-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಯೂಟಿ ಲೋಕದಲ್ಲಿ ಇದೀಗ ಬಣ್ಣ ಬಣ್ಣದ ಲಿಪ್ ಕ್ರಯಾನ್ಸ್ ಕಾರುಬಾರು!
ಯಾವುದೇ ಚಿಕ್ಕ ಪರ್ಸ್ ಅಥವಾ ಬ್ಯಾಗ್‌ಗಳಲ್ಲಿ ಅತಿ ಸುಲಭವಾಗಿ ಕ್ಯಾರಿ ಮಾಡಬಹುದಾದ ಈ ಲಿಪ್ ಕ್ರಯಾನ್ಸ್‌ಗಳು, ಲಿಪ್ ಲೈನರ್ ಪೆನ್ಸಿಲ್‌ಗಳಂತೆ ನಾನಾ ವರ್ಣಗಳಲ್ಲಿ ದೊರೆಯುತ್ತಿರುವುದು ಹಾಗೂ ನಿರ್ವಹಣೆ ತೀರಾ ಸುಲಭವಾಗಿರುವುದು ಪಾಪುಲರ್ ಆಗಲು ಕಾರಣ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.
ಏನಿದು ಲಿಪ್ ಕ್ರಯಾನ್ಸ್ ?
ಅಂದಹಾಗೆ, ಇದೀಗ್ ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಗಿರುವ ಕಲರ್‌ಫುಲ್ ಲಿಪ್ ಕ್ರಯಾನ್ಸ್, ನೋಡಲು ದೊಡ್ಡ ಪೆನ್ಸಿಲ್‌ನಂತೆ ಕಾಣುತ್ತವೆ. ಹಚ್ಚುವುದು ಸುಲಭ. ಹಚ್ಚಿದ ನಂತರ ನೋಡಲು ಆಕರ್ಷಕವಾಗಿ ಕಾಣುತ್ತವೆ. ಇದೇ ಕಾರಣದಿಂದಾಗಿ, ಉದ್ಯೋಗಸ್ಥ ಮಹಿಳೆಯರು ಇಲ್ಲವೇ ಕಾರ್ಪೊರೇಟ್ ಕ್ಷೇತ್ರದ ಮಹಿಳೆಯರ ಪರ್ಸ್‌ನಲ್ಲಿ ಜಾಗ ಪಡೆದಿವೆ.
ದುಬಾರಿ ಲಿಪ್ ಕ್ರಯಾನ್ಸ್
ಲಿಪ್‌ಸ್ಟಿಕ್‌ಗಳಿಗಿಂತ ಲಿಪ್ ಕ್ರಯಾನ್ಸ್ ದುಬಾರಿ. ಹೌದು. ಅತ್ಯಂತ ಗುಣಮಟ್ಟದ ಬ್ರ್ಯಾಂಡ್‌ನ ಒಂದು ಲಿಪ್ ಕ್ರಯಾನ್‌ಗೆ ಕನಿಷ್ಠ ಎಂದರೂ 600 ರೂ.ಗಳ ಬೆಲೆ ಇದೆ. ಕೆಲವಂತೂ ಲಿಮಿಟೆಡ್ ಎಡಿಷನ್‌ನಲ್ಲಿ ದೊರೆಯುತ್ತವೆ. ಅದರಲ್ಲೂ ಕ್ಲಾಸಿ ಲುಕ್ ನೀಡುವ ಬಣ್ಣಗಳಲ್ಲಿ ದೊರೆಯುತ್ತವೆ. ಹಾಗಾಗಿ ಇವುಗಳಿಗೆ ಬೆಲೆ ಹೆಚ್ಚು.
