– ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅನಂತ್ ಅಂಬಾನಿ –ರಾಧಿಕಾ ಮರ್ಚೆಂಟ್ (Golden Designer Fashion Wears) ಮದುವೆಯಲ್ಲಿ, ಸೆಲೆಬ್ರೆಟಿಗಳು ಧರಿಸಿದ ಗೋಲ್ಡನ್ ಡಿಸೈನರ್ವೇರ್‌ಗಳು ಇದೀಗ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಟ್ರೆಂಡ್ ಸೆಟ್ ಮಾಡಿವೆ. ರಾಯಲ್ ಲುಕ್ ನೀಡುವ ಈ 3 ಶೈಲಿಯ ಗೋಲ್ಡನ್ ಲುಕ್ ನೀಡಿದ ಡಿಸೈನರ್‌ವೇರ್‌ಗಳ್ಯಾವು? ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.
ಗೋಲ್ಡನ್ ಶೇಡ್ ರೆಡಿ ಸೀರೆ
ಬಂಗಾರ ವರ್ಣದ ರೆಡಿ ಸೀರೆಗಳು ವೆಡ್ಡಿಂಗ್ ಫ್ಯಾಷನ್‌ನಲ್ಲಿ ಸಖತ್ ಟ್ರೆಂಡಿಯಾಗಿವೆ. ಸಾಲಿಡ್ ಶೇಡ್‌ನ ಬಂಗಾರ ವರ್ಣದ ಕಲರ್‌ನ ಡಿಸೈನರ್ ರೆಡಿ ಸೀರೆಗಳು ಇದೀಗ ಸೆಲೆಬ್ರೆಟಿಗಳನ್ನು ಅಲಂಕರಿಸಿದ್ದು, ನೋಡುಗರ ಕಣ್ಮನ ಸೆಳೆದಿವೆ. ಇ, ಕಾಪರ್ ಗೋಲ್ಡ್, ಲೈಟ್ ಗೋಲ್ಡ್, ಕ್ರೀಮ್ ಗೋಲ್ಡನ್ ಸೀರೆಗಳಲ್ಲಿ ಮೆರ್ಮೈಡ್, ಬಾಡಿಕಾನ್ ಡಿಸೈನ್‌ನವು ಮಹಿಳೆಯರಿಗೆ ಹೆಚ್ಚು ಇಷ್ಟವಾಗಿವೆ.
ಗೋಲ್ಡನ್ ಡಿಸೈನರ್ ಘಾಗ್ರ ಗಮ್ಮತ್ತು
ಬಂಗಾರ ವರ್ಣದ ಘಾಗ್ರಗಳು ಕೂಡ ಮದುವೆ ಫ್ಯಾಷನ್‌ನಲ್ಲಿ ಸೇರಿಕೊಂಡಿದ್ದು, ಧರಿಸಿದವರನ್ನು ಮೆರೆಸಿವೆ. ನೋಡಲು ಮೊಗಲರ ರಾಣಿಯರಂತೆ ಬಿಂಬಿಸುವ ಇವು ಇದೀಗ ನಾನಾ ಡಿಸೈನರ್ ಬ್ಲೌಸ್‌ಗಳ ಜೊತೆ ಜೊತೆಯಾಗಿವೆ. ಇನ್ನು ಐವರಿ, ಹಾಫ್ ವೈಟ್, ಕ್ರಿಮೀಶ್ ಗೋಲ್ಡನ್‌ನಂತಹ ನಾನಾ ಮಿಕ್ಸ್ ಮ್ಯಾಚ್ ಗೋಲ್ಡ್ ಥೀಮ್‌ನ ಈ ಘಾಗ್ರಗಳು ಯುವತಿಯರನ್ನುಹೆಚ್ಚಾಗಿ ಸೆಳೆದಿವೆ.
ಆಕರ್ಷಕ ಗೋಲ್ಡ್ ಎಂಬ್ರಾಯ್ಡರಿ ಲೆಹೆಂಗಾ
ರಾಯಲ್ ಲುಕ್ ನೀಡುವ ಗೋಲ್ಡನ್ ಲೆಹೆಂಗಾಗಳು ಲೆಕ್ಕವಿಲ್ಲದಷ್ಟು ಸೆಲೆಬ್ರೆಟಿಗಳನ್ನು ಅಲಂಕರಿಸಿವೆ ಎನ್ನಬಹುದು. ಇನ್ನು, ಗ್ಲಾಮರಸ್ ಬ್ಲೌಸ್, ಟ್ರೆಡಿಷನಲ್ ಬ್ಲೌಸ್, ಜ್ಯುವೆಲ್ ಬ್ಲೌಸ್ ಹೀಗೆ ವೆರೈಟಿ ವಿನ್ಯಾಸದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿವೆ. ಪ್ರತಿ ಲೆಹೆಂಗಾ ಡಿಸೈನ್‌ಗಳು ಅಷ್ಟೇ ! ಊಹೆಗೂ ಮೀರಿದ ಡಿಸೈನ್‌ನಲ್ಲಿ ಕಾಣಿಸಿಕೊಂಡು ಹುಡುಗಿಯರ ಮನ ಗೆದ್ದಿವೆ ಎನ್ನುತ್ತಾರೆ ಡಿಸೈನರ್ ಜಿಶಾ.
- ಗೋಲ್ಡನ್ ಲುಕ್ ಬಯಸುವವರಿಗೆ ಗೋಲ್ಡನ್ ಟಿಪ್ಸ್
- ಗೋಲ್ಡ್ ಡಿಸೈನರ್ವೇರ್ನಲ್ಲಿ ನಿಮಗೆ ಕಂಫರ್ಟಬಲ್ ಎಂದೆನಿಸುವಂತಹ ಡ್ರೆಸ್ಕೋಡ್ ಆಯ್ಕೆ ಮಾಡಿ.
- ರೆಡಿ ಗೋಲ್ಡ್ ಸೀರೆಗಳು ಇಂಡೋ-ವೆಸ್ಟರ್ನ್ ಲುಕ್ ನೀಡುತ್ತವೆ.
- ಗೋಲ್ಡ್ ಲೆಹೆಂಗಾಗಳು ಸಂಗೀತ್, ಮೆಹಂದಿ ಕಾರ್ಯಕ್ರಮಗಳಿಗೆ ಬೆಸ್ಟ್ ಅಪ್ಷನ್.
- ಗೋಲ್ಡ್ ದಾರದ ಹ್ಯಾಂಡ್ ಎಂಬ್ರಾಯ್ಡರಿ ಡಿಸೈನ್ನ ಲೆಹೆಂಗಾಗಳು ಸೆಲೆಬ್ರೆಟಿ ಲುಕ್ ನೀಡುತ್ತವೆ.
- ಘಾಗ್ರಾಗಳು ಸ್ಲಿಮ್ ಇರುವವರಿಗೆ ಬೆಸ್ಟ್.
- ಪ್ಲಂಪಿಯಾಗಿರುವವರು ಆದಷ್ಟೂ ಫ್ಲೋ ಆಗುವಂತಹ ಫ್ಯಾಬ್ರಿಕ್ನ ರೆಡಿ ಸೀರೆ ಚೂಸ್ ಮಾಡುವುದು ಉತ್ತಮ.
(ಲೇಖಕಿ ಫ್ಯಾಷನ್ ಪತ್ರಕರ್ತೆ)