೊಂದಿರುತ್ತಾರೆ ಎನ್ನುವ ಸೀರೆ ಸ್ಪೆಷಲಿಸ್ಟ್ ಪಾಯಲ್‌ ಸೇನ್‌ ಗುಪ್ತಾ ಹೇಳುವಂತೆ, ಇದೀಗ ಬೆಂಗಳೂರಿಗರು ಕೂಡ ಇಂತಹ ಸೀರೆಗಳತ್ತ ವಾಲತೊಡಗಿದ್ದಾರೆ. ಪರಿಣಾಮ. ಮಹಿಳಾ ಸಂಘಗಳು ಹಾಗೂ ಸಂಘಟನೆಗಳು ಕಾರ್ಯಕ್ರಮಗಳಿಗಾಗಿ ಒಟ್ಟೊಟ್ಟಿಗೆ ಖರೀದಿಸಿ ಕಲಾವಿದರಿಗೆ ನೆರವಾಗುತ್ತಿದ್ದಾರೆ. ಇದು ಪ್ರಶಂಸನೀಯ ಎಂದು ತಿಳಿಸಿದ್ದಾರೆ.

ಚಿತ್ರಗಳು : ನಮಸ್ತೆ ಬಿಟಿಕೆಜಿ

Exit mobile version