-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲ ಆರಂಭವಾದರೂ ಕಫ್ತಾನ್ ಸೂಟ್ (Kaftan set Fashion) ಫ್ಯಾಷನ್ ಮಾತ್ರ ಮರೆಯಾಗಿಲ್ಲ! ಫ್ಲೋರಲ್ ಹಾಗೂ ಟ್ರಾಪಿಕಲ್ ವಿನ್ಯಾಸದ ವೈವಿಧ್ಯಮಯ ಈ ಕಫ್ತಾನ್ ಸೆಟ್‌ಗಳು, ಮಹಿಳೆಯರ ವಾರ್ಡ್ರೋಬ್‌ನಲ್ಲಿ ಸ್ಥಾನ ಪಡೆದಿವೆ.
“ಕಳೆದ ಸೀಸನ್‌ನ ಬೇಸಿಗೆಯಲ್ಲಿ ಸೆಮಿ ಎಥ್ನಿಕ್ ಫ್ಯಾಷನ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿದ್ದ, ದೊಗಲೆಯಾಗಿರುವ ಕಫ್ತಾನ್ ಸೆಟ್ ಹಾಗೂ ಸೂಟ್‌ಗಳು, ಸೀಸನ್ ಮುಗಿದರೂ, ಮಳೆಗಾಲ ಬಂದರೂ, ಫ್ಯಾಷನ್‌ನಿಂದ ಮಾತ್ರ ಮರೆಯಾಗುತ್ತಿಲ್ಲ! ಇದಕ್ಕೆ ಸಾಕ್ಷಿ ಎಂಬಂತೆ ನಟಿ ರಕುಲ್ ಪ್ರೀತ್, ಫ್ಲೋರಲ್ ಕಫ್ತಾನ್ ಸೂಟ್ ಧರಿಸಿ ಮತ್ತೊಮ್ಮೆ ಟ್ರೆಂಡಿಯಾಗಿಸಿರುವುದು ಕಾರಣ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅಲ್ಲದೇ, ತೀರಾ ಆರಾಮದಾಯಕ ಔಟ್‌ಫಿಟ್ ಆಗಿರುವುದು ಮತ್ತೊಂದು ಕಾರಣ ಎನ್ನುತ್ತಾರೆ.
ಬಗೆಬಗೆಯ ಕಫ್ತಾನ್ ಸೆಟ್
ಇನ್ನು ಶಾರ್ಟ್ ನೈಟ್ ಕಫ್ತಾನ್ ಸೆಟ್, ಡೀಪ್ ನೆಕ್, ಮ್ಯಾಕ್ಸಿ ಡ್ರೆಸ್, ಒವರ್‌ಸೈಝ್ ಕಫ್ತಾನ್, ಟೀ ಲೆಂಥ್ ಕೋಫ್ತಾನ್, ವೈಬ್ರೆಂಟ್ ವರ್ಣದ ಸಿಲ್ಕ್ ಕಫ್ತಾನ್, ಒಪನ್ ಸ್ಟೈಲ್, ವಿಂಟೇಜ್ ಸ್ಟೈಲ್ ಕಫ್ತಾನ್ ಡ್ರೆಸ್ ಹಾಗೂ ಸೆಟ್‌ಗಳು ಈ ಸೀಸನ್‌ನ ಫ್ಯಾಷನ್‌ನಲ್ಲೂ ಮುಂದುವರಿದಿವೆ.
ಇದನ್ನೂ ಓದಿ: Fashion Pageant Awareness: ಫ್ಯಾಷನ್ ಪೇಜೆಂಟ್‌ನಲ್ಲಿ ಭಾಗವಹಿಸುತ್ತಿದ್ದೀರಾ! ಹೆಸರು ನೊಂದಾಯಿಸುವ ಮುನ್ನಇದನ್ನು ಓದಿ ಬಿಡಿ
ಯಾರಿಗೆ ಯಾವುದು ಬೆಸ್ಟ್?
ಸ್ಲಿಮ್, ಅಥ್ಲೆಟಿಕ್, ಪಿಯರ್ ಶೇಪ್, ಹವರ್ ಗ್ಲಾಸ್ ಶೇಪ್ ಹೊಂದಿರುವವರಿಗೆ ಕಫ್ತಾನ್ ಸೂಟ್ ಅಥವಾ ಸೆಟ್ ಮ್ಯಾಚ್ ಆಗುತ್ತವೆ. ಮ್ಯಾಕ್ಸಿ ಕಫ್ತಾನ್‌ಗಳು ಆಪಲ್ ಶೇಪ್ ಇರುವರಿಗೆ ಮಾತ್ರ ಬೆಸ್ಟ್. ಇವುಗಳನ್ನು ಧರಿಸಿದಾಗ ಟಮ್ಮಿ ಭಾಗ ಹೈಲೈಟಾಗುವುದಿಲ್ಲ.
ಈ ಸೀಸನ್‌ನಲ್ಲೂ ಕಫ್ತಾನ್ ಧರಿಸುವುದನ್ನು ಮುಂದುವರಿಸುವವರು ಹೀಗೆ ಮಾಡಬಹುದು. ಆದಷ್ಟೂ ಫ್ಲೋರಲ್ ಹಾಗೂ ಟ್ರಾಪಿಕಲ್ ಪ್ರಿಂಟ್ಸ್‌ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಫ್ಯಾಮಿಲಿ ಔಟಿಂಗ್, ಮೀಟಿಂಗ್ ಅಥವಾ ಆರಾಮದಾಯಕ ಟ್ರಾವೆಲಿಂಗ್‌ನಲ್ಲಿ ಈ ಔಟ್‌ಫಿಟ್ ಧರಿಸಬಹುದು. ಇವುಗಳ ಪ್ರಿಂಟ್ಸ್ ಹಾಗೂ ಡಿಸೈನ್ಸ್ ಹೆಚ್ಚು ಹೈಲೈಟ್ ಆಗುವುದರಿಂದ ಆಕ್ಸೆಸರೀಸ್‌ಗಳನ್ನು ಧರಿಸುವ ಅಗತ್ಯ ಇರುವುದಿಲ್ಲ. ಹೇರ್‌ಸ್ಟೈಲ್ ಕೂಡ ಸಿಂಪಲ್ ಆಗಿದ್ದಲ್ಲಿ ಉತ್ತಮ. ಇಲ್ಲವಾದಲ್ಲಿ ಎಲ್ಲವೂ ಮೆಸ್ಸಿಯಾಗಿದ್ದಂತೆ ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಜಾಕಿ.
- ಕಫ್ತಾನ್ಗೆ ಲೇಯರ್ಡ್ ಲುಕ್ ಹೊಂದದು. ನೆನಪಿನಲ್ಲಿರಲಿ.
- ಕಫ್ತಾನ್ ದೇಹವನ್ನು ಕವರ್ ಮಾಡುತ್ತದೆ.
- ಗ್ಲಾಮರಸ್ ಲುಕ್ ಕಫ್ತಾನ್ನಿಂದ ಸಾಧ್ಯವಿಲ್ಲ.
- ಸೆಮಿ ಎಥ್ನಿಕ್ ಕೆಟಗರಿಗೆ ಇದು ಸೇರುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)