Site icon Vistara News

Model Fashion: ಸೀಸನ್‌ ಗೆ ತಕ್ಕಂತೆ ಫ್ಯಾಷನ್‌ ಬದಲಿಸುವ ಮಿಸೆಸ್‌ ಬೆಂಗಳೂರು ಟೈಟಲ್‌ ವಿಜೇತೆ ಪ್ರತಿಭಾ ನಟರಾಜ್‌

Model Fashion pratibha nataraj

ಶೀಲಾ ಸಿ. ಶೆಟ್ಟಿ

ಆತ್ಮ ವಿಶ್ವಾಸದಿಂದ ಮುನ್ನಡೆದಲ್ಲಿ ಪ್ರತಿಯೊಂದು ಹೆಜ್ಜೆಯು ಯಶಸ್ಸಿನ ಮೆಟ್ಟಿಲಾಗುತ್ತದೆ ಎನ್ನುವ ಮಾಡೆಲ್‌ ಪ್ರತಿಭಾ ನಟರಾಜ್‌, ಈ ಮೊದಲು ಮಿಸ್‌ ದಾವಣಗೆರೆ ಆಗಿದ್ದವರು. ಪ್ರತಿಷ್ಠಿತ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲೂ ಪಾಲ್ಗೊಂಡು ಮಿಸೆಸ್‌ ಬೆಂಗಳೂರು ಟೈಟಲ್‌ ಗೆದ್ದವರು. ಕಾಲೇಜು ದಿನಗಳಿಂದಲೇ ನಿರೂಪಣೆ ಮಾಡುವುದರೊಂದಿಗೆ ಲೇಖನ, ಕಥೆ, ಕವನ-ಕವಿತೆ ಬರೆಯುವುದು ಸೇರಿದಂತೆ, ಒಂದಲ್ಲ ಒಂದು ಸಾಹಿತ್ಯ ಕುರಿತಂತಹ ಹವ್ಯಾಸದೊಂದಿಗೆ ಫ್ಯಾಷನ್‌ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಬಾರಿಯ ಮಾಡೆಲ್‌ ಲೈಫ್‌ ಕಾಲಂನಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ ಲೈಫ್‌ ಕುರಿತಂತೆ ಮಾತನಾಡಿದ್ದಾರೆ. ಜೊತೆಗೆ ಓದುಗರಿಗೆ ಒಂದಿಷ್ಟು ಸಿಂಪಲ್‌ ಟಿಪ್ಸ್‌ ಕೂಡ ನೀಡಿದ್ದಾರೆ.

ವಿಸ್ತಾರ : ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡಿದ್ದ ನಿಮಗೆ ಫ್ಯಾಷನ್‌ ಕ್ಷೇತ್ರ ಆಕರ್ಷಿಸಿದ್ದು ಹೇಗೆ?

ಪ್ರತಿಭಾ ನಟರಾಜ್‌ : ಸದಾ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುತ್ತಿದ್ದ, ನನಗೆ ಎರಡು ಮಕ್ಕಳಾದ ನಂತರ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಸ್ಪರ್ಧಿಸುವ ಅವಕಾಶ ದೊರೆಯಿತು. ಕುಟುಂಬದವರ ಪ್ರೋತ್ಸಾಹ ಕೂಡ ಇತ್ತು. ಭಾಗವಹಿಸಿದೆ. ಮಿಸೆಸ್‌ ಬೆಂಗಳೂರು ಟೈಟಲ್‌ ಹಾಗೂ ಮಿಸೆಸ್‌ ಕಂಜೆನಿಯಾಲಿಟಿ ಸಬ್‌ಟೈಟಲ್‌ ವಿಜೇತಳಾದೆ

