-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾಮಾಜಿಕ ಕಳಕಳಿಯನ್ನು ಉದ್ದೇಶವಾಗಿರಿಸಿಕೊಂಡು ಉದ್ಯಾನನಗರಿಯಲ್ಲಿ (Fashion Pageant news) ಹಮ್ಮಿಕೊಂಡಿದ್ದ ಗೋಲ್ಡನ್ ಫೇಸ್ ಆಫ್ ಸೌತ್ ಇಂಡಿಯಾ 2023 ರ ಆಡಿಷನ್‌ನಲ್ಲಿ ಸುಮಾರು 50 ಕ್ಕೂ ಹೆಚ್ಚು ವಿವಾಹಿತ ಹಾಗೂ ಅವಿವಾಹಿತ ಮಾಡೆಲ್‌ಗಳು ಆತ್ಮಸ್ಥೈರ್ಯದಿಂದ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಸಂಸ್ಥಾಪಕಿ ನಂದಿನಿ ನಾಗರಾಜ್ ಸಾಮಾಜಿಕ ಕಳಕಳಿ
ಆ್ಯಸಿಡ್ ದಾಳಿಗೆ ಒಳಗಾದ ಯುವತಿಯರಿಗೆ ಸ್ಕಿನ್ ಡೊನೇಷನ್ ಮಾಡಬಹುದೆಂಬ ಜಾಗೃತಿ ಮೂಡಿಸುವ ಸಾಮಾಜಿಕ ಕಳಕಳಿಯನ್ನು ಈ ಪೇಜೆಂಟ್ ಮೂಲಕ ವ್ಯಕ್ತಪಡಿಸಲಾಯಿತು. ಇದುವರೆಗೂ ನೇತ್ರದಾನ, ದೇಹದಾನ ಎಲ್ಲದರ ಬಗ್ಗೆ ಜನರಿಗೆ ಅರಿವಿದೆ. ಆದರೆ ಸಾಕಷ್ಟು ಜನರಿಗೆ ನಮ್ಮ ಚರ್ಮವನ್ನು ಕೂಡ ದಾನ ಮಾಡಬಹುದು ಎಂಬುದರ ಬಗ್ಗೆ ತಿಳಿದಿರಲಿಕ್ಕಿಲ್ಲ! ಈ ಬಗ್ಗೆ ಅರಿವು ಇಲ್ಲದಿರುವ ಕಾರಣ ಈ ಕುರಿತ ಯಾವುದೇ ಪ್ರಕ್ರಿಯೆಗಳಿಗೆ ಯಾರೂ ಮುಂದಾಗುವುದಿಲ್ಲ. ಹಾಗಾಗಿ ನಾವು ನಮ್ಮ ಪೇಜೆಂಟ್ ಮೂಲಕ ಚರ್ಮವನ್ನು ದಾನ ಮಾಡಬಹುದು. ಇದನ್ನು ಆ್ಯಸಿಡ್ ದಾಳಿಗೆ ಒಳಗಾದವರಿಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ತಿಳಿಸಿಕೊಡಲು ಪ್ರಯತ್ನಿಸುತ್ತಿದ್ದೇವೆ “ಎಂದು ಪೇಜೆಂಟ್‌ನ ಸಂಸ್ಥಾಪಕಿ ನಂದಿನಿ ನಾಗರಾಜ್ ತಿಳಿಸಿದರು.
ಪೇಜೆಂಟ್‌ನಲ್ಲಿ ಫ್ಯಾಷನ್ ಸೆಲೆಬ್ರೆಟಿಗಳು
ಪೇಜೆಂಟ್‌ನ ಅಡಿಷನ್‌ನಲ್ಲಿ ಸಂಸ್ಥಾಪಕರಾದ ಗೋಪಿನಾಥ್ ರವಿ, ಮ್ಯಾನೇಜಿಂಗ್ ಡೈರೆಕ್ಟರ್ ಸರವಣನ್ ಉಪಸ್ಥಿತರಿದ್ದರು. ಮಿಸೆಸ್ ಸೌತ್ ಇಂಡಿಯಾ (ಐಎಮ್‌ಪಿ)2022 ಸುಚಿತ್ರಾ ವೇಣುಗೋಪಾಲ್, ಮಿಸೆಸ್ ಇಂಡಿಯಾ ವಲ್ರ್ಡ್ 2022 ಜನನಿ ರಮೇಶ್, ಮಿಸೆಸ್ ಇಂಡಿಯಾ ಏಷಿಯಾ ಬಬಿತಾ ಪ್ರಕಾಶ್, ಮಿಸೆಸ್ ವಲ್ರ್ಡ್ ವೈಡ್ 2019 ಶ್ವೇತಾ ನಿರಂಜನ್, ಡಾ. ಶ್ರುತಿ ಸತ್ಯೇಂದ್ರ, ನಟಿ ಹಾಗೂ ಮಾಡೆಲ್ ಉಷಾ ಕಿರಣ್ ಜ್ಯೂರಿ ಟೀಮ್‌ನಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Kids Dungrees Fashion: ಮುದ್ದು ಮಕ್ಕಳ ಫ್ಯಾಷನ್‌ನಲ್ಲಿ 3 ಶೈಲಿಯ ಕ್ಯೂಟ್ ಡಂಗ್ರೀಸ್
ಚೆನ್ನೈನಲ್ಲಿ ಗ್ರ್ಯಾಂಡ್ ಫಿನಾಲೆ
ಸದ್ಯಕ್ಕೆ ಉದ್ಯಾನನಗರಿಯಲ್ಲಿ ನಡೆದಿರುವ ಈ ಅಡಿಷನ್, ಮುಂದಿನ ದಿನಗಳಲ್ಲಿ ಕೊಚ್ಚಿ ಹಾಗೂ ಹೈದರಾಬಾದ್‌ನಲ್ಲೂ ಹಮ್ಮಿಕೊಳ್ಳಲಾಗಿದೆ. ಕೊನೆಯಲ್ಲಿ ಪೇಜೆಂಟ್‌ನ ಮುಖ್ಯಸ್ಥರಾದ ವಿಜಯ್ ಅವರ ಸಮ್ಮುಖದಲ್ಲಿ ಚೆನ್ನೈನಲ್ಲಿ ಫಿನಾಲೆ ನಡೆಯಲಿದೆ. ಇಲ್ಲಿ ವಿಜೇತರಾದವರು ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಪೇಜೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬೈ ಹಾಗೂ ಸಿಂಗಾಪೂರ್‌ನಲ್ಲಿ ಸ್ಪರ್ಧೆ ನಡೆಯುವ ಅಂದಾಜಿದೆ ಎಂದು ಸಂಸ್ಥಾಪಕಿ ನಂದಿನಿ ನಾಗರಾಜ್ ತಿಳಿಸಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)