-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿರುತೆರೆ, ಹಿರಿತೆರೆ, ಬಾಲಿವುಡ್-ಟೆಲಿವುಡ್ ಎಂದೆಲ್ಲಾ ಸದ್ಯಕ್ಕೆ ಬ್ಯುಜಿಯಾಗಿರುವ ನಟ ಹಾಗೂ ಮಾಡೆಲ್ ಕಮಲ್ ಗಿಮಿರೆ ಆಗಾಗ ಉದ್ಯಾನನಗರಿಯಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಫ್ಯಾಷನ್‌ಗೆ (Weekend style) ವಯಸ್ಸಿಲ್ಲ ಎನ್ನುವ ಇವರು ವಿಸ್ತಾರದ ವೀಕೆಂಡ್ ಸ್ಟೈಲ್‌ನಲ್ಲಿ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ.
ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳಲು ವಯಸ್ಸಿನ ಮಿತಿ ಉಂಟೇ?
ಖಂಡಿತ ಇಲ್ಲ! ವಯಸ್ಸು ಎಂಬುದು ಕೇವಲ ನಂಬರ್ ಅಷ್ಟೇ! ನಮ್ಮ ಮನಸ್ಸು ಯಂಗ್ ಆಗಿದ್ದಾಗ ನಾವು ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳಲು ಸಾಧ್ಯ. ನೋಡುಗರಿಗೆ ಆಕರ್ಷಕವಾಗಿ ಕಾಣಿಸಲು ಸಾಧ್ಯ. ಇದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ.
ಸದಾ ಫ್ಯಾಷೆನಬಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವ ನಿಮ್ಮ ಫ್ಯಾಷನ್ ಮಂತ್ರ ಏನು?
ನಮ್ಮನ್ನು ನಾವು ತೋರ್ಪಡಿಸಿಕೊಳ್ಳುವ ಔಟ್‌ಲುಕ್‌ಗೆ ಫ್ಯಾಷನ್ ಎನ್ನಬಹುದು. ನೀವು ಎಲ್ಲಿಯವರಾದರೂ ಆಗಿರಿ, ಎಲ್ಲಿಂದಲಾದರೂ ಬಂದಿರಿ, ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ನಿಮ್ಮ ಉಡುಪಿನಿಂದಲೇ ಅಳೆಯಬಹುದು. ಇನ್ನು ನನ್ನ ವಿಷಯದಲ್ಲಿ ಆತ್ಮವಿಶ್ವಾಸ ನಾನು ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳುವ ಮೊತ್ತ ಮೊದಲ ಹೆಜ್ಜೆ. ಟ್ರೆಂಡಿ ಸೂಟ್ ಹಾಗೂ ಫಾರ್ಮಲ್ಸ್ ಹೆಚ್ಚು ಚೂಸ್ ಮಾಡುತ್ತೇನೆ.
ಬಾಲಿವುಡ್-ಟೆಲಿವುಡ್ ಹೀಗೆ ಎರಡೂ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ನಿಮಗೆ ಅಲ್ಲಿನವರ ಫ್ಯಾಷನ್‌ಗೂ ಇಲ್ಲಿನವರ ಫ್ಯಾಷನ್ಗೂ ಕಂಡು ಬರುವ ವ್ಯತ್ಯಾಸವೇನು?
ಮುಂಬಯಿ ಎಂದಾಕ್ಷಣ ನಟ-ನಟಿಯರೆಲ್ಲರೂ ಗ್ಲಾಮರಸ್‌ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಎಲ್ಲರೂ ಸದಾ ಗ್ಲಾಮರ್ ಆಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಇಲ್ಲಿ ಹಾಗೇನಿಲ್ಲ! ಇಲ್ಲಿಗಿಂತ ಅಲ್ಲಿ ಗ್ಲಾಮರ್ಗೆ ಹೆಚ್ಚು ಪ್ರಾತಿನಿಧ್ಯ ನೀಡುವುದು ಕಂಡು ಬರುತ್ತದೆ.
ನಿಮ್ಮ ಸ್ಟೈಲ್‌ಗೆ ಸಾಥ್ ನೀಡುವ ಫ್ಯಾಷನ್ ಯಾವುದು?
ನಟನೆಯನ್ನು ಹೊರತುಪಡಿಸಿದಲ್ಲಿ, ಸದಾ ಕಂಫರ್ಟಬಲ್ ಔಟ್‌ಫಿಟ್‌ಗೆ ಮಾನ್ಯತೆ ನೀಡುತ್ತೇನೆ. ನಟನೆಯೇ ಬೇರೇ ನಾರ್ಮಲ್ ಲೈಫ್‌ನ ಫ್ಯಾಷನ್ ಬೇರೆ ಅಲ್ಲವೇ!
(ಲೇಖಕಿ ಫ್ಯಾಷನ್ ಪತ್ರಕರ್ತೆ)