ಬೆಂಗಳೂರು : ಮಣಪುರಂ ಫೈನಾನ್ಸ್ ಆಯೋಜಿಸಿದ್ದ ‘ಮಿಸ್ ಕ್ವೀನ್ ಆಫ್ ಇಂಡಿಯಾ’ (Miss Queen of India) ಸ್ಪರ್ಧೆಯಲ್ಲಿ ಕನ್ನಡತಿ ಸಮೃದ್ದಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕೇರಳದ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮವಾಗಿ ಉಡುಪಿ ಮೂಲದ ಸಮೃದ್ಧಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.
ಉಡುಪಿ ಮೂಲದ ಬಳ್ಳಾರಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ವಿಶ್ವನಾಥ್ ಶೆಟ್ಟಿ ಹಾಗೂ ಮಮತ ಶೆಟ್ಟಿ ಪುತ್ರಿ ಸಮೃದ್ಧಿ ವಿ ಶೆಟ್ಟಿ. ಡೇಟಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಮೃದ್ಧಿ ವಿ ಶೆಟ್ಟಿ ಬ್ಯೂಟಿ ಪ್ಯಾಜೆಂಟ್ ಆಗಿಯೂ ಫ್ಯಾಶನ್ ಮುಂದುವರೆಸಿದ್ದಾರೆ. ಮಿಸ್ ಕ್ವೀನ್ ಆಫ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರುವ ಸಮೃದ್ಧಿ ವಿ ಶೆಟ್ಟಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Fashion News | ಬೆರಗು ಮೂಡಿಸಿದ ಮಿಲಾನ್ ಫ್ಯಾಷನ್ ವೀಕ್‌ನ ಡಿಸೈನರ್‌ವೇರ್ಸ್
ʻʻನಾನು ಡೇಟಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಅದರ ಜತೆಗೆ ಬ್ಯೂಟಿ ಪ್ಯಾಜೆಂಟ್ ಆಗಿಯೂ ಪ್ಯಾಶನ್ ಮುಂದುವರೆಸಿದ್ದೇನೆ. ಇದು ನನ್ನ ಐದನೇ ಬ್ಯೂಟಿ ಪ್ಯಾಜೆಂಟ್. ‘ಮಿಸ್ ಕ್ವೀನ್ ಆಫ್ ಇಂಡಿಯಾ’ದಲ್ಲಿ ಇಂಡಿಯಾವನ್ನು ಪ್ರತಿನಿಧಿಸಿದ್ದೆ. ದೇಶದ ಎಲ್ಲಾ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಕರ್ನಾಟಕದಿಂದ ನಾನು ಆಯ್ಕೆಯಾಗಿದ್ದೆ. ಸೋಮವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಟೈಟಲ್ ವಿನ್ನರ್ ಆಗಿದ್ದೇನೆʼʼ ಎಂದು ಸಮೃದ್ಧಿ ವಿ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.
ಚಿತ್ರರಂಗದ ಎಂಟ್ರಿ ಬಗ್ಗೆ ಮಾತನಾಡಿರುವ ಸಮೃದ್ಧಿ ʻʻಸದ್ಯ್ಕಕ್ಕೆ ಸಿನಿಮಾ ನಟನೆ ಬಗ್ಗೆ ಆಲೋಚನೆ ಇಲ್ಲ. ಒಳ್ಳೆಯ ಸ್ಕ್ರಿಫ್ಟ್ ಬಂದರೆ ಖಂಡಿತ ನಟಿಸುತ್ತೇನೆ. ನಾನು ವರ್ಕ್ ಕೂಡ ಮಾಡುತ್ತಿರುವುದರಿಂದ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿದೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Winter Fashion | ಚುಮು ಚುಮು ಚಳಿಗೆ ಲಗ್ಗೆ ಇಟ್ಟ ಮಫ್ಲರ್ ಫ್ಯಾಷನ್