-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆ ಮನೆಯ ಮುಹೂರ್ತದಲ್ಲಿ ಟ್ರೆಡಿಷನಲ್ ಔಟ್‌ಫಿಟ್ ಲಿಸ್ಟ್‌ಗೆ ಸೇರುವ ಪಂಚೆ-ಶಲ್ಯ ಧರಿಸಿದವರೇ ಫ್ಯಾಷನಬಲ್ ಆಗಿರುವ ಜಂಟಲ್‌ಮ್ಯಾನ್ ಎನ್ನುತ್ತಾರೆ ಮೆನ್ಸ್ ಸ್ಪೆಷಲ್ ಸ್ಟೈಲಿಸ್ಟ್‌ಗಳು. ಯಾಕೆಂದರೆ, ಸಂಪ್ರದಾಯದಂತೆ ನಡೆಯುವ ಮದುವೆ ಮನೆಗಳಲ್ಲಿ ಸಾಮಾನ್ಯ ಔಟ್‌ಫಿಟ್ ಹಾಗೂ ಸಂಬಂಧಪಡದ ಡ್ರೆಸ್‌ಕೋಡ್‌ಗಳಲ್ಲಿ ಕಾಣಿಸಿಕೊಳ್ಳುವವರು ಖಂಡಿತ ಫ್ಯಾಷನ್ ಪ್ರೇಮಿಗಳಾಗಲು ಸಾಧ್ಯವಿಲ್ಲ ಎನ್ನುತ್ತಾರವರು.
ಇನ್ನು ಇದಕ್ಕೆ ಪೂರಕ ಎಂಬಂತೆ ವೆಡ್ಡಿಂಗ್ ಮೆನ್ಸ್ ಫ್ಯಾಷನ್‌ನಲ್ಲಿ, ಅದರಲ್ಲೂ ಮದುವೆಗಳಲ್ಲಿ ಬೆಳಗ್ಗೆ ವೇಳೆ ನಡೆಯುವ ಮುಹೂರ್ತ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ಟ್ರೆಡಿಷನಲ್ ಪಂಚೆ-ಶಲ್ಯ ಹಾಗೂ ಧೋತಿಗೆ ಮೊದಲಿಗಿಂತ ಆದ್ಯತೆ ಹೆಚ್ಚಾಗಿದೆ. ಮದುಮಗಳ ರೇಷ್ಮೆ ಸೀರೆಗೆ ಆದ್ಯತೆ ನೀಡುವ ರೀತಿಯಲ್ಲೆ ಮದುಮಗ ಧರಿಸುವ ರೇಷ್ಮೆ ಪಂಚೆ ಸೆಟ್‌ಗೂ ಪ್ರಾಮುಖ್ಯತೆ ನೀಡುವುದು ಕಾಮನ್ ಆಗಿದೆ. ಇನ್ನು ಬಹಳಷ್ಟು ಮದುವೆಗಳಲ್ಲಿ, ಮದುಮಗ ಮಾತ್ರವಲ್ಲ, ಸ್ನೇಹಿತರು, ಕುಟುಂಬದವರು ಕೂಡ ಮಹೂರ್ತದ ಸಮಯದಲ್ಲಿ ಈ ಡ್ರೆಸ್‌ಕೋಡ್ ಧರಿಸುವುದು ಇಂದು ಟ್ರೆಂಡಿಯಾಗಿದೆ ಎನ್ನುತ್ತಾರೆ ಟ್ರೆಡಿಷನಲ್ ಸ್ಟೈಲಿಂಗ್ ಎಕ್ಸ್‌ಪಟ್ರ್ಸ್.
ಪಂಚೆ ಸ್ಟೈಲಿಂಗ್
ಇನ್ನು ಇಂದಿನ ಯುವಕರು ಹಾಗೂ ಮದುವೆಗಳಲ್ಲಿ ಭಾಗವಹಿಸುವವರು ಪಂಚೆ ಧರಿಸಲು ಸುಲಭವಾಗುವಂತೆ ನಾನಾ ಬ್ರ್ಯಾಂಡ್‌ಗಳು ವೆಲ್ಕ್ರಾನ್ ಪಂಚೆ ಅಂದರೆ, ಸುತ್ತಿಕೊಂಡು ಅಂಟಿಸುವಂತಹ ಡಿಸೈನ್‌ಗಳಲ್ಲಿ ಬಿಡುಗಡೆಮಾಡಿದೆ. ಇನ್ನು ಇದೀಗ ಮೊಬೈಲ್ ಇರಿಸಬಹುದಾದ 2 ಪಾಕೆಟ್ ಪಂಚೆಗಳು ದೊರೆಯುತ್ತಿವೆ. ಇದು ಸಾಕಷ್ಟು ಯುವಕರನ್ನು ಪಂಚೆ ಧರಿಸುವಂತೆ ಪ್ರೇರೆಪಿಸಿವೆ ಎನ್ನುತ್ತಾರೆ ಮೆನ್ಸ್ ಟ್ರೆಡಿಷನಲ್ ಔಟ್‌ಫಿಟ್ಸ್ ಶೋರೂಮ್‌ವೊಂದರ ಮಾಲೀಕರು.
ಪಂಚೆಯಲ್ಲೂ ಫ್ಯಾಷೆನಬಲ್ ಕಾಣಿಸುವುದು ಹೇಗೆ?
- · ಧರಿಸುವ ಪಂಚೆ ಶಲ್ಯ ಒಂದೇ ಫ್ಯಾಬ್ರಿಕ್ನದ್ದಾಗಿದ್ದಲ್ಲಿ ಉತ್ತಮ.
- · ಎತ್ತರಕ್ಕೆ ತಕ್ಕಂತೆ ಪಂಚೆ ಧರಿಸಿ. ಪಾದಗಳ ಮೇಲಿರಬಾರದು.
- · ಶಲ್ಯ ದುಪಟ್ಟಾದಂತೆ ಉದ್ದವಾಗಿರಬಾರದು.
- · ಬಾರ್ಡರ್ ಪಂಚೆ-ಶಲ್ಯ ಸಾಂಪ್ರದಾಯಿಕ ಲುಕ್ ನೀಡುತ್ತದೆ.
- · ಪೆಂಡೆಂಟ್ ಇರುವ ನೆಕ್ಚೈನ್ ಧರಿಸಬಹುದು
- · ಕಂಪ್ಲೀಟ್ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)