ಮ್ಯಾಟ್ ಲಿಪ್ ಕ್ರಯಾನ್
ಇವು ಶೈನಿಂಗ್ ಇಲ್ಲದ ಲಿಪ್ ಬಣ್ಣಗಳು. ಹಚ್ಚಿದಾಗ ಡ್ರೈ ಆಗದೇ ಮ್ಯಾಟ್ ಫಿನಿಶಿಂಗ್ ನೀಡುವ ಇವುಗಳ ಫಿನಿಶಿಂಗ್ ನೋಡಲು ನ್ಯಾಚುರಲ್ ಆಗಿ ಕಾಣುತ್ತವೆ. ಇವು ಉದ್ಯೋಗಸ್ಥ ಮಹಿಳೆಯರಿಗೆ ಪರ್ಫೆಕ್ಟ್ ಸೂಟ್ ಆಗುತ್ತವೆ. ಇನ್ನು, ನ್ಯೂಡ್, ಲೈಟ್ ಪಿಂಕ್, ನ್ಯಾಚುರಲ್ ಆರೆಂಜ್‌ನಂತಹ ಪಾಸ್ಟೆಲ್ ಶೇಡ್‌ನವು ಈ ಮ್ಯಾಟ್ ಲಿಪ್ ಕ್ರಯಾನ್‌ಗಳಲ್ಲಿ ದೊರೆಯುತ್ತವೆ ಎನ್ನುತ್ತಾರೆ ಬ್ರ್ಯಾಂಡ್‌ವೊಂದರ ಮಾರಾಟಗಾರರು.
ಇದನ್ನೂ ಓದಿ: World Cup 2023 : ಕೊರೊನಾ ಇಲ್ಲ; ಆದ್ರೂ ಪಾಕ್- ಕಿವೀಸ್ ವಿಶ್ವ ಕಪ್ ಪಂದ್ಯಕ್ಕೆ ಫ್ಯಾನ್ಸ್ಗೆ ಎಂಟ್ರಿ ಇಲ್ಲ!
ಗ್ಲೊಸಿ ಲಿಪ್ ಕ್ರಯಾನ್ಸ್
ಹಚ್ಚಿದರೆ ತುಟಿಯು ಮಿಂಚುವಂತಹ ಬಣ್ಣಗಳಲ್ಲಿ ಇವು ದೊರಕುತ್ತವೆ. ಅಷ್ಟು ಮಾತ್ರವಲ್ಲ, ತಾರೆಯರ ತುಟಿಗಳಂತೆ ಬಿಂಬಿಸುತ್ತವೆ. ಇವು ಪಿಂಕ್, ರೆಡ್, ಪೀಚ್ ಹೀಗೆ ಲೆಕ್ಕವಿಲ್ಲಷ್ಟು ಕಲರ್‌ನಲ್ಲಿ ದೊರೆಯುತ್ತವೆ. ಆದರೆ, ಗುಲಾಬಿ ಶೇಡ್‌ಗೆ ಮಾತ್ರ ಹೆಚ್ಚು ಬೇಡಿಕೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್.
ಲಿಪ್ ಕ್ರಯಾನ್ಸ್ ಪ್ರಿಯರು ಗಮನಿಸಬೇಕಾದ್ದು
- ಎಕ್ಸ್ಪೈರಿ ಡೇಟ್ ನೋಡಿ ಖರೀದಿಸಿ.
- ಲಿಪ್ ಕ್ರಯಾನ್ಸ್ ದುಬಾರಿ ಹಾಗಾಗಿ ಟ್ರಯಲ್ ಪೀಸ್ ಹಚ್ಚಿ, ನೋಡಿ ಇಷ್ಟವಾದಲ್ಲಿ ಕೊಳ್ಳಿ.
- ಒಬ್ಬರೇ ಬಳಸುವುದಾದಲ್ಲಿ ಕನಿಷ್ಠ ಎಂದರೂ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ.
- ಆನ್ಲೈನ್ ಸೇಲ್ನಲ್ಲಿ ಕೊಂಡಲ್ಲಿ ಕಡಿಮೆ ಬೆಲೆಗೆ ದೊರೆಯುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)