ವಿಸ್ತಾರ ನ್ಯೂಸ್: ಫ್ಯಾಷನ್‌ ಕ್ಷೇತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರತಿಭಾ ನಟರಾಜ್‌ : ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಫ್ಯಾಷನ್‌ ಕ್ಷೇತ್ರವನ್ನು ವಿಸ್ತರಿಸುತ್ತಿದೆ. ಮೊದಲಿನಂತೆ ಕೇವಲ ಅವಿವಾಹಿತರಿಗೆ ಮಾತ್ರ ಈ ಕ್ಷೇತ್ರ ಮೀಸಲು ಎಂಬ ಕಾನ್ಸೆಪ್ಟ್ ಬದಲಾಗಿದೆ. ವಿವಾಹಿತರನ್ನು ಈ ಕ್ಷೇತ್ರ ಸ್ವಾಗತಿಸುತ್ತಿದೆ.

ವಿಸ್ತಾರ ನ್ಯೂಸ್‌: ಫ್ಯಾಷನ್‌ ಕ್ಷೇತ್ರಕ್ಕೆ ಹೆಜ್ಜೆ ಇಡಲು ಬಯಸುವ ವಿವಾಹಿತರಿಗೆ ನೀವು ನೀಡುವ ಸಂದೇಶವೇನು?

ಪ್ರತಿಭಾ ನಟರಾಜ್‌ : ಆದಷ್ಟೂ ಕುಟುಂಬದವರ ಬೆಂಬಲದೊಂದಿಗೆ ಫ್ಯಾಷನ್‌ ಕ್ಷೇತ್ರ ಪ್ರವೇಶಿಸಿ. ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ. ಮದುವೆಯಾದ ನಂತರವೂ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಸದುಪಯೋಗಪಡಿಸಿಕೊಳ್ಳಿ.

ಇದನ್ನೂ ಓದಿ: Father’s Day Fashion: ಅಪ್ಪಂದಿರ ದಿನಕ್ಕೂ ಉಂಟು ಫ್ಯಾಷನ್‌ ಸ್ಟೇಟ್‌ಮೆಂಟ್ಸ್!

ವಿಸ್ತಾರ ನ್ಯೂಸ್‌ : ಸೀಸನ್‌ಗೆ ತಕ್ಕಂತೆ ನಿಮ್ಮಲ್ಲಿ ಬದಲಾಗುವ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳೇನು?

ಪ್ರತಿಭಾ ನಟರಾಜ್‌ : ಸೀಸನ್‌ಗೆ ತಕ್ಕಂತೆ ಫ್ಯಾಷನ್‌ ಫಾಲೋ ಮಾಡುವುದು ಮಾತ್ರವಲ್ಲ, ದೇಸಿ ಹಾಗೂ ವೆಸ್ಟರ್ನ್ ಎರಡೂ ಬಗೆಯ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೂ ಸೈ ಹೇಳುತ್ತೇನೆ.

ವಿಸ್ತಾರ ನ್ಯೂಸ್‌: ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಬದಲಾಗುವುದು ಹೇಗೆ? 3 ಸಿಂಪಲ್‌ ಸಲಹೆ ನೀಡಿ?

ಪ್ರತಿಭಾ ನಟರಾಜ್‌ : ಬೇಸಿಗೆ ಮುಗಿದು ಈಗಾಗಲೇ ಮಾನ್ಸೂನ್‌ಗೆ ಕಾಲಿಟ್ಟಾಗಿದೆ. ಹಾಗಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ.

  1. ಬ್ಯೂಟಿಗಾಗಿ ಕ್ಲೆನ್ಸಿಂಗ್‌, ಟೊನಿಂಗ್‌ ಹಾಗೂ ಮಾಯಿಶ್ಚರೈಸಿಂಗ್‌ ಮಾಡುವುದು ಅಗತ್ಯ.
  2. ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌ ಈ ಸೀಸನ್‌ಗೆ ಬೆಸ್ಟ್ ಅಪ್ಷನ್‌.
  3. ಸ್ಟೈಲಿಶ್ ಆಗಿ ಕಾಣಿಸಲು ಲೈಟ್‌ವೈಟ್‌ ಉಡುಗೆಗಳ ಲೇಯರಿಂಗ್‌ ಮಾಡಬಹುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version