-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕರ್ಷಕವಾದ ಹಾಗೂ ಕ್ಯೂಟ್ ಸ್ಲಿಂಗ್ ಬ್ಯಾಗ್‌ಗಳು (Kids Sling Bag Fashion) ಇದೀಗ ಮುದ್ದು ಮಕ್ಕಳ ಹೆಗಲೇರಿವೆ. ಹೌದು. ಇದೀಗ ಮಕ್ಕಳ ಸರದಿ. ನೋಡಲು ಮುದ್ದು ಮುದ್ದಾದ ನಾನಾ ಬಗೆಯ ಕ್ಯೂಟ್ ಸ್ಲಿಂಗ್ ಬ್ಯಾಗ್‌ಗಳು ಕಿಡ್ಸ್ ಆಕ್ಸೆಸರೀಸ್ ಫ್ಯಾಷನ್‌ನಲ್ಲಿ ಬಿಡುಗಡೆಗೊಂಡಿವೆ.
ಟ್ರೆಂಡಿಯಾಗಿರುವ ಸ್ಲಿಂಗ್ ಬ್ಯಾಗ್‌ಗಳು
ಫರ್‌ನ ಬನ್ನಿಸ್ಲಿಂಗ್ ಬ್ಯಾಗ್, ವೈಬ್ರೆಂಟ್ ಶೇಡ್ಸ್‌ನ ಬಾಕ್ಸ್ ಸ್ಲಿಂಗ್ ಬ್ಯಾಗ್, ಮಿಕ್ಕಿ ಮತ್ತು ಮೌಸ್‌ನ ಸಿಲಿಕಾನ್ ಸ್ಲಿಂಗ್ ಬ್ಯಾಗ್ಸ್, ಪಾಪ್ಲಿನ್ ಫರ್, ಯೂನಿಕಾರ್ನ್ ಫರ್, ಜೆಲ್ಲಿ ಸ್ಲಿಂಗ್, ಕಾರ್ಟೂನ್ ಅನಿಮಲ್ಸ್, ಮಿನಿ ಪರ್ಸ್ ಸ್ಲಿಂಗ್, ಕ್ಲಚ್ ಚೈನ್, ಕ್ರಾಸ್‌ಬಾಡಿ ಶೋಲ್ಡರ್ ಸ್ಲಿಂಗ್, ಕೊರಿಯನ್ ಸ್ಲಿಂಗ್ ಬ್ಯಾಗ್ಸ್ ಸೇರಿದಂತೆ ಸಾಕಷ್ಟು ಬಗೆಯವು ಮಾರುಕಟ್ಟೆಗೆ ಕಾಲಿಟ್ಟಿದೆ. ಅವುಗಳಲ್ಲಿ ಇದೀಗ ಮಿಕ್ಕಿ, ಮೌಸ್ ಸ್ಲಿಂಗ್ ಬ್ಯಾಗ್ ಹಾಗೂ ಸಿಲಿಕಾನ್‌ನ ಸ್ಲಿಂಗ್ ಬ್ಯಾಗ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಸುಮಾರು 100ರೂ.ಗಳಿಂದ ಹಿಡಿದು ಸಾವಿರ ರೂ.ಗಳವರೆಗೂ ಲಭ್ಯ. ಲೋಕಲ್ ಬ್ರ್ಯಾಂಡ್‌ನಿಂದ ಹಿಡಿದು ಇಂಟರ್‌ನ್ಯಾಷನಲ್ ಬ್ರ್ಯಾಂಡ್‌ಗಳ ಸ್ಲಿಂಗ್ ಬ್ಯಾಗ್‌ಗಳ ರಿಪ್ಲೀಕಾಗಳು ಇದೀಗ ದೊರೆಯುತ್ತಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.
ಬಾರ್ಬಿ ಸ್ಲಿಂಗ್ ಬ್ಯಾಗ್ ಕ್ರೇಝ್
ಬಾರ್ಬಿ ಸಿನಿಮಾ ರಿಲೀಸ್ ಆದ ನಂತರ ನಾನಾ ಬಗೆಯ ಪಿಂಕ್ ಶೇಡ್‌ನ ಫರ್ ಹಾಗೂ ಸಿಲಿಕಾನ್‌ನ ಸ್ಲಿಂಗ್ ಬ್ಯಾಗ್‌ಗಳು ಪಾಪುಲರ್ ಪಟ್ಟಿಗೆ ಸೇರಿವೆ. ಮಕ್ಕಳ ಫೇವರೆಟ್ ಲಿಸ್ಟ್‌ಗೆ ಸೇರಿವೆ.
ಇದನ್ನೂ ಓದಿ: Pre Wedding Shoot: ಯುನಿಫಾರ್ಮ್‌ನಲ್ಲೇ ಪೊಲೀಸ್ ಅಧಿಕಾರಿಗಳ ಪ್ರಿ ವೆಡ್ಡಿಂಗ್ ಶೂಟ್; ಸಿನಿಮಾ ಸ್ಟೈಲ್ ವಿಡಿಯೊ ಇಲ್ಲಿದೆ
ಬದಲಾದ ಸ್ಲಿಂಗ್ ಬ್ಯಾಗ್‌ಗಳ ರೂಪ
“ಮೊದಲೆಲ್ಲಾ ಸ್ಲಿಂಗ್ ಬ್ಯಾಗ್‌ಗಳು ದೊಡ್ಡ ಸೈಝ್‌ನಲ್ಲಿ ದೊರಕುತ್ತಿದ್ದವು. ಹೆಚ್ಚು ಡಿಸೈನ್ ಇರಲಿಲ್ಲ. ನೋಡಲು ಆಕರ್ಷಕವಾಗಿಯೇನೂ ಕಂಡು ಬರುತ್ತಿರಲಿಲ್ಲ! ಹೆಚ್ಚೆಂದರೇ ಕಾರ್ಟೂನ್ ಚಿತ್ತಾರವಿರುತ್ತಿತ್ತು. ಇಂದು ಹುಡುಗ-ಹುಡುಗಿಯರು ಎಂಬ ಭೇಧ-ಭಾವವಿಲ್ಲದೇ ಎಲ್ಲವೂ ಒಂದೇ ರೀತಿಯಾಗಿರುತ್ತಿದ್ದವು. ಆದರೆ, ಇದೀಗ ಕಾಲ ಬದಲಾಗಿದೆ. ಜನರೇಷನ್ ಕೂಡ ಬದಲಾಗಿದೆ. ಯೂನಿಸೆಕ್ಸ್ ಕಿಡ್ಸ್ ಸ್ಲಿಂಗ್ ಬ್ಯಾಗ್‌ಗಳಿಂದಹಿಡಿದು, ಹುಡುಗ-ಹುಡುಗಿಯರಿಗೆ ಪ್ರತ್ಯೇಕ ಸ್ಲಿಂಗ್ ಬ್ಯಾಗ್‌ಗಳು ದೊರೆಯುತ್ತಿವೆ. ಹುಡುಗರಿಗಾದಲ್ಲಿ ಚೆಸ್ಟ್ ಬ್ಯಾಗ್, ಶೋಲ್ಡರ್ ಬ್ಯಾಗ್‌ನಂತ ಸ್ಲಿಂಗ್ ಬ್ಯಾಗ್ ಸೂಕ್ತ. ಇನ್ನು ಹುಡುಗಿಯರಿಗೆ ಮೇಲಿನವನ್ನು ಹೊರತುಪಡಿಸಿ ಎಲ್ಲಾ ಬಗೆಯವು ಓಕೆ. ಅಷ್ಟೊಂದು ಬಗೆಯವು ಕಾಲಿಟ್ಟಿವೆ” ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.
ಮಕ್ಕಳ ಸ್ಲಿಂಗ್ ಬ್ಯಾಗ್ ಆಯ್ಕೆ ಹೀಗಿರಲಿ
- ಮಕ್ಕಳ ಎತ್ತರಕ್ಕೆ ತಕ್ಕಂತೆ ಸ್ಲಿಂಗ್ ಬ್ಯಾಗ್ ಉದ್ದ ಅಡ್ಜಸ್ಟ್ ಮಾಡಿ.
- ಹುಡುಗರಿಗೆ ಆದಷ್ಟೂ ಶೋಲ್ಡರ್ ಸ್ಲಿಂಗ್ ಬ್ಯಾಗ್ ಸೂಕ್ತ.
- ಸಿಲಿಕಾನ್‌ನ ಕಾರ್ಟೂನ್ನ ಸ್ಲಿಂಗ್ ಬ್ಯಾಗ್ ಮಳೆಯಲ್ಲಿ ಒದ್ದೆಯಾದರೂ ಹಾಳಾಗುವುದಿಲ್ಲ.
- ಮಲ್ಟಿ ಕಲರ್ನದ್ದಾದಲ್ಲಿ ಎಲ್ಲಾ ಉಡುಪುಗಳಿಗೂ ಮ್ಯಾಚ್ ಮಾಡಬಹುದು.
- ಔಟಿಂಗ್ಗಾದಲ್ಲಿ ಬೇಕಾದ ವಸ್ತುಗಳನ್ನು ಇರಿಸಲು ಅವಕಾಶವಿರುವಂತಹದ್ದನ್ನು ಆಯ್ಕೆ ಮಾಡಿ.
- ಸ್ಟೈಲ್ಗಾಗಿ ನಾನಾ ಬಗೆಯ ಪರ್ಸ್ ಶೈಲಿಯವು ಲಭ